ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

Public TV
2 Min Read

ಬಳ್ಳಾರಿ: ಶಿವಮೊಗ್ಗ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಆರೋಪಿಗಳ ಆಟಾಟೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರದ ಬೆನ್ನಲ್ಲೇ ಕಾರಾಗೃಹ ಇಲಾಖೆಯ ಡಿಐಜಿ ಶೇಷಾ ಬಳ್ಳಾರಿ ಜೈಲಿಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳಾದ ಜಿಲಾನ್ ಹಾಗೂ ಸೈಯದ್ ಇಬ್ಬರೂ ಜೈಲಿನಲ್ಲಿರೋ ಹಳೆಯ ವಿಡಿಯೋ ವೈರಲ್ ಮಾಡುವುದಾಗಿ ಜೈಲಿನ ಸಿಬ್ಬಂದಿಗೆ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಸಿಬ್ಬಂದಿ ಜೊತೆ ಕಿರಿಕ್ ಮಾಡುತ್ತಾ ದಾಂಧಲೆ ಮಾಡುತ್ತಿದ್ದರು. ಈ ಕುರಿತು ವಿಡಿಯೋ ಸಮೇತವಾಗಿ ಪಬ್ಲಿಕ್ ಟಿವಿ ವರದಿ ಬಿತ್ತರಿಸಿತ್ತು.  ಇದನ್ನೂ ಓದಿ: Chinnaswamy Stampede| ಕುಮಾರಸ್ವಾಮಿ ಸಿಡಿಸಿದ ಬಾಂಬ್‌ಗೆ ಗೋವಿಂದರಾಜ್ ತಲೆದಂಡ!

ವರದಿ ಬೆನ್ನಲ್ಲೇ ಕಾರಾಗೃಹ ಇಲಾಖೆ ವರದಿ ಕೇಳಿದೆ. ಕೈದಿಗಳು ಯಾವ ವಿಡಿಯೋ ಇಟ್ಟುಕೊಂಡು ಕೈದಿಗಳು ಬ್ಲಾಕ್ ಮೇಲ್ ಮಾಡ್ತಿದ್ದಾರೆ? ಜೈಲು ಸಿಬ್ಬಂದಿ ಜೊತೆ ಕೈದಿಗಳು ಜಗಳವಾಡುತ್ತಿರುವ ವಿಡಿಯೋ ಹೊರಗೆ ಹೋಗಿದ್ದೇಗೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ತನಿಖೆ ಬಂದಿರುವ ಡಿಐಜಿ ಶೇಷಾ, ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ದ ಆರೋಪಿಗಳಿಗೆ ಕ್ಲಾಸ್ ಮಾಡಿದ್ದಾರೆ. ಇದನ್ನೂ ಓದಿ: ಪೊಲೀಸರಿಂದ ಸರ್ಕಾರಕ್ಕೆ ಪತ್ರ – ಪ್ರಶ್ನೆ ಕೇಳಿದ್ದಕ್ಕೆ ಉತ್ತರ ನೀಡದೇ ತೆರಳಿದ ಡಿಕೆಶಿ

ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ
ಶಿವಮೊಗ್ಗದಲ್ಲಿ ಕೊಲೆಯಾದ ಹಿಂದೂ ಕಾರ್ಯಕರ್ತ ಹರ್ಷ

ಹರ್ಷ ಕೊಲೆ ಪ್ರಕರಣದ ಹತ್ತು ಜನ ಆರೋಪಿಗಳ ಪೈಕಿ ಜಿಲಾನ್ ಹಾಗೂ ಸೈಯ್ಯದ್ ಅವರನ್ನು ಕಳೆದ ತಿಂಗಳು ಧಾರವಾಡದಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಈ ಇಬ್ಬರೂ ಜೈಲಿನ ಸಿಬ್ಬಂದಿ, ಅಧಿಕಾರಿಗಳ ಜೊತೆ ನಿತ್ಯ ಜಗಳ ಮಾಡಿ ಅವಾಜ್ ಹಾಕಿ, ಕಿರಿಕ್ ಮಾಡುತ್ತಿದ್ದಾರೆ. ಕಿರಿಕ್‌ ಮಾಡುತ್ತಿರುವ ವಿಡಿಯೋ ಹೊರಬಂದಿತ್ತು. Exclusive | ಮತ್ತೊಂದು ಭಂಡಾಟ ಬಯಲು – ಸಿಬ್ಬಂದಿ, ಸಮಯಾವಕಾಶದ ಕೊರತೆ ಅಂದ್ರೂ ಡೋಂಟ್ ಕೇರ್ ಅಂದಿದ್ದ ಸರ್ಕಾರ

ಜೈಲಿನಲ್ಲಿ ಬೇರೇ ಬೇರೆ ಕೋಣೆಗೆ ಅಥವಾ ಜೈಲರ್ ಕೊಠಡಿಗೆ ಹೋಗುವಾಗ ಕಡ್ಡಾಯವಾಗಿ ಚೆಕಪ್ ಮಾಡಲಾಗುತ್ತದೆ. ಆದರೆ ನಮ್ಮನ್ನು ನೀವು ಪರಿಶೀಲನೆ ಮಾಡಬೇಡಿ ಎಂದು ಹೇಳುತ್ತಿದ್ದಾರೆ. ಅಷ್ಟೇ ಅಲ್ಲದೇ ಸಣ್ಣ ಪುಟ್ಟ ವಿಚಾರಕ್ಕೂ ಜೈಲು ಸಿಬ್ಬಂದಿಯನ್ನು ಆರೋಪಿಗಳು ನಿಂದಿಸುತ್ತಿದ್ದಾರೆ.

ಆರೋಪಿಗಳು ಇದೇ ರೀತಿ ಕಿರಿಕ್ ಮಾಡಿ ಬೆಂಗಳೂರು, ಗುಲ್ಬರ್ಗ, ಧಾರವಾಡ ಜೈಲಿಗೆ ಹೋಗಿದ್ದರು. ಈಗ ಅದೇ ಚಾಳಿಯನ್ನು ಬಳ್ಳಾರಿ ಜೈಲಿನಲ್ಲೂ ಮುಂದುವರಿಸುತ್ತಿದ್ದಾರೆ.

Share This Article