– ರಣವೀರ್ ನಟನೆಗೆ ಮೆಚ್ಚುಗೆ
ರಣವೀರ್ ಸಿಂಗ್ ನಟನೆಯ ಧುರಂಧರ್ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮೂರನೇ ವಾರಾಂತ್ಯಕ್ಕೆ ಕಾಲಿಟಿದ್ದು, ಭರ್ಜರಿ 600 ಕೋಟಿ ರೂ.ಯತ್ತ ಸಾಗಿದೆ.
ಡಿ.5ರಂದು ತೆರೆಕಂಡಿರುವ ಧುರಂಧರ್ (Dhurandhar) ಸಿನಿಮಾ ರಣವೀರ್ ಸಿಂಗ್ (Ranveer Singh) ಅವರ ಮಾಸ್ ಲುಕ್, ಆ ಸ್ಟೈಲ್ ಹಾಗೂ ರಗಡ್ ಗೆಟಪ್‌ನಿಂದಲೇ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಒಂದೆಡೆ ಸಿನಿಮಾ 600 ಕೋಟಿಯತ್ತ ಸಾಗುತ್ತಾ ಬಾಕ್ಸಾಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿದ್ದರೆ, ಇನ್ನೊಂದೆಡೆ ಭಾರತದಲ್ಲಿ ಸಾರ್ವಕಾಲಿಕವಾಗಿ ಅತಿ ಹೆಚ್ಚು ನಿವ್ವಳ ಗಳಿಕೆ ಮಾಡಿದ ಹಿಂದಿ ಸಿನಿಮಾ ಆಗಿ ಹೊರಹೊಮ್ಮಿದ್ದು, ಪುಷ್ಪ 2 (ಹಿಂದಿ) ಅನ್ನು ಹಿಂದಿಕ್ಕಲಿದೆ. ಇದನ್ನೂ ಓದಿ: ಟಾಕ್ಸಿಕ್ ಬಿಡುಗಡೆಯಾಗುವ ಸಮಯದಲ್ಲೇ ಬರಲಿದೆ ಐದು ಬಿಗ್ ಬಜೆಟ್ ಸಿನಿಮಾಗಳು!
View this post on Instagram
ಮೂರನೇ ವಾರದ ಅಂತ್ಯದ ವೇಳೆಗೆ ಈ ಚಿತ್ರವು 600 ಕೋಟಿ ರೂ. ಗಳಿಕೆ ದಾಟುವ ಸಾಧ್ಯತೆಯಿದೆ. ಇನ್ನೂ ನಟಿ ಶಿಲ್ಪಾ ಶೆಟ್ಟಿ ಧುರಂಧರ್ ಹಾಡಿಗೆ ಹೆಜ್ಜೆ ಹಾಕಿದ್ದು, FA9LA ಟ್ರೆಂಡ್‌ನ್ನು ಮರುಸೃಷ್ಟಿಸಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ನಿಜಕ್ಕೂ ತುಂಬಾ ಪ್ರಭಾವಿತಳಾಗಿದ್ದೇನೆ. ಸಿನಿಮಾದಲ್ಲಿ ರಣವೀರ್ ಸಿಂಗ್, ಅಕ್ಷಯ್ ಖನ್ನಾ, ಆರ್ ಮಾಧವನ್, ಸಂಜಯ್ ದತ್ ಸೇರಿದಂತೆ ಎಲ್ಲರ ಅಭಿನಯ ತೆರೆಯ ಮೇಲೆ ರೋಚಕವಾಗಿ ಮೂಡಿಬಂದಿದೆ.
ಈ ಚಿತ್ರಕ್ಕೆ ನಾನೇ ಫ್ಯಾನ್ ಆಗಿದ್ದೀನಿ, ಹೀಗಾಗಿ ನಾನು ಈ ಟ್ರೆಂಡ್‌ನ್ನು ಫಾಲೋ ಮಾಡಲೇಬೇಕು ಎಂದು ಬರೆದುಕೊಂಡಿದ್ದಾರೆ. ಇನ್ನೂ 2026ರ ಮಾರ್ಚ್ 19ಕ್ಕೆ ʻಧುರಂಧರ್ 2ʼ ಸಿನಿಮಾ ರಿಲೀಸ್ ಆಗುವುದಾಗಿ ಚಿತ್ರತಂಡ ಘೋಷಿಸಿದೆ.ಇದನ್ನೂ ಓದಿ: ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

