ಈವರೆಗೂ ಸಾಕಷ್ಟು ಸ್ಟಾರ್ ನಟರ ಸಿನಿಮಾಗಳನ್ನು ನಿರ್ದೇಶನ ಮಾಡೋ ಮೂಲಕ ಸ್ಟಾರ್ ನಿರ್ದೇಶಕ ಎಂದೇ ಹೆಸರಾಗಿರುವವರು ದಿನೇಶ್ ಬಾಬು. ಅವರು ಈ ಹಿಂದೆ ಪ್ರಿಯಾಂಕಾ ಎಂಬ ಚಿತ್ರ ನಿರ್ದೇಶನ ಮಾಡಿದ ನಂತರ ತೆಲುಗಿನತ್ತ ಪಯಣ ಬೆಳೆಸಿದ್ದರು. ಅಲ್ಲೊಂದು ಚಿತ್ರ ನಿರ್ದೇಶನ ಮಾಡಿ ಮತ್ತೆ ಕನ್ನಡಕ್ಕೆ ವಾಪಾಸಾಗಿರೋ ದಿನೇಶ್ ಬಾಬು ಇದೀಗ ಹಗಲುಗನಸು ಕಾಣಲಾರಂಭಿಸಿದ್ದಾರೆ.
ತಮ್ಮ ಚಿತ್ರಗಳಿಗೆ ಭಿನ್ನವಾದ ಶೀರ್ಷಿಕೆಯನ್ನೇ ಇಡುತ್ತಾ ಬಂದಿರೋ ದಿನೇಶ್ ಬಾಬು ತಮ್ಮ ಹೊಸಾ ಚಿತ್ರಕ್ಕೆ ‘ಹಗಲುಗನಸು’ ಎಂಬ ಶೀರ್ಷಿಕೆ ಇಟ್ಟಿದ್ದಾರೆ. ಈ ಚಿತ್ರದ ಧ್ವನಿಸುರುಳಿ ಕೂಡಾ ಇದೀಗ ಬಿಡುಗಡೆಯಾಗಿದೆ.
ಈ ಹಿಂದೆ ದಿನೇಶ್ ಬಾಬು ಅವರು ಇದು ಸಾಧ್ಯ ಎಂಬ ಚಿತ್ರದ ಮೂಲಕ ಹೊಸಾ ಸಾಧ್ಯತೆಯೊಂದನ್ನು ತೆರೆದಿಟ್ಟಿದ್ದರು. ಇದೀಗ ಅದೇ ದಾರಿಯಲ್ಲಿ ಹಗಲುಗನಸು ಚಿತ್ರವನ್ನು ನಿರ್ದೇಶನ ಮಾಡಿರೋದಾಗಿ ಹೇಳಿಕೊಂಡಿದ್ದಾರೆ. ಇದೊಂದು ಥ್ರಿಲ್ಲರ್ ಕಥನ ಎಂಬ ವಿಚಾರವನ್ನು ಜಾಹೀರು ಮಾಡಿದ್ದಾರೆ.
ಈ ಚಿತ್ರದಲ್ಲಿ ನೀನಾಸಂ ಅಶ್ವತ್ಥ್, ಮಾಸ್ಟರ್ ಆನಂದ್, ಅಶ್ವಿನ್ ಹಾಸನ್ ನಟಿಸಿದ್ದಾರೆ. ಸನಿಹಾ ಯಾದವ್ ನಾಯಕಿಯಾಗಿ ನಟಿಸಿದ್ದಾರೆ. ಸದ್ದೇ ಇಲ್ಲದೆ ಚಿತ್ರೀಕರಣ ಮುಗಿಸಿಕೊಂಡಿರೋ ಈ ಚಿತ್ರವೀಗ ಹಾಡುಗಳ ಮೂಲಕ ಸದ್ದು ಮಾಡುತ್ತಿದೆ. ಇದರಿಂದ ದಿನೇಶ್ ಬಾಬು ಅವರಿಗೆ ಮತ್ತೊಂದು ಗೆಲುವು ಸಾಧ್ಯವಾಗುತ್ತಾ ಎಂಬುದು ಸದ್ಯದ ಕುತೂಹಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv