ಚೇತನ್ ಭಾರತ ಬಿಟ್ಟು ಅಮೇರಿಕಗೆ ಹೋಗಬೇಕು, ಇಲ್ಲವಾದ್ರೆ ನಾನೇ ಕಳಿಸ್ತೀನಿ : ಯುವ ನಿರ್ದೇಶಕ ಕೀರ್ತನ್ ಶೆಟ್ಟಿ

Public TV
2 Min Read

ಬೆಂಗಳೂರು: ಕಿರಿಕ್ ಹುಡ್ಗ ಕೀರ್ತನ್ ಶೆಟ್ಟಿ ತಾವು ಮಾಡುತ್ತಿರುವ ಸಿನಿಮಾ ಕುರಿತು ಹೇಳುತ್ತಾ ನಟ ಚೇತನ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಆ ದಿನಗಳು ಚೇತನ್ ಭಾರತ ಬಿಟ್ಟು ಅಮೆರಿಕಗೆ ಹೋಗಬೇಕು. ಇಲ್ಲವಾದ್ರೆ ನಾನೇ ಅವರನ್ನು ಕಳಿಸ್ತೀನಿ ಎಂದು ಹೇಳಿದ್ದಾರೆ. ತಮ್ಮ ಫೇಸ್‍ಬುಕ್ ಖಾತೆಯಲ್ಲಿ ‘ಮೀಟೂ ವಿಥ್ ಫೈಟೂ’ ಎಂಬ ಸಿನಿಮಾದ ಬಗ್ಗೆ ಬರೆದುಕೊಂಡಿರುವ ಕೀರ್ತನ್ ಶೆಟ್ಟಿ ಚೇತನ್ ವಿರುದ್ಧ ಹರಿಹಾಯ್ದಿದ್ದಾರೆ.

ಪೋಸ್ಟ್ ವೊಂದರಲ್ಲಿ ನಾನು ಗಂಡಸರ ಪರವಾಗಿ ಇದ್ದೇನೆ. ಇತ್ತಿಚಿಗೆ ಚಿತ್ರ ರಂಗದಲ್ಲಿ ಅನೇಕ ನಟಿಯರು ಮೀಟೂ ದುರ್ಬಳಕೆ ಮಾಡಿಕೊಳ್ತಿದ್ದಾರೆ. ನನ್ನ ಚಿತ್ರ ವಿವಾದ ಸೃಷ್ಟಿಸುತ್ತೆ ಅಂತ ನಂಗೂ ಗೊತ್ತು. ಆದ್ರೆ ಈ ಚಿತ್ರ ನಮ್ಮ ಚಿತ್ರರಂಗದ ಯಾವುದೇ ಗಂಡಸರಿಗೂ ಸಂಬಂಧ ಪಟ್ಟಿದ್ದಲ್ಲ. ನಮ್ಮ ‘ಮೀಟೂ ವಿಥ್ ಫೈಟೂ’ ನಾಯಕಿ ಪ್ರಧಾನವಾಗಿರುವ ಸಿನಿಮಾ. ಕೆಲವು ಧಿಮಾಕು ಮಾಡುವ ನಟಿಯರಿಂದ ಚಿತ್ರರಂಗ ಹಾಳಾಗುತ್ತಿದೆ. ಹಿರಿಯ ನಟರ ಹೆಸರನ್ನು ಕೆಡಿಸಲು ಕೆಲವು ನಟಿಯರು ಮೀಟೂವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಅಂತವರು ನಮ್ಮ ಚಿತ್ರ ನೋಡಿಯಾದರೂ ಬುದ್ಧಿ ಕಲಿತಾರ ನೋಡಬೇಕು. ಆದರೆ ನಾನು ಒಳ್ಳೆ ಚಿತ್ರವನ್ನು ಮಾಡಿಲ್ಲ ಅಂದ್ರೆ ಹುಡ್ಕೊಂಡು ಬಂದು ಹೊಡಿರಿ ಅಂತ ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಷ್ಟೆ ಅಲ್ಲದೆ ಚೇತನ್ ವಿರುದ್ಧ ಫೇಸ್‍ಬುಕ್‍ನಲ್ಲಿ ಇನ್ನೊಂದು ಪೋಸ್ಟ್ ಮಾಡಿರುವ ಕೀರ್ತನ್ ಶೆಟ್ಟಿ, ಕರ್ನಾಟಕದ ಅನ್ನ ತಿಂತೀಯ, ಕಾವೇರಿ ನೀರು ಕುಡಿತೀಯಾ ತಾನೇ ಮತ್ತೇಕೆ ಬಾಗ್ಲಾದೇಶದವರಿಗೆ ಸರ್ಪೋಟ್ ಮಾಡ್ತೀಯಾ. ಮೊನ್ನೆ ಯಾವುದೋ ಕೇರಳ ಕುಟ್ಟಿಗೆ ಸರ್ಪೋಟ್ ಮಾಡಿ ಒಳ್ಳೆ ಪ್ರಚಾರ ಸಿಕ್ಕಿದೆ. ಆದ್ರೆ ಇವಾಗ ಸಿಗಲ್ಲ. ಸುಮ್ಮನೆ ಕನ್ನಡದವರಿಗೆ ಸರ್ಪೋಟ್ ಮಾಡು. ಇಲ್ಲ ಅಂದ್ರೆ ಪಕ್ಕಾ ಅಮೇರಿಕಕ್ಕೆ ಬೆತ್ತಲೆಯಾಗಿ ಓಡಿಸ್ತೀನಿ. ದಯಮಾಡಿ ಕನ್ನಡಕ್ಕೆ ಬೆಂಬಲ ಕೊಡು ಗುರುವೇ. ನಿನ್ನಂತ ದೇಶ ದ್ರೋಹಿಗಳಿಗೆ ನನ್ನ ಸಿನಿಮಾದಲ್ಲಿ ಹೇಗೆ ತೋರಿಸ್ತೀನಿ ನೋಡು. ನಿನ್ನನ್ನು ಕರ್ನಾಟಕದಲ್ಲಿ ರೋಡ್‍ಗೆ ಬರೋವಾಗೆ ಮಾಡ್ತೀನಿ ಎಂದು ಬರೆದು ಕಿಡಿಕಾರಿದ್ದಾರೆ.

ಈ ಹಿಂದೆ ಇದೇ ಕೀರ್ತನ್ ಶೆಟ್ಟಿ ನಟಿ ಸಂಯುಕ್ತ ಹೆಗಡೆ ಕನ್ನಡದ ಸನ್ನಿ ಲಿಯೋನ್, ಆಕೆಗೆ ಎಣ್ಣೆ-ಸಿಗರೇಟು, ಗಾಂಜಾ ಎಲ್ಲಾ ದುಶ್ಚಟವಿದೆ ಎಂಬುದಾಗಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಮೀಟೂ ವಿಥ್ ಫೈಟೂ ಎಂಬ ಚಿತ್ರ ಮಾಡುತ್ತಿರುವ ಮೂಲಕ ಮತ್ತೊಂದು ವಿವಾದವನ್ನು ಎಳೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *