‘ಬ್ರಹ್ಮಾಸ್ತ್ರ’ ಚಿತ್ರದ ನಿರ್ದೇಶಕ ಅಯಾನ್‌ ತಂದೆ ದೇಬ್ ಮುಖರ್ಜಿ ನಿಧನ

Public TV
1 Min Read

ಬಾಲಿವುಡ್ ಹಿರಿಯ ನಟ ದೇಬ್ ಮುಖರ್ಜಿ (Deb Mukherjee) ನಿಧನರಾಗಿದ್ದಾರೆ. 83ನೇ ವರ್ಷದ ದೇಬ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಇಂದು (ಮಾ.14) ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಇದನ್ನೂ ಓದಿ:ಪುನೀತ್‌ ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ – ಅಪ್ಪು ರೀ-ರಿಲೀಸ್‌ ಬಗ್ಗೆ ಅನುಶ್ರೀ ಮಾತು

‘ಬ್ರಹ್ಮಾಸ್ತ್ರ’ ನಿರ್ದೇಶಕ ಅಯಾನ್ ಮುಖರ್ಜಿ (Ayan Mukherjee) ಅವರ ತಂದೆ ದೇಬ್ ಮುಖರ್ಜಿ ನಿವಾಸಕ್ಕೆ ಚಿತ್ರರಂಗದ ನಟ, ನಟಿಯರು ಆಗಮಿಸುತ್ತಿದ್ದಾರೆ. ನಟ ದೇಬ್ ಮುಖರ್ಜಿಯ ಅಂತಿಮ ದರ್ಶನ ಪಡೆಯುತ್ತಿದ್ದು, ಇಂದು ಸಂಜೆಯೇ ಮುಂಬೈನಲ್ಲಿ ನಟನ ಅಂತಿಮ ಸಂಸ್ಕಾರ ನಡೆಯಲಿದೆ.

ಅಂದಹಾಗೆ, ಅಭಿನೇತ್ರಿ, ಏಕ್ ಬಾರ್ ಮುಸ್ಕುರಾದೊ, ಆಸೂ ಬನ್ ಗಯೇ ಪೂಲ್ ಇನ್ನೂ ಕೆಲವು ಸಿನಿಮಾಗಳಲ್ಲಿ ದೇಬ್ ನಟಿಸಿದ್ದಾರೆ. 2009ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ಕೊನೆಯ ಸಿನಿಮಾ ಆಗಿತ್ತು. ಆ ನಂತರ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡರು.

Share This Article