ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

By
1 Min Read

ಮಿಳು ನಟ, ನಿರ್ದೇಶಕ ಮಾರಿಮುತ್ತು (Marimuthu) ಇಂದು ಬೆಳಿಗ್ಗೆ (ಸೆ.8) ಹೃದಯಾಘಾತದಿಂದ ನಿಧನರಾಗಿದ್ದಾರೆ. ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದಲ್ಲಿ ಪೆರುಮಾಳ್ ಪಾತ್ರದಲ್ಲಿ ನಟಿಸಿದ್ದ ಮಾರಿಮುತ್ತು ವಿಧಿವಶರಾಗಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ನತ್ತ ರಿಷಬ್ ಶೆಟ್ಟಿ- ಐತಿಹಾಸಿಕ ಪಾತ್ರದಲ್ಲಿ ಕಾಂತಾರ ಶಿವ

ಸಿನಿಮಾವೊಂದರ ಡಬ್ಬಿಂಗ್ ಮಾಡುವಾಗ ಇಂದು ಬೆಳಿಗ್ಗೆ 8:30ಕ್ಕೆ ಹೃದಯಾಘಾತ(Heart Attack)  ಸಂಭವಿಸಿದೆ. ಸ್ಥಳದಲ್ಲಿಯೇ ನಟ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 56 ವರ್ಷದ ಹಿರಿಯ ನಟ ಮಾರಿಮುತ್ತು ನಿಧನಕ್ಕೆ ಚಿತ್ರರಂಗ ಸಂತಾಪ ಸೂಚಿಸಿದೆ.

ಮಾರಿಮುತ್ತು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ನಿಧನ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಸಾಕಷ್ಟು ಸೀರಿಯಲ್, ಮತ್ತು ಸಿನಿಮಾಗಳಲ್ಲಿ ಮಾರಿಮುತ್ತು ನಟಿಸಿದ್ದರು. ನಿರ್ದೇಶಕರಾಗಿ ಕೂಡ ಕಾರ್ಯ ನಿರ್ವಹಿಸಿದ್ದರು. ಇತ್ತೀಚಿನ ಜೈಲರ್ ಸಿನಿಮಾದಲ್ಲಿ ಮಾರಿಮುತ್ತು ನಟಿಸಿದ ಪಾತ್ರ ಜನಮನ್ನಣೆ ಪಡೆದಿತ್ತು.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್