ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ: ದಿನೇಶ್‌ ಗುಂಡೂರಾವ್‌ ಸ್ಪಷ್ಟನೆ

Public TV
1 Min Read

ಬೆಂಗಳೂರು: ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ (Heart attack) ನೇರ ಕಾರಣ ಅಲ್ಲ ಎಂದು ಸಚಿವ ದಿನೇಶ್‌ ಗುಂಡೂರಾವ್‌ (Dinesh Gundurao) ಹೇಳಿದ್ದಾರೆ.

ಹೃದಯಾಘಾತ ಕುರಿತು ಸಮೀಕ್ಷೆ ನಡೆಸಿದ ತಾಂತ್ರಿಕ ಸಲಹಾ ಸಮಿತಿಯಿಂದ ವರದಿ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಕೋವಿಸ್‌ ಲಸಿಕೆಯಿಂದ (Covid Vaccine) ಹೃದಯಾಘಾತ ಎನ್ನುವ ಆರೋಪವನ್ನು ಅಲ್ಲಗಳೆದಿದ್ದಾರೆ.

ಕೋವಿಡ್‌ ಲಸಿಕೆ ಹೃದಯಾಘಾತಕ್ಕೆ ನೇರ ಕಾರಣ ಅಲ್ಲ. ಮಧುಮೇಹ, ಕೊಬ್ಬು ಸೇರಿದಂತೆ ಅನೇಕ ಅಡ್ಡ ಪರಿಣಾಮಗಳು ಹೃದಯಾಘಾತಕ್ಕೆ ಕಾರಣ ಆಗಿವೆ. ರಕ್ತದೊತ್ತಡ, ಶುಗರ್, ದಪ್ಪ ಆಗಿರೋದು, ದೈಹಿಕ ಚಟುವಟಿಕೆ ಇಲ್ಲದೇ ಇರೋದು. ಹೃದಯಾಘಾತ ಹೆಚ್ಚಾಗೋದಕ್ಕೆ ಕಾರಣ ಆಗಿದೆ. ಜನರ ಜೀವನ ಶೈಲಿ ಕೂಡ ಹೃದಯಾಘಾತಕ್ಕೆ ಕಾರಣ ಆಗಿದೆ. ಕೊವಿಡ್ ಲಸಿಕೆಯಿಂದ ನೇರವಾಗಿ ಕಾರಣ ಅಲ್ಲ ಎಂದು ಹೇಳಿದ್ದಾರೆ.

ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಅನುಮಾನ
ಎಂಆರ್‌ಎನ್‌ಎ ವ್ಯಾಕ್ಸಿನ್ ಬಗ್ಗೆ ಅನುಮಾನ ಇದೆ. ಆದ್ರೆ ನಮ್ಮ ದೇಶದಲ್ಲಿ ಯಾರೂ ಈ ಲಸಿಕೆ ತೆಗೆದುಕೊಂಡಿಲ್ಲ. ನಮ್ಮ ಅಧ್ಯಯನದಲ್ಲಿ ಇದು ಬಯಲಾಗಿಲ್ಲ ವಿಶ್ವಮಟ್ಟದ ಅಧ್ಯಯನದಲ್ಲಿ ಬಯಲಾಗಿದೆ ಎಂದು ವಿವರಿಸಿದ್ದಾರೆ.

ಕೋವಿಡ್‌ ಬಂದು ಹೋದವರಲ್ಲೇ ಹೆಚ್ಚು ಹೃದಯಾಘಾತ
ಹೃದಯಾಘಾತ ಪ್ರಕರಣಗಳು ಹೆಚ್ಚಾದ ಹಿನ್ನೆಲೆ ಕೆಲವು ತಿಂಗಳ ಹಿಂದೆ ಸಿಎಂ ಅವರು ತನಿಖೆಗೆ ಸೂಚಿಸಿದ್ರು. ತಜ್ಞರ ಸಮಿತಿ ಮಾಡಿ ವರದಿಗೆ ಆದೇಶ ಮಾಡಿದ್ರು. ಕೊವಿಡ್ ಅಥವಾ ಕೊವಿಡ್ ಲಸಿಕೆ ಅಡ್ಡ ಪರಿಣಾಮಗಳು ಏನು? ಸಾವು ಹೇಗೆ ಅಂತಾ ತನಿಖೆ ಮಾಡೋಕೆ ಹೇಳಿದ್ರು. ಮುಖ್ಯ ಕಾರ್ಯದರ್ಶಿ ಸಮಿತಿ ರಚನೆ ಮಾಡಿ ಜಯದೇವ ನಿರ್ದೇಶಕರು ಸೇರಿದಂತೆ ಹಲವು ತಜ್ಞರು ಇದ್ದರು. ಅದರಂತೆ ವಿಶ್ವ ಮಟ್ಟದಲ್ಲಿ ಏನು ತನಿಖೆ ಆಗಿದೆ ಎಂಬುದನ್ನು ವಿಶ್ಲೇಷಣೆ ಮಾಡಲಾಗಿದೆ ಜೊತೆಗೆ ಜಯದೇವ ಆಸ್ಫತ್ರೆಯಲ್ಲೂ ತನಿಖೆ ಮಾಡಿದ್ದಾರೆ. ಈ ವರದಿಯಲ್ಲಿ ಕೊವಿಡ್ ಯಾರಿಗೆ ಆಗಿತ್ತು ಅವರಿಗೆ ಹೃದಯಾಘಾತ ಹೆಚ್ಚಾಗಿ ಆಗಿರೋದು ಅನ್ನೋದು ಕಂಡುಬಂದಿದೆ. ಕೊವಿಡ್ ಬಂದವರಿಗೆ ಹೃದಯಾಘಾತ ಆಗಿರೋದು ವರದಿ ಬಹಿರಂಗ ಆಗಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಕೆಲವು ಸಲಹೆಗಳನ್ನ ಸಮಿತಿ ಮಾಡಿದೆ. ಹಠಾತ್ ಮರಣಗಳ ತಡೆಗೆ ಸಲಹೆ ನೀಡಿದೆ, 45 ವರ್ಷದ ಒಳಗಿರೋರು ದಿಢೀರ್ ಸಾವು ಆಗ್ತಾ ಇದ್ದು, ಅದರ ತಡೆಗೂ ಹೆಚ್ಚು ಗಮನ ಕೊಡಿ ಅಂತ ಸಮಿತಿ ಹೇಳಿದೆ. ಅದರಂತೆ ಕೆಲವೊಂದು ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಹೊರಗಡೆ ತೀರಿ ಕೊಂಡರೆ ಅಧಿಸೂಚಿತ ಮರಣ ಅಂತ ಘೋಷಣೆ ಮಾಡುತ್ತೇವೆ. ಯಾಕ್ ತೀರಿ ಹೋದರು ಅಂತ ಗೊತ್ತಾಗಬೇಕು. ಹಠಾತ್ ಮರಣ ಹೊಂದಿದ್ರೆ ಮರಣೋತ್ತರ ಪರೀಕ್ಷೆ ಕಡ್ಡಾಯ ಮಾಡಲು ನಿರ್ಣಯ ಮಾಡಿದ್ದೇವೆ ಎಂದು ವಿವರಿಸಿದ್ದಾರೆ.

ಅಲ್ಲದೇ ಶಾಲೆಗಳಲ್ಲಿ 15 ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ತಮ್ಮ ಇಲಾಖೆಯಿಂದ ತಪಾಸಣೆ ಮಾಡುವ ನಿರ್ಣಯ ಮಾಡ್ತೇವೆ. ಹುಟ್ಟಿನಿಂದ ಬಂದ ಸಮಸ್ಯೆ ಗೊತ್ತಾಗಲ್ಲ. ಕಾರ್ಡಿಯಾಕ್ ಸ್ಕ್ತೀನಿಂಗ್ ಮಾಡೋ ನಿರ್ಣಯ ಆಗಿದೆ. ಪಠ್ಯ ಪುಸ್ತಕದಲ್ಲಿ ಹೃದಯಾಘಾತದ ಬಗ್ಗೆ ಪಠ್ಯ ಕ್ರಮದಲ್ಲಿ ಅಳವಡಿಸಲು ನಾವು ಕಳಿಸಿದ್ದೇವೆ. ಈಗಾಗಲೇ ಕರ್ಕ್ರೂಲಮ್‌ನಲ್ಲಿ ಅಳವಡಿಸಲು ಸೂಚಿಸಿದ್ದೇವೆ. ಮುಂದಿನ ವರ್ಷದ ಪಠ್ಯದಲ್ಲಿ ಅಳವಡಿಕೆ ಮಾಡ್ತಾರೆ. ಮಧು ಬಂಗಾರಪ್ಪ ಅಳವಡಿಕೆಗೆ ಒಪ್ಪಿದ್ದಾರೆ. ಸಾರ್ವಜನಿಕ ವಲಯದಲ್ಲಿ ಸಿಪಿಆರ್ ಮಾಡೋಕೆ ನಿರ್ಣಯ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ತಾಲ್ಲೂಕು ಆಸ್ಫತ್ರೆಗಳಿಗೆ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಕಾರ್ಯಕ್ರಮ ವಿಸ್ತರಣೆ ಮಾಡ್ತೆವೆ. ಎಇಡಿ ಅಳವಡಿಕೆಗೆ ಎಲ್ಲೆಲ್ಲಿ ಸಾಧ್ಯ ಇದೆ ಅಲ್ಲಿ ಅಳವಡಿಸುತ್ತೇವೆ. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ನಿರ್ದಿಷ್ಟ ಸಿಬ್ಬಂದಿ ಇರುವ ಕಡೆ ಮಾಡ್ತೆವೆ. ತಪಾಸಣೆ ಅನ್ನ ಸರ್ಕಾರ ಮಟ್ಟದಲ್ಲಿ ನೌಕರರಿಗೆ ವರ್ಷಕ್ಕೋಮ್ಮೆ ಕನಿಷ್ಟ ತಪಾಸಣೆ ಮಾಡ್ತೆವೆ. ಖಾಸಗಿ ಕಂಪನಿ, ಉದ್ದಿಮೆದಾರರು ಅವರವರ ಕಂಪನಿಗಳು ಉದ್ಯೋಗಿಗಳಿಗೆ ವರ್ಷಕ್ಕೊಮ್ಮೆ ಸ್ಕ್ರೀನಿಂಗ್ ಮಾಡಬೇಕು ಅಂತ ನಿರ್ದೇಶನ ಮಾಡ್ತೆವೆ ಎಂದು ತಿಳಿಸಿದಾರೆ.

Share This Article