‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ಪೋಸ್ಟರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಿಂಪಲ್ ಸುನಿ ವಿಶ್

Public TV
1 Min Read

ಪ್ರತಿಭಾನ್ವಿತ ನಟ ದೀಕ್ಷಿತ್ ಶೆಟ್ಟಿ (Dheekshith Shetty) ಮತ್ತು ಬೃಂದಾ ನಟಿಸಿರುವ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ (Bank Of Bhagyalakshmi) ಚಿತ್ರದ ಪೋಸ್ಟರ್ ಅನ್ನು ಡೈರೆಕ್ಟರ್ ಸಿಂಪಲ್ ಸುನಿ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಮೂಲಕ ‘ಚಮಕ್’ (Chamak) ನಿರ್ದೇಶಕ ಸಿಂಪಲ್‌ ಸುನಿ (Simple Suni) ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.

ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಚಿತ್ರದ ಶೀರ್ಷಿಕೆಯೇ ಸೂಚಿಸುತ್ತಿರುವಂತೆ ಬ್ಯಾಂಕ್‌ವೊಂದರಲ್ಲಿ ದರೋಡೆ ಮಾಡಲು ಹೊರಟವರ ಕಹಾನಿ ಈ ಸಿನಿಮಾದಲ್ಲಿ ಇರಲಿದೆ. ಈ ಕಥೆಯನ್ನು ಹಾಸ್ಯ ಪ್ರಧಾನವಾಗಿ ತೆರೆಗೆ ತರಲಾಗುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ಗುರುತಿಸಿಕೊಂಡಿರುವ ದೀಕ್ಷಿತ್ ಶೆಟ್ಟಿ ವಿಭಿನ್ನ ಪಾತ್ರದ ಮೂಲಕ ಬರುತ್ತಿದ್ದಾರೆ.

 

View this post on Instagram

 

A post shared by Brinda Acharya (@brinda_acharya)

ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ಗನ್ ಹಿಡಿದು ದೀಕ್ಷಿತ್ ಶೆಟ್ಟಿ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಬೃಂದಾ ಕೂಡ ಕನ್ನಡಕ ಧರಿಸಿ ಸೀರೆಯುಟ್ಟು ರೆಟ್ರೋ ಲುಕ್‌ನಲ್ಲಿ ಮಿಂಚಿದ್ದಾರೆ. ದೀಕ್ಷಿತ್ ಶೆಟ್ಟಿಗೆ ನಾಯಕಿಯಾಗಿ ‘ಪ್ರೇಮಂ ಪೂಜ್ಯಂ’ ನಟಿ ಬೃಂದಾ (Brinda Acharya) ಜೊತೆಯಾಗುತ್ತಿದ್ದಾರೆ.

‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಸಿನಿಮಾಗೆ ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಸುತ್ತಮುತ್ತ ಶೇಕಡ 80ರಷ್ಟು ಚಿತ್ರೀಕರಣ ಮುಗಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಶೂಟಿಂಗ್ ಪೂರ್ಣಗೊಳ್ಳಲಿದೆ. ಕನ್ನಡ ಮಾತ್ರವಲ್ಲದೇ ತೆಲುಗಿನಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಈ ಚಿತ್ರವನ್ನು ಅಭಿಷೇಕ್ ಎಂ. ನಿರ್ದೇಶನ ಮಾಡಿದ್ದಾರೆ.

Share This Article