ಮದ್ವೆಗೆ ಬರೋ ಅತಿಥಿಗಳಿಗೆ ಷರತ್ತು ವಿಧಿಸಿದ ದಿಗಂತ್-ಐಂದ್ರಿತಾ!

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ದಿಗಂತ್ ಹಾಗು ಐಂದ್ರಿತಾ ಹಸೆ ಮಣೆ ಏರೋಕೆ ರೆಡಿಯಾಗಿದ್ದಾರೆ. ಡಿಸೆಂಬರ್ 12 ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಸುಭಾಷ್ ಭವನದಲ್ಲಿ ಸಿಂಪಲ್ ಆಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಜೋಡಿ ಸಿದ್ಧವಾಗಿದೆ. ಮದುವೆಗೆ ಬಂಧು ಹಾಗು ಮಿತ್ರರನ್ನು ಆಹ್ವಾನಿಸಲು ಎರಡು ರೀತಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ.

ಮದುವೆಗೆ ಆಗಮಿಸುವ ಅತಿಥಿಗಳ ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕೆಂದು ಕ್ಯೂಟ್ ಜೋಡಿ ಮನವಿ ಮಾಡಿಕೊಂಡಿದೆ. ಮದುವೆ ಮುನ್ನ ಅಂದ್ರೆ ಇದೇ ತಿಂಗಳು 16ರಂದು ತಮ್ಮ ಆತ್ಮೀಯ ಗೆಳೆಯರಿಗಾಗಿ ವಿಶೇಷ ಪಾರ್ಟಿಯನ್ನು ದಿಗಂತ್-ಐಂದ್ರಿತಾ ಆಯೋಜನೆ ಮಾಡಿದ್ದಾರೆ.

ದಿಗಂತ್ ಬಾವಿ ಪತ್ನಿ ಐಂದ್ರಿತಾರಿಗೆ ಗೋವಾದ ಶೂಟಿಂಗ್ ಸ್ಪಾಟ್ ನಲ್ಲಿಯೇ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದರು. ದಿಗಂತ್ ಶ್ರೀಲಂಕಾದಲ್ಲಿ ಬ್ಯಾಚೂಲರ್ ಪಾರ್ಟಿ ಮುಗಿಸಿದ್ದು, ಐಂದ್ರಿತಾ ‘ಗರುಡ’ ಚಿತ್ರದ ಚಿತ್ರೀಕರಣದಿಂದ ರಜೆ ತೆಗೆದುಕೊಂಡು ಬಂಧುಗಳಿಗೆ ಮದುವೆ ಕಾರ್ಡ್ ವಿತರಣೆಯಲ್ಲಿ ಬ್ಯುಸಿಯಾಗಿದ್ದರಂತೆ. ಕರ್ನಾಟಕ ಮತ್ತು ಬಂಗಾಳಿ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇದನ್ನೂ ಓದಿ: ಡಿಪ್‍ವೀರ್ ಮದ್ವೆಗೆ ಬರೋವರಿಗೆ ಷರತ್ತುಗಳು ಅನ್ವಯ!

ಇಬ್ಬರ ನಡುವೆ ಲವ್ ಆಗಿದು ಹೇಗೆ?
2009ರಲ್ಲಿ `ಮನಾಸಾರೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಅಲ್ಲಿ ನಮ್ಮಿಬ್ಬರ ಪರಿಚಯವಾಯಿತು. ಬಳಿಕ ಜನವರಿ 2010ರಲ್ಲಿ ನಾವಿಬ್ಬರು ಪ್ರೀತಿ ಮಾಡಲು ಶುರು ಮಾಡಿದೆವು. ಅಂದಿನಿಂದ ಇಂದಿನವರೆಗೂ ಒಬ್ಬೊಬ್ಬರನ್ನು ಅರ್ಥ ಮಾಡಿಕೊಂಡಿದ್ದೇವೆ. ಇಬ್ಬರು ಒಂದೇ ಆಸಕ್ತಿ-ಆಲೋಚನೆಗಳನ್ನು ಹೊಂದಿದ್ದೇವೆ. ನಮ್ಮಿಬ್ಬರ ಪ್ರೀತಿಯ ಪ್ರಯಾಣ ತುಂಬಾ ಚೆನ್ನಾಗಿತ್ತು ಎಂದು ಪ್ರೀತಿ ಮೂಡಿದ ಬಗ್ಗೆ ಐಂದ್ರಿತಾ ಹೇಳಿಕೊಂಡಿದ್ದರು.

ಅದ್ಧೂರಿಯಾಗಿ ಮದುವೆ ಆಗಲ್ಲ:
ದಿಗಂತ್ ಅದ್ಧೂರಿ ಮದುವೆಯನ್ನು ಇಷ್ಟ ಪಡುವುದಿಲ್ಲ. ಆದರೆ ಮದುವೆಗೆ ಖರ್ಚು ಮಾಡುವ ಹಣವನ್ನು ದತ್ತಿ ಸಂಸ್ಥೆಗಳಿಗೆ ದಾನ ಮಾಡಲು ಇಷ್ಟಪಡುತ್ತಾರೆ. ನಾನು ಯಾವಾಗಲೂ ಸುಂದರ ಮದುವೆಯ ಬಗ್ಗೆ ಕನಸು ಕಂಡಿದ್ದೇನೆ. ಅದೇ ರೀತಿ ದಿಗಂತ್ ಕುಟುಂಬವು ಕೂಡ ಬಂಗಾಲಿ ಶೈಲಿಯಲ್ಲಿ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ಮದುವೆ ದಿನ ದಿಗಂತ್ ನನ್ನು ಬಿಳಿ ಟೋಪಿಯಲ್ಲಿ ನೋಡಲು ನಾನು ಕಾಯುತ್ತಿದ್ದೇನೆ. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಮತ್ತು ಸಿನಿಮಾರಂಗದ ಸ್ನೇಹಿತರಿಗೆ ಪಾರ್ಟಿ ಆಯೋಜನೆ ಮಾಡಿದ್ದೇವೆ ಎಂದು ಐಂದ್ರಿತಾ ಹೇಳಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *