Digital Arrest | ಸಿಬಿಐ ಅಧಿಕಾರಿ ಸೋಗಿನಲ್ಲಿ ಕರೆ – ಬ್ಯಾಂಕ್‌ ಅಧಿಕಾರಿಗೆ 56 ಲಕ್ಷಕ್ಕೂ ಅಧಿಕ ಹಣ ವಂಚನೆ

Public TV
2 Min Read

– ರಿಕವರಿಯಾದ ಹಣ ಕೇವಲ ಒಂದೂವರೆ ಲಕ್ಷ

ಮಂಡ್ಯ: ಆನ್‌ಲೈನ್ ದೋಖಾ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಆನ್‌ಲೈನ್ ದೋಖಾದ ಲಿಸ್ಟ್‌ಗೆ ಡಿಜಿಟಲ್ ಅರೆಸ್ಟೆ ಎಂಬ ವಂಚನೆ ಜಾಲವೊಂದು ಸೇರಿಕೊಂಡಿದೆ. ಈ ಜಾಲಕ್ಕೆ ಸಿಲುಕಿದ ಬ್ಯಾಂಕ್ ಅಧಿಕಾರಿ (Bank Officer) ಒಬ್ಬರು ಲಕ್ಷ ಲಕ್ಷ ಹಣ ಕಳೆದುಕೊಂಡಿರೋದು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಹೌದು. ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯಲ್ಲಿ ಬ್ಯಾಂಕ್‌ನ ರೀಜನಲ್ ಮ್ಯಾನೇಜರ್ ಡಿಜಿಟಲ್ ಅರೆಸ್ಟ್ (Digital Arrest) ಜಾಲಕ್ಕೆ ಸಿಲುಕಿ 56 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಡುರಸ್ತೆಯಲ್ಲೇ ಯುವತಿಯ ತುಟ್ಟಿ ಕಚ್ಚಿ ಎಸ್ಕೇಪ್ ಆಗಿದ್ದ ಬೀದಿ ಕಾಮುಕ ಅರೆಸ್ಟ್

ಬ್ಯಾಂಕ್ ಮ್ಯಾನೇಜರ್‌ಗೆ ಕಳೆದ ತಿಂಗಳು ವಾಟ್ಸಪ್‌ ಮೂಲಕ ಸಿಬಿಐ ಅಧಿಕಾರಿ ಎಂದು ಕರೆ ಮಾಡಿ ನಿಮ್ಮ ಅಕೌಂಟ್‌ಗೆ ಮನಿ ಲ್ಯಾಂಡ್ರಿಂಗ್‌, ಹವಾಲ ದಂಧೆ ಮೂಲಕ ಲಕ್ಷಾಂತರ ರೂಪಾಯಿ ಹಣ ಬಂದಿದೆ ಎಂದು ಬೆದರಿಸಿದ್ದಾನೆ. ನಕಲಿ ಅರೆಸ್ಟ್ ವಾರಂಟ್‌ ಕಳುಹಿಸಿ ಅಧಿಕಾರಿಯ ಅಕೌಂಟ್‌ನಲ್ಲಿದ್ದ 56 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾನೆ. ಬ್ಯಾಂಕ್ ಅಧಿಕಾರಿ ಮಂಡ್ಯ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: 1988ರ ರೇಪ್ ಕೇಸ್‌ಗೆ ಶಿಕ್ಷೆ ಪ್ರಕಟಿಸಿದ ಸುಪ್ರೀಂ – 53 ವರ್ಷದ ವ್ಯಕ್ತಿ ಈಗ ಬಾಲಾಪರಾಧಿ

ತನಿಖೆ ಕೈಗೆತ್ತಿಕೊಂಡ ಮಂಡ್ಯ ಸೆನ್ ಠಾಣೆ ಪೊಲೀಸರಿಗೆ ಹಣ ಸಂದಾಯವಾದ ಬ್ಯಾಂಕ್ ಖಾತೆಗಳು ನಕಲಿ ಎಂದು ತಿಳಿದುಬಂದಿದೆ. ತಾಂತ್ರಿಕ ಸಾಕ್ಷ್ಯವನ್ನು ಆಧರಿಸಿದಾಗ ಡಿಜಿಟಲ್ ಅರೆಸ್ಟ್ ಮಾಡಿದ ವಂಚನೆಯ ಜಾಲ ರಾಜಸ್ಥಾನದಲ್ಲಿ ಇದೆ ಎಂದು ತಿಳಿದುಬಂದಿದೆ. ನಂತರ ಒಂದು ತಂಡ ವಂಚಕರನ್ನು ಖೆಡ್ಡಾಗೆ ಕೆಡವಲು ರಾಜಸ್ಥಾನಕ್ಕೆ ತೆರಳಿ ವಿಚಾರಣೆ ಮಾಡಿದ ಈ ವಂಚನೆಯ ದಾಳ ದೆಹಲಿಯಲ್ಲಿ ಇದೆ ಎಂದು ಗೊತ್ತಾಗಿದೆ. ಇದನ್ನೂ ಓದಿ: Madikeri | ನೇಣು ಬಿಗಿದ ಸ್ಥಿತಿಯಲ್ಲಿ ಶಿಕ್ಷಕಿಯ ಶವ ಪತ್ತೆ – ಕೊಲೆ ಶಂಕೆ, ಕುಟುಂಬಸ್ಥರಿಂದ ದೂರು

ರಾಜಸ್ಥಾನದಿಂದ ಈ ತಂಡ ನೇರವಾಗಿ ದೆಹಲಿಗೆ ಹೋದಾಗ ಅಲ್ಲಿ ಪ್ರಥಮವಾಗಿ ಗೋಪಾಲ್ ಬಿಷ್ಣೋಯಿ ಎಂಬ ಆರೋಪಿಯನ್ನ ಬಂಧಿಸಿತು. ಬಳಿಕ ರಾಜಸ್ಥಾನ ಮೂಲದ ಮಹಿಪಾಲ್, ಬಿಷ್ಣೋಯಿ, ಜಿತೇಂದ್ರ ಸಿಂಗ್ ಎಂಬ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರು ಬ್ಯಾಂಕ್ ರಿಜನಲ್ ಮ್ಯಾನೇಜರ್ ಅಕೌಂಟ್‌ನಿಂದ ಬಂದ ಹಣವನ್ನು 29 ಖಾತೆಗೆ ವರ್ಗಾವಣೆ ಮಾಡಿಕೊಂಡಿರುವುದರಿಂದ ಕೇವಲ ಒಂದೂವರೆ ಲಕ್ಷ ರೂಪಾಯಿ ಅಷ್ಟೇ ರಿಕವರಿ ಆಗಿದೆ.

ಒಟ್ಟಾರೆ ಜನರಿಗೆ ಅವರ ಹಣದ ಬಗ್ಗೆ ಜಾಗೃತಿ ಮೂಡಿಸುವ ಬ್ಯಾಂಕ್ ಅಧಿಕಾರಿಗಳೇ ಈ ರೀತಿ ಮೋಸದ ಜಾಲಕ್ಕೆ ಸಿಲುಕಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವುದು ವಿಪರ್ಯಾಸದ ಸಂಗತಿ.

Share This Article