ಡಿಕೆಶಿ ಮುಂದೆಯೇ ಸದ್ಗುರು ಕಾಂಗ್ರೆಸ್‌ ಪಕ್ಷವನ್ನು ಅವಮಾನಿಸಿದ್ರಾ?

Public TV
1 Min Read

ಬೆಂಗಳೂರು: ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್‌ ವತಿಯಿಂದ ಆಯೋಜನೆಗೊಂಡಿದ್ದ ಶಿವರಾತ್ರಿ (Shivaratri) ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಎದುರೇ ಕಾಂಗ್ರೆಸ್ ಪಕ್ಷವನ್ನು ಸದ್ಗುರು ಜಗ್ಗಿ ವಾಸುದೇವ್ (Jaggi Vasudev) ಅಪಮಾನಿಸಿದ್ರಾ ಎಂಬ ಪ್ರಶ್ನೆ ಎದ್ದಿದೆ.

ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಹೊಗಳುವ ಭರದಲ್ಲಿ, ಕಾಶ್ಮೀರದ ವಿಚಾರದಲ್ಲಿ ಈ ಹಿಂದೆ ಗೊತ್ತಿದ್ದೋ ಗೊತ್ತಿಲ್ಲದೆಯೋ ತಪ್ಪುಗಳಾಗಿವೆ. ಅವನ್ನು ಈಗ ಸರಿಪಡಿಸುವ ಕಾರ್ಯ ನಡೆದಿದೆ ಎಂದು ಸದ್ಗುರು ಹೇಳಿದರು. ಇದನ್ನೂ ಓದಿ: ಸಾವಿರ ಜನ ವಿರೋಧ ಮಾಡಲಿ, ಇದು ನನ್ನ ನಂಬಿಕೆ ವಿಚಾರ – ಟ್ವೀಟ್‌ ಮಾಡಿದವರಿಗೆಲ್ಲ ಉತ್ತರ ನೀಡಲ್ಲ: ಡಿಕೆಶಿ

10 ವರ್ಷಗಳ ಹಿಂದೆ ಭಾರತದ ನಗರಗಳಲ್ಲಿ ಅಲ್ಲಲ್ಲಿ ಬಾಂಬ್‌ ಸ್ಫೋಟವಾಗುತ್ತಿತ್ತು. ಆದರೆ ಈಗ ಸ್ಫೋಟಗಳು ನಿಂತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಮೂಲಕ ಕಾಂಗ್ರೆಸ್ ಆಡಳಿತವನ್ನು ಪರೋಕ್ಷವಾಗಿ ಸದ್ಗುರು ಟೀಕೆ ಮಾಡಿದರು. ಜೊತೆಗೆ ದೇಶದ ಮೊದಲ ಗೃಹ ಸಚಿವ ಸರ್ದಾರ್ ಪಟೇಲರ ಜೊತೆ ಅಮಿತ್ ಶಾರನ್ನು ಹೋಲಿಸಿ ಜಗ್ಗಿವಾಸುದೇವ್ ಹೊಗಳಿದ್ದರು.

ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಡಿಕೆ ಮೌನವನ್ನು ಹಲವು ಪ್ರಶ್ನೆ ಮಾಡುತ್ತಿದ್ದಾರೆ. ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿ ಶಿವರಾತ್ರಿಯಂದು ಸದ್ಗುರು ರಾಜಕೀಯ ಮಾತಾಡಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ.

 

Share This Article