ಯಶಸ್ವಿ ಪ್ರದರ್ಶನದೊಂದಿಗೆ ಮುನ್ನುಗ್ಗುತ್ತಿರುವ ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ (Dhurandhar 2) ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದೆ. ಕೇವಲ ನಾಲ್ಕು ದಿನಗಳ ಹಿಂದೆ ಬಿಡುಗಡೆಯಾದ ಚಿತ್ರವು ಬಾಕ್ಸಾಫೀಸ್‌ನಲ್ಲಿ ನೂರಾರು ಕೋಟಿ ಕ್ಲಬ್ ಸೇರಿದೆ. ಚಿತ್ರದ ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ತನ್ನ ದೇಶೀಯ ಮತ್ತು ವಿಶ್ವಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ ವಿವರಗಳನ್ನು ಇಂದು ಹಂಚಿಕೊಂಡಿದೆ. ಧುರಂಧರ್ 2 ಈಗ ಜಾಗತಿಕವಾಗಿ 800 ಕೋಟಿ ರೂ. ಕ್ಲಬ್ ಸೇರುವತ್ತ ದಾಪುಗಾಲಿಟ್ಟಿದೆ.
ಧುರಂಧರ್ 2 ಕೇವಲ ನಾಲ್ಕು ದಿನಗಳಲ್ಲಿ ವಿಶ್ವಾದ್ಯಂತ 761 ಕೋಟಿ ರೂ. ಗಳಿಸಿದೆ. ಇದರಲ್ಲಿ 550 ಕೋಟಿ ರೂ. ಭಾರತೀಯ ಮಾರುಕಟ್ಟೆಯಿಂದ ಬಂದಿದ್ದರೆ, ವಿದೇಶಿ ಕಲೆಕ್ಷನ್ 211 ಕೋಟಿ ರೂ. ಎಂದು ನಿರ್ಮಾಣ ಸಂಸ್ಥೆ ಜಿಯೋ ಸ್ಟುಡಿಯೋಸ್ ತಿಳಿಸಿದೆ. ಇದನ್ನೂ ಓದಿ: ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್
ಮಾರ್ಚ್ 18 ರಂದು ನಡೆದ ಪ್ರೀಮಿಯರ್ ಶೋ ಸೇರಿದಂತೆ ಮೊದಲ ದಿನ ಚಿತ್ರ 145 ಕೋಟಿ ರೂ. ಗಳಿಸಿದೆ. 2 ನೇ ದಿನ 88 ಕೋಟಿ ರೂ., ನಂತರ 3 ನೇ ದಿನ 117 ಕೋಟಿ ರೂ. ಮತ್ತು 4 ನೇ ದಿನ 121 ಕೋಟಿ ರೂ. ಗಳಿಸಿದೆ. ನಾಲ್ಕು ದಿನಗಳಲ್ಲಿ ಭಾರತದ ಕಲೆಕ್ಷನ್ 466 ಕೋಟಿ ರೂ. ಆಗಿದೆ.
ಧುರಂಧರ್ 2 ರಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಅರ್ಜುನ್ ರಾಂಪಾಲ್, ಆರ್.ಮಾಧವನ್ ಮತ್ತು ಸಂಜಯ್ ದತ್ ಮೊದಲಾದ ಸ್ಟಾರ್ ನಟರು ಅಭಿನಯಿಸಿದ್ದಾರೆ. ‘ಧುರಂಧರ್: ದಿ ರಿವೆಂಜ್’ ಹಿಂದಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಿದೆ. ಇದನ್ನೂ ಓದಿ: ರಿಲೀಸ್ ದಿನವೇ ಎಲ್ಲಾ ಬಾಕ್ಸಾಫೀಸ್ ರೆಕಾರ್ಡ್ ಉಡೀಸ್ ಮಾಡಿದ ಧುರಂಧರ್ 2 – ಗಳಿಸಿದ್ದೆಷ್ಟು?

