ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಮೋಸ

Public TV
1 Min Read

ಬೆಂಗಳೂರು: ಸಹನಟಿಯನ್ನು ಮೇರು ನಟಿಯಾಗಿ ಮಾಡುವುದಾಗಿ ಸಹ ನಿರ್ದೇಶಕನೊಬ್ಬ ಮೋಸ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಪ್ರಭು ಮೋಸ ಮಾಡಿದ ಸಹನಿರ್ದೇಶಕ. ಮೋಸ ಹೋದ ಯುವತಿ ಧಾರಾವಾಹಿಗಳಲ್ಲಿ ಸಹ ನಟಿಯಾಗಿ ನಟನೆ ಮಾಡಿಕೊಂಡಿದ್ದಳು. ಧಾರಾವಾಹಿ ನಟನೆ ಮಾಡುವಾಗ ಸಹ ನಿರ್ದೇಶಕನಾಗಿ ಪ್ರಭು ಪರಿಚಯನಾಗಿದ್ದು, ಆತನೇ ಯುವತಿಗೆ ಮೋಸ ಮಾಡಿ ತಲೆಮರಿಸಿಕೊಂಡಿದ್ದಾನೆ.

ಧಾರವಾಹಿಗಳಲ್ಲಿ ಸಹನಟಿಯಾಗಿ ನಟಿಸುತ್ತಿದ್ದ ಯುವತಿಗೆ, ಸ್ಯಾಂಡಲ್‍ವುಡ್‍ನ ಮೇರು ನಟಿಯಾಗಿ ಮಾಡುತ್ತೀನಿ. ಕಡಿಮೆ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡೋದಕ್ಕೆ ಅವಕಾಶ ಮಾಡಿಕೊಡುವುದಾಗಿ ನಂಬಿಸಿದ್ದಾನೆ. ಜೊತೆಗೆ ಒಳ್ಳೆಯ ಸಿನಿಮಾಗಳಲ್ಲಿ ಅವಕಾಶ ಮಾಡಿಕೊಡುತ್ತೀನಿ ನಂಬಿ ಹಣ ಹಾಗೂ ಚಿನ್ನಾಭರಣ ಪಡೆದು ಮೋಸ ಮಾಡಿ ಸಹ ನಿರ್ದೇಶಕ ಪ್ರಭು ಎಸ್ಕೇಪ್ ಆಗಿದ್ದಾನೆ. ಪ್ರಭು ನನ್ನ ರೀತಿಯಲ್ಲಿ ಹಲವರಿಗೆ ಅಮಿಷಗಳ್ನೊಡ್ಡಿ ಮೋಸ ಮಾಡಿದ್ದಾನೆಂದು ಸಹನಟಿ ಆರೋಪಿಸಿದ್ದಾಳೆ.

ಯುವತಿ ಜೋಕಾಲಿ, ತಂಗಾಳಿ, ಸೇರಿ ಹಲವು ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾಳೆ. ತನಗಾದ ಅನ್ಯಾಯ ಹಾಗೂ ವಂಚನೆ ಬಗ್ಗೆ ಯುವತಿ ಸಹ ನಿರ್ದೇಶಕನೆಂದು ನಂಬಿಸಿದ್ದ ಪ್ರಭು ವಿರುದ್ಧ ಯುವತಿ ಕೋತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾಳೆ. ಪೊಲೀಸರು ವಂಚಕ ಪ್ರಭುವನ್ನು ಬಂಧಿಸುವ ಕೆಲಸ ಮಾಡುತ್ತಿಲ್ಲವೆಂದು ಆರೋಪಿಸುತ್ತಿದ್ದಾರೆ. ಮೇರು ನಟಿ ಆಗುವಾಸೆಗೆ ಯುವತಿ ತನ್ನ ಬಳಿ ಇದ್ದ ಒಡವೆ ಹಾಗೂ ಹಣವನ್ನು ಕೊಟ್ಟು ಕೈ ಸುಟ್ಟಿಕೊಂಡಿದ್ದು ಕಳೆದುಕೊಂಡ ಹಣ ಒಡವೆಗಾಗಿ ಪರಿತಪಿಸುತ್ತಿದ್ದಾಳೆ.

Share This Article
Leave a Comment

Leave a Reply

Your email address will not be published. Required fields are marked *