ಬೆಂಗಳೂರು: ಪವರ್ ಶೇರಿಂಗ್ ಜಟಾಪಟಿ, ಎಲ್ಲಾ ರಾಜಕೀಯ ಗೊಂದಲಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಮಾರ್ಚ್ 10 ರಂದು ಎಲ್ಲಾ ಕಾಂಗ್ರೆಸ್ ಶಾಸಕರಿಗೆ (Congress Mla’s) ಡಿನ್ನರ್ ಆಯೋಜಿಸಿದ್ದಾರೆ.
ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 10ಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಡಿನ್ನರ್ ಪಾರ್ಟಿ (Dinner Party) ಆಯೋಜಿಸಲಾಗಿದೆ. ಮಾರ್ಚ್ 6ಕ್ಕೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣಗೊಳ್ಳಲಿದೆ. ಇದನ್ನೂ ಓದಿ: ಡಿಕೆಶಿ, ನನ್ನದು ಹಾಲು-ಜೇನಿನ ಸಂಬಂಧ, ಹುಳಿ ಹಿಂಡೋಕಾಗಲ್ಲ – ಕಾಂಗ್ರೆಸ್ ಪಕ್ಷದವ್ರೇ ಸಿಎಂ ಆಗಿರ್ತಾರೆ: ಸಿದ್ದರಾಮಯ್ಯ ತಿರುಗೇಟು
ಈ ಔತಣಕೂಟಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಕೆಲವು ಹಿರಿಯ ನಾಯಕರಿಗೂ ಆಹ್ವಾನ ನೀಡಲಾಗಿದೆ.
ಡಿಕೆಶಿ ಪ್ರತಿಕ್ರಿಯಿಸಿ, 6 ವರ್ಷ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್‌ಗೆ ಹೊರ ರಕ್ತ ಬರಬೇಕು. ಹೊಸಬರಿಗೆ ಅವಕಾಶ ಸಿಗಬೇಕು. ನಾನು ಸ್ಟ್ರೀಟ್ ಫೈಟರ್ ಎಂದು ಹೇಳುವ ಮೂಲಕ ಕೆಪಿಸಿಸಿ ಅಧ್ಯಕ್ಷ (KPCC President) ಸ್ಥಾನ ಬಿಟ್ಟುಕೊಡುವ ಬಗ್ಗೆ ಒಲವು ವ್ಯಕ್ತಪಡಿಸಿದ್ದಾರೆ.

