– ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ
ಕೋಲಾರ: ಬಿಜೆಪಿಯವರಿಗೆ ಹಿಂದೂ-ಮುಸ್ಲಿಂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಪಹಲ್ಗಾಮ್ (Pahalgam Attack) ಆಗಿ ಎಷ್ಟು ದಿನ ಆಗಿದೆ? ಈ ಮಧ್ಯೆ ಇಂಡಿಯಾ ಪಾಕಿಸ್ತಾನ ಮ್ಯಾಚ್ (India-Pakistan Match) ಯಾಕೆ ಬೇಕಾಗಿತ್ತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕೇಂದ್ರ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿನಿಮಾದವರು ಬೇಡ, ಸಿಂಧೂ ನದಿ ನೀರು ಕೊಡಲ್ಲ ಅಂತಾರೆ, ಕ್ರಿಕೆಟ್ ಮಾತ್ರ ಆಡಿಸುತ್ತಾರೆ. ಪಾಕಿಸ್ತಾನದ ಜೊತೆಗೆ ಇಂಡಿಯಾ ಕ್ರಿಕೆಟ್ ಆಡಬಹುದಾ ಎಂದು ಪ್ರಶ್ನಿಸಿದರು. ಇನ್ನೂ ಮೋದಿ ಗ್ರೇಟೆಸ್ಟ್ ಪ್ರೈಮ್ ಮಿನಿಸ್ಟರ್ ಎಂದು ಸಾಬೀತು ಮಾಡಲು ಹೊರಟಿದ್ದಾರೆ. ಬಿಜೆಪಿಯ ಪಿಎಂ ಮೋದಿ, ಅಡ್ವಾನಿ, ವಾಜಪೇಯಿ ಪಾಕಿಸ್ತಾನಕ್ಕೆ ಹೋಗಿದ್ದು, ಅಲ್ಲದೇ ಪಾಕಿಸ್ತಾನಕ್ಕೆ ಬಸ್ ಬಿಟ್ಟಿದ್ದು ಅವರೆ. ಹಾಗಾಗಿ ಎಲ್ಲವೂ ಮಾಡಿದ್ದು ಬಿಜೆಪಿಯವರೆ ಎಂದು ಕಿಡಿಕಾರಿದರು. ಇದನ್ನೂ ಓದಿ: Asia Cup 2025 | ಅಬ್ಬರಿಸಲು ʻಯಂಗ್ ಇಂಡಿಯಾʼ ರೆಡಿ – ಪ್ರಾಕ್ಟೀಸ್ ಸೆಷನ್‌ನಲ್ಲೇ 30 ಸಿಕ್ಸರ್ ಸಿಡಿಸಿದ ಶರ್ಮಾ
83 ಸಾವಿರ ಕೋಟಿ ಅಭಿವೃದ್ಧಿಗೆ, 60 ಸಾವಿರ ಕೋಟಿ ಗ್ಯಾರಂಟಿಗಳಿಗೆ ಕೊಡುತ್ತಿದ್ದೇವೆ. ಬಿಜೆಪಿಯವರು ಗ್ಯಾರಂಟಿ ಕೊಡದೆ ಅಭಿವೃದ್ಧಿಗೆ ಮಾತ್ರ ಅಷ್ಟು ಹಣ ಮೀಸಲಿಟ್ಟಿದ್ದರು, ಉಳಿದ ಹಣ ಎಲ್ಲಿ ಹೋಯ್ತು? ಆಗ ರಾಜ್ಯ ದಿವಾಳಿಯಾಗಿಲ್ವಾ? ದೇಶ ಆರ್ಥಿಕ ಸಂಕಷ್ಟದಲ್ಲಿದೆ, ಆದ್ರೆ ರಾಜ್ಯ ಸುಧಾರಿಸಿದೆ. ಜಿಎಸ್‌ಟಿ ಸೇರಿ ಎಲ್ಲದರಲ್ಲೂ ರಾಜ್ಯ ಮುಂದಿದೆ. ಗುಜರಾತ್ ಮಾಡೆಲ್ ಅಂತಾರೆ ಎಲ್ಲಾಗಿದೆ ಮಾಡೆಲ್? ಗಿಫ್ಟ್ ಸಿಟಿ ಅಂತ ಮಾಡಿ ಮೋದಿ ಅವರು ಎಲ್ಲಿ ಅಭಿವೃದ್ಧಿ ಮಾಡಿದ್ದಾರೆ? ಸಾಕಷ್ಟು ಬಾರಿ ಸಿಎಂ ಆಗಿದ್ದವರು ಏನು ಮಾಡಿದ್ದಾರೆ ಎಂದು ಪ್ರಶ್ನೆಗಳ ಸುರಿಮಳೆಗೈದರು. ಇದನ್ನೂ ಓದಿ: 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ – ನಿಪ್ಪಾಣಿ ವ್ಯಕ್ತಿಗೆ 30 ವರ್ಷ ಜೈಲು ಶಿಕ್ಷೆ
ಖೇಲೋ ಇಂಡಿಯಾ ಅನ್ನೋ ದೊಡ್ಡ ಕಾರ್ಯಕ್ರಮ 426 ಕೋಟಿ ಗುಜರಾತ್‌ಗೆ ಮಾತ್ರ ಹೋಗುತ್ತೆ, ಎಲ್ಲಿ ಎಷ್ಟು ಮೆಡಲ್ ಬಂದಿದೆ? ಈ ಮೊದಲು ಕಡಿಮೆ ಇತ್ತು, ಈಗಲೂ ಕಡಿಮೆ ಇದೆ. ಗುಜರಾತ್ ಯಾಕೆ ಇಂದಿಗೂ ಮಾಡೆಲ್ ಆಗಿಲ್ಲ? ನಮ್ಮ ರಾಜ್ಯದಲ್ಲಿ ಎಂಜಿನಿಯರಿಂಗ್ ಕಾಲೇಜು, ಸಿಎಸ್ಟಿ, ಎಫ್‌ಡಿಎ ಸೇರಿ ನಾವು ಅಭಿವೃದ್ಧಿಯಲ್ಲಿದ್ದೇವೆ, ಆದ್ರೆ ದೇಶವೆ ಹಿಂದುಳಿದಿದೆ. ಅಭಿವೃದ್ಧಿ ಮಾಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ʻಬೆಂಕಿಯ ಬಲೆʼಯಲ್ಲಿ ನೇಪಾಳ – ಕನ್ನಡಿಗರ ರಕ್ಷಣೆಗೆ ತಂಡ ರಚಿಸಿದ ರಾಜ್ಯ ಸರ್ಕಾರ
ಇನ್ನು ಮದ್ದೂರು ಕಲ್ಲು ತೂರಾಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೂ ಮುಸ್ಲಿಂ ಗಲಾಟೆ ಬಿಟ್ರೆ ಬಿಜೆಪಿ ಏನೂ ಮಾಡುತ್ತಿಲ್ಲ. ಕಲ್ಲು ತೂರಾಟ ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಹಿಂದೂ ಎನ್ನುವವರು ಮೊದಲಿಗೆ ಅಂತರ್ಜಾತಿ ವಿವಾಹ ಮಾಡಿಸಲಿ, ಹಿಂದೂ ಮಾತ್ರ ಎನ್ನುವವರು ಹೀಗೆ ಮಾಡಿ. ಅವರ ಆಸ್ತಿಗಳನ್ನ ಬಡವರಿಗೆ ಕೊಡಿ. ನಾವೆಲ್ಲಾ ಹಿಂದು ನಾವೆಲ್ಲಾ ಒಂದು ಎನ್ನುವವರು ಮೊದಲು ಸಣ್ಣ ಜಾತಿಗಳವರೊಂದಿಗೆ ಮದುವೆ ಮಾಡಿಸಿ ಮಾದರಿಯಾಗಲಿ ಎಂದು ಸವಾಲೆಸೆದರು. ಇದನ್ನೂ ಓದಿ: ಮಂಗಳೂರು | ಬೈಕಂಪಾಡಿಯಲ್ಲಿ ಅಗ್ನಿ ಅವಘಡ – ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿ
ಬಿಜೆಪಿ ನಾಯಕರ ಮಕ್ಕಳು ಯಾವ ಪ್ರತಿಭಟನೆಗೆ, ಯಾವ ಹೋರಾಟಕ್ಕೆ ಬಂದಿದ್ದಾರೆ? ಬರಲ್ಲ, ಅಲ್ಲಿ ಹೋರಾಟ ಮಾಡೋದು, ಗಾಯಗಳಾಗೋದು ಎಲ್ಲವೂ ಬಡವರ ಮಕ್ಕಳಿಗೆ. ಇನ್ನೂ ಬಿಜೆಪಿಯವರು ಏನು ಮಾಡಿದ್ದಾರೆ? ಶಕ್ತಿ ಪೀಠಗಳು ಹೆಚ್ಚಾಗಿ ಮಾಡಿರುವುದು ಕಾಂಗ್ರೆಸ್‌ನವರು ಎಂದರು. ಇದನ್ನೂ ಓದಿ: ಸಂಡೂರಿನ ನಾರಿಹಳ್ಳದಲ್ಲಿ ಅಪರೂಪದ ಮ್ಯಾಂಗನೀಸ್ ಶಿಲಾ ಶಾಸನ ಪತ್ತೆ
ಇನ್ನೂ ಭದ್ರಾವತಿ ಶಾಸಕ ಸಂಗಮೇಶ್ ಮುಂದಿನ ಜನ್ಮದಲ್ಲಿ ಮಸ್ಲಿಂ ಆಗಿ ಹುಟ್ಟುತ್ತೇನೆ ಎಂಬ ಹೇಳಿಕೆ ಬಗ್ಗೆ ಮಾತನಾಡಿ, ದೇವೇಗೌಡ್ರು ಈ ಹಿಂದೆ ನಾನು ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟಬೇಕು ಎಂದಿದ್ದರು. ಅವರ ಬಗ್ಗೆ ನನಗೆ ಗೌರವ ಇದೆ. ಆದ್ರೆ ನಮ್ಮ ಶಾಸಕರು ಮಾತ್ರ ಹಾಗೆ ಮಾತನಾಡಬಾರದ? ನಾವು ಮಾತನಾಡಿದ್ರೆ ಓಲೈಕೆನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಹಿಂದೂಗಳನ್ನ ಯಾವ ಸ್ಥಿತಿಗೆ ತಳ್ಳಿರಬಹುದು? – ವಿಜಯೇಂದ್ರ ಆತಂಕ
ಕಳೆದ 15 ದಿನದಲ್ಲಿ ಕಾಂಗ್ರೆಸ್ ಇಬ್ಬರು ಶಾಸಕರ ಬಂಧನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಡಿ, ಸಿಬಿಐ, ಎಸ್‌ಐಟಿ, ಲೋಕಾಯುಕ್ತ ಯಾವುದೇ ತನಿಖೆಯಾಗಲಿ. ಆದ್ರೆ ಕರ್ಮ ಯಾರನ್ನೂ ಸಮ್ಮನೆ ಬಿಡಲ್ಲ. ಅಂಬಾನಿ ಅವರು ಒಂದು ಕೋಟಿ ಲಾಭ ಮಾಡಿದ್ದಾರೆ, ಅದರ ಲೆಕ್ಕ ಯಾರು ಕೇಳಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ಕತಾರ್ ಮೇಲೆ ಇಸ್ರೇಲ್ ಏರ್‌ಸ್ಟ್ರೈಕ್; ಹಮಾಸ್ ನಾಯಕನ ಪುತ್ರ ಸೇರಿ 6 ಮಂದಿ ಬಲಿ – ಟಾಪ್ ಲೀಡರ್ ಪಾರು
ಇನ್ನೂ ಧರ್ಮಸ್ಥಳಕ್ಕೆ ತೆಲುಗು ನಟ, ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಬರುವ ವಿಚಾರವಾಗಿ ಮಾತನಾಡಿದ ಅವರು, ಅಷ್ಟೇ ಬಿಜೆಪಿಯಲ್ಲಿ ಹಿಂದೂ ಅನ್ನೋ ವಿಚಾರ ಬಿಟ್ರೆ ಇನ್ನೇನಿದೆ? ಏನಕ್ಕೆ ಬರ್ತಾರೆ ಬಂದು ಏನು ಮಾಡ್ತಾರೆ? ಧರ್ಮ ರಕ್ಷಣೆ ಅಂತಾರೆ, ಇಷ್ಟೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ – ಸೆ.12ರ ನಂತರ ಮದ್ದೂರಿಗೆ ಹೆಚ್‌ಡಿಕೆ