ಅಭಿಮಾನಿ ಬೆನ್ನ ಮೇಲೆ ಟ್ಯಾಟೋ ಆದ ಡಿಂಪಲ್ ಕ್ವೀನ್ ರಚಿತಾ ರಾಮ್

Public TV
1 Min Read

ಮ್ಮ ನೆಚ್ಚಿನ ನಟರ ಟ್ಯಾಟೊಗಳನ್ನು (Tatto) ದೇಹದ ಮೇಲೆ ಹಾಕಿಸಿಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ಅಭಿಮಾನಿ ರಚಿತಾ ರಾಮ್ (Rachita Ram) ಟ್ಯಾಟೋ (Fans) ಅನ್ನು ಬೆನ್ನ ಮೇಲೆ ಹಾಕಿಸಿಕೊಂಡಿದ್ದಾರೆ. ಅದಕ್ಕೆ ನಮ್ಮನೆ ದೇವರು ಎಂದು  ಬರೆಯಿಸಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ಡಿಂಪಲ್ ಕ್ವೀನ್‍ ಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆ. ಹಲವಾರು ಸ್ಟಾರ್ ಗಳ ಜೊತೆ ತೆರೆ ಹಂಚಿಕೊಂಡಿರುವ ಕಾರಣದಿಂದಾಗಿ ಅವರೆಲ್ಲರ ಅಭಿಮಾನಿಗಳು ಕೂಡ ರಚಿತಾ ಅವರನ್ನು ಆರಾಧಿಸುತ್ತಾರೆ. ಹೀಗಾಗಿಯೇ ಡಿಂಪಲ್ ಅಂದರೆ, ಅನೇಕ ಅಭಿಮಾನಿಗಳಿಗೆ ಗೌರವ.  ಆ ಗೌರವದ ಕಾರಣದಿಂದಾಗಿಯೇ ಟ್ಯಾಟೋ ಹಾಕಿಸಿಕೊಂಡಿದ್ದಾರೆ.

ಈ ಹಿಂದೆ ಟ್ಯಾಟೋ ಹಾಕಿಸಿಕೊಳ್ಳಬೇಡಿ ಎಂದು ಅನೇಕ ಕಲಾವಿದರು ಹೇಳಿದ್ದರು. ತಮ್ಮ ಅಭಿಮಾನಿಗಳು ಟ್ಯಾಟೋ ಹಾಕಿಸಿಕೊಂಡರು ಎನ್ನುವ ಕಾರಣದಿಂದಾಗಿ ಸ್ವತಃ ದರ್ಶನ್ ಅವರು ಅಭಿಮಾನಿಗಳ ಟ್ಯಾಟೋ ಅನ್ನು ತಮ್ಮ ದೇಹದ ಮೇಲೆ ಬರೆಯಿಸಿಕೊಂಡು ಹೊಸ ಸಂಪ್ರಯದಾಯಕ್ಕೆ ನಾಂದಿ ಹಾಡಿದರು. ಅದು ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

 

ಸಿನಿಮಾಗಳ ಜೊತೆ ಜೊತೆಗೆ ರಿಯಾಲಿಟಿ ಶೋಗಳಲ್ಲೂ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳ ಅಭಿಮಾನಿಗಳು ಮಾತ್ರವಲ್ಲ, ಕಿರುತೆರೆಯ ಪ್ರೇಕ್ಷಕರು ಕೂಡ ಅಭಿಮಾನಿಗಳಾಗಿ ಸೇರ್ಪಡೆ ಆಗಿದ್ದಾರೆ. ಹಾಗಾಗಿ ರಚಿತಾಗೆ ಡಬಲ್ ಸಂಭ್ರಮ ದೊರೆಯುತ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್