ವಿನೋದ್ ರಾಜ್ ಮನೆಗೆಲಸದಾಕೆಯನ್ನೇ ಮದುವೆಯಾದ್ರಾ?: ಮತ್ತೊಂದು ಬಾಂಬ್ ಸಿಡಿಸಿದ ಡೈರೆಕ್ಟರ್

Public TV
2 Min Read

ಹಿರಿಯನಟಿ ಲೀಲಾವತಿ (Leelavati) ಅವರ ಪುತ್ರ ವಿನೋದ್ ರಾಜ್ (Vinod Raj) ಮದುವೆ ವಿಚಾರ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ನಿರ್ದೇಶಕ ಪ್ರಕಾಶ್ ರಾಜ್ ಮೆಹು (Prakash Raj Mehu) ಈ ಹಿಂದೆ ಫೇಸ್ ಬುಕ್ ನಲ್ಲಿ ವಿನೋದ್ ರಾಜ್ ಮದುವೆ (Marriage) ವಿಚಾರವನ್ನು ಎತ್ತಿದ್ದರು. ಅಲ್ಲದೇ, ಲೀಲಾವತಿ ಅವರ ಗಂಡನ ಕುರಿತಾಗಿಯೂ ಅವರು ಬರೆದುಕೊಂಡಿದ್ದರು. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಲೀಲಾವತಿ ಪುತ್ರ ವಿನೋದ್ ರಾಜ್ ಪ್ರತಿಕ್ರಿಯಿಸಿದ್ದರು. ಪ್ರಕಾಶ್ ರಾಜ್ ಮೆಹು ವಿರುದ್ಧ ಕಿಡಿಕಾರಿದ್ದರು. ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ ಪ್ರಕಾಶ್ ರಾಜ್ ಮೆಹು.

ವಿನೋದ್ ರಾಜ್ ಪತ್ನಿಯ ವಿಚಾರವನ್ನು ಮತ್ತೆ ಪ್ರಸ್ತಾಪ ಮಾಡಿರುವ ಪ್ರಕಾಶ್ ರಾಜ್ ಮೆಹು, ‘ವಿನೋದ್ ರಾಜ್ ತಮ್ಮ ಮನೆಯ ಕೆಲಸದಾಕೆಯನ್ನೇ ಮದುವೆ ಆಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ. ಒಂದು ವೇಳೆ ಅದು ನಿಜವೇ ಆಗಿದ್ದರೆ ಹೆಮ್ಮೆಯಿಂದ ಆ ವಿಷಯವನ್ನು ಹೇಳಿಕೊಳ್ಳಬೇಕು. ಆದರೆ, ಯಾಕೆ ಈ ಮುಚ್ಚಿಟ್ಟಿದ್ದಾರೆ ಎಂದು ನನಗೂ ಅಚ್ಚರಿ ಆಗುತ್ತಿದೆ’ ಎಂದು ಮದುವೆ ವಿಚಾರವನ್ನು ಮತ್ತೆ ಕೆಣಕಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಲೀಲಾವತಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಪ್ರತಿಕ್ರಿಯಿಸಿ, ‘ನನ್ನ ಮಗನ ಮದುವೆ ಆಗಿದೆ. ಅದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಆದರೆ, ಸಿಂಪಲ್ ಆಗಿ ಮದುವೆ ಮಾಡಿದೆ. ನನ್ನ ಹತ್ತಿರ ದುಡ್ಡಿಲ್ಲದ್ದಕ್ಕೆ   ತಿರುಪತಿ ಬೆಟ್ಟದ ಮೇಲೆ ಮಾಡಿದೆ. ಎಂಥೆಂದವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್ ಗಳಲ್ಲಿ ಮಾಡಿದ್ದಾರೆ. ಆದರೆ, ನನಗೆ ಆ ಶಕ್ತಿ ಇರಲಿಲ್ಲ. ಅನೇಕರು ಈ ಕುರಿತು ಹೀಯಾಳಿಸಿದರು. ಹಾಗಾಗಿ ಚರ್ಚೆ ಮಾಡಲಿಲ್ಲ’ ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿರುವ ಲೀಲಾವತಿ, ‘ನನ್ನ ಮಗನ ಮದುವೆಗೆ ಏಳು ಜನ ಕನ್ನಡಿಗರು ಬಂದಿದ್ದರು. ಏನ್ ಲೀಲಾವತಿ ಅವರೇ ನಿಮ್ಮ ಮಗನ ಮದುವೆಗೆ ಏಳೇ ಏಳು ಜನ ಬಂದಿದ್ದಾರೆ. ಜನ ಸಿಗಲಿಲ್ಲವಾ ಎಂದು ಕುಹಕವಾಡಿದರು. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳಲಿಲ್ಲ. ಮೊಮ್ಮಗ ಮತ್ತು ಸೊಸೆ ಚೆನ್ನಾಗಿದ್ದಾರೆ. ಅವರಿಗೆ ಯಾವುದೇ ಕೊರತೆ ಮಾಡಿಲ್ಲ. ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ ಬೇಸರವಾಗುತ್ತದೆ. ಯಾರು ಏನೇ ಹೇಳಲಿ ನನ್ನ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವೆ’ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಿರ್ದೇಶಕ ಮೆಹು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಲೀಲಾವತಿ ಮತ್ತು ಅವರ ಪುತ್ರನ ಬಗ್ಗೆ ಪೋಸ್ಟ್ ವೊಂದನ್ನು ಹಾಕಿದ್ದರು. ಅದರಲ್ಲಿ ‘ವಿನೋದ್ ರಾಜ್ ಅವರಿಗೆ ಮದುವೆಯಾಗಿ ಪುತ್ರನಿದ್ದು, ಚೆನ್ನೈನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ವಿನೋದ್ ಪತ್ನಿ ಮತ್ತು ಮಗ ಚೆನ್ನೈನಲ್ಲಿ ವಾಸಿಸುತ್ತಿದ್ದಾರೆ’ ಎಂದು ಬರೆದಿದ್ದರು. ಲೀಲಾವತಿಯವರ ಜೊತೆಗೆ ಕುಳಿತಿರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಮೆಹು ಪ್ರಕಟಿಸಿದ್ದಾರೆ. ಅದರಲ್ಲಿ ಮಹಾಲಿಂಗ ಭಾಗವತರ್ ಪತ್ನಿ ಲೀಲಾವತಿ ಅಮ್ಮಾಳ್ ಎಂದು ಬರೆದುಕೊಂಡಿದ್ದಾರೆ. ವಿನೋದ್ ಪುತ್ರನ ಹೆಸರು ಯುವರಾಜ್ ಎಂದು ಇದ್ದು, ಈ ಸಂಬಂಧ ಆತನ ಅಂಕಪಟ್ಟಿಯ ಫೋಟೋವನ್ನು ಕೂಡ ಹಾಕಿದ್ದಾರೆ. ಅದರಲ್ಲಿ ತಾಯಿ ಹೆಸರು ಅನು ಬಿ ಎಂದಿದೆ. ತಂದೆ/ಗಾರ್ಡಿಯನ್ ಜಾಗದಲ್ಲಿ ವಿನೋದ್ ರಾಜ್ ಎಂದಿದೆ.

Share This Article