ಐಜಿಪಿ ರೂಪಾ ವಿರುದ್ಧ ಸಿಎಸ್‌ಗೆ ಡಿಐಜಿ ವರ್ತಿಕಾ ಕಟಿಯಾರ್ ದೂರು

Public TV
1 Min Read

ಬೆಂಗಳೂರು: ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಈ ಶಿಸ್ತಿನ ಇಲಾಖೆಯಲ್ಲಿ ಮಹಿಳಾ ಅಧಿಕಾರಿಗಳ ಜಟಾಪಟಿ ಮುಗಿಯೋ ಲಕ್ಷಣಗಳೇ ಕಾಣುತ್ತಿಲ್ಲದಂತಾಗಿದೆ. ಐಪಿಎಸ್‌ ಅಧಿಕಾರಿ‌ ರೂಪಾ (Roopa Moudgil) ವಿರುದ್ಧ ಮತ್ತೋರ್ವ ಮಹಿಳಾ ಅಧಿಕಾರಿ ದೂರು ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಈ ಹಿಂದೆ ಹಿರಿಯ ಅಧಿಕಾರಿಗಳ ಮುಂದೆಯೇ ಸಭೆ ಕೊಠಡಿಯಲ್ಲಿ ಗಲಾಟೆ ಮಾಡಿಕೊಂಡಿದ್ದ ಐಎಸ್‌ಡಿ ಐಜಿಪಿ ರೂಪಾ ಮೌದ್ಗಿಲ್‌ ಮತ್ತು ಡಿಐಜಿ ವರ್ತಿಕಾ ಕಟಿಯಾರ್ (Vartika Katiyar) ಸುದ್ದಿ ಆಗಿದ್ರು. ಈಗ ಒಂದು ಹಂತ ಮುಂದೆ ಹೋಗಿದ್ದು ಐಜಿಪಿ ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಇದನ್ನೂ ಓದಿ: ಆಸ್ತಿ ತೆರಿಗೆ ಬಾಕಿ – ವಿಧಾನಸೌಧ, ರಾಜಭವನ ಸೇರಿ 258 ಸರ್ಕಾರಿ ಕಟ್ಟಡಗಳಿಗೆ ಬಿಬಿಎಂಪಿ ನೋಟೀಸ್

ರೂಪಾ ಅವರು ನನ್ನ ಕೊಠಡಿಯಲ್ಲಿ ಕೆಳಹಂತದ ಸಿಬ್ಬಂದಿ ಬಳಸಿಕೊಂಡು ದಾಖಲೆಗಳನ್ನು ಇರಿಸಿದ್ದಾರೆ. ಅಲ್ಲದೇ  ಆ ದಾಖಲೆಗಳನ್ನು ಬಳಸಿ  ನನ್ನ ವಿರುದ್ಧ ಷಡ್ಯಂತ್ರ ಹೇರುವ ಸಾಧ್ಯತೆ ಇದೆ ಎಂದು ವರ್ತಿಕಾ ಕಟಿಯಾರ್ ದೂರಿದ್ದಾರೆ. ಇದನ್ನೂ ಓದಿ: ಹೃದಯಾಘಾತದಿಂದ ಕಾರಿನಲ್ಲೇ ವ್ಯಕ್ತಿ ಸಾವು – ಕೈ ಮೇಲೆ ಗಾಯ ನೋಡಿ ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು

ವರ್ತಿಕಾ ಕಟಿಯಾರ್ ದೂರಿನಲ್ಲಿ ಏನಿದೆ?
ಸದ್ಯ ರೂಪಾ ವಿರುದ್ಧ ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ವರ್ತಿಕಾ ಕಟಿಯಾರ್ ದೂರು ನೀಡಿದ್ದಾರೆ. ಕೆಳಹಂತದ ಮೂವರು ಅಧಿಕಾರಿಗಳನ್ನ (ಮಲ್ಲಿಕಾರ್ಜುನ್, ಮಂಜುನಾಥ್ ಮತ್ತು ಕಿರಣ್) ಬಳಸಿ ದಾಖಲೆಗಳನ್ನು ನನ್ನ ಕೊಠಡಿಯಲ್ಲಿ ಇರಿಸಿದ್ದಾರೆ.  ವಾಟ್ಸಪ್‌ ಮೂಲಕ ಫೋಟೋ ತೆಗೆಸಿದ್ದಾರೆ. ಕಂಟ್ರೋಲ್‌ ರೂಮ್‌ನಿಂದ ಕೀ ತಂದು ಕೊಠಡಿ ತೆರೆಯಲಾಗಿದೆ. ದುರುದ್ದೇಶದಿಂದ ಫೋಟೋ ತೆಗೆಸಲಾಗಿದ್ದು, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದು ವರ್ತಿಕಾ ಕಟಿಯಾರ್‌ ಆರೋಪಿಸಿದ್ದಾರೆ. ಇದನ್ನೂ ಓದಿ: ವರ್ಷದ ಪ್ರಯತ್ನದ ಫಲ, `ಕಾಜೂರು ಕರ್ಣ’ ಸೆರೆ – ರೈತರ ಗುಂಡಿನ ದಾಳಿಯಿಂದ ಆನೆ ನರಳಾಟ

Share This Article