ಮುಂದಿನ ತಿಂಗಳು ಪತ್ನಿಗೆ ಡೆಲಿವರಿ ಡೇಟ್- 2ನೇ ಮಗುವಿನ ಬಗ್ಗೆ ಧ್ರುವ ಪ್ರತಿಕ್ರಿಯೆ

By
2 Min Read

ಸ್ಯಾಂಡಲ್‌ವುಡ್ (Sandalwood) ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಮೊದಲ ಪುತ್ರಿಗೆ ಒಂದು ವರ್ಷ ತುಂಬುವುದರೊಳಗೆ ಎರಡನೇ ಮಗುವಿನ ಆಗಮನದ ಬಗ್ಗೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ಈ ಬೆನ್ನಲ್ಲೇ ಧ್ರುವ ಸರ್ಜಾ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದಾರೆ. ನೆಚ್ಚಿನ ನಟನನನ್ನು ನೋಡಲು ದೂರ ಊರುಗಳಿಂದ ಭೇಟಿ ನೀಡಿದ್ದಾರೆ.

ಆಗಸ್ಟ್ 25ರಂದು ತಮ್ಮ ಎರಡನೇ ಮಗುವಿನ ಆಗಮನದ ಬಗ್ಗೆ ಧ್ರುವ ಸರ್ಜಾ ದಂಪತಿ ಗುಡ್ ನ್ಯೂಸ್ ನೀಡಿದ್ದರು. ಇದೀಗ ಧ್ರುವ ಮನೆಗೆ ಭೇಟಿ ನೀಡಿ, ತಮ್ಮ ಹುಟ್ಟುಹಬ್ಬವನ್ನು ನೆಚ್ಚಿನ ನಟನ ಜೊತೆ ಸೆಲೆಬ್ರೇಟ್ ಮಾಡಿದ್ದಾರೆ. ಪ್ರತಿವಾರ ಭಾನುವಾರ ಅಭಿಮಾನಿಗಳಿಗೆ ಮೀಸಲಿಡುವ ಧ್ರುವ, ಕಳೆದ ಎರಡ್ಮೂರು ವಾರಗಳಿಂದ ಫ್ಯಾನ್ಸ್‌ಗೆ ಭೇಟಿ ನೀಡಿರಲಿಲ್ಲ. ಈಗ ಧ್ರುವ ಮನೆಗೆ ಭೇಟಿ ನೀಡಿ, ಫೋಟೋ ಕ್ಲಿಕ್ಕಿಸಿ, ಧ್ರುವ ನಟನೆಯ ಸಿನಿಮಾದ ಡೈಲಾಗ್ ಹೊಡೆದು ಸಂಭ್ರಮಿಸುತ್ತಿದ್ದಾರೆ. ಸಿನಿಮಾದ ಶೂಟಿಂಗ್ ಮುಗಿಸಿ ಇಂದು (ಆಗಸ್ಟ್‌ 27) ಅಭಿಮಾನಿಗಳಿಗೆ ಸಮಯ ನೀಡಿದ್ದಾರೆ. ಈ ಬಗ್ಗೆ ಧ್ರುವ ಸರ್ಜಾ ಮಾತನಾಡಿದ್ದಾರೆ. ಇದನ್ನೂ ಓದಿ:ದಿಗ್ಗಜರು- 2 ಸಿನಿಮಾಗಾಗಿ ಮತ್ತೆ ಜೊತೆಯಾಗ್ತಾರಾ ಸುದೀಪ್-‌ ದರ್ಶನ್?‌

ದೂರ ಊರುಗಳಿಂದ ಬಂದಿರುವ ಅಭಿಮಾನಿಗಳನ್ನು ಭೇಟಿ ಮಾಡಿರೋದು ನನಗೆ ಖುಷಿ ಕೊಟ್ಟಿದೆ. ಅವರ ಹುಟ್ಟುಹಬ್ಬವನ್ನ ನನ್ನ ಜೊತೆ ಆಚರಿಸೋದು ನನಗೆ ಆಶೀರ್ವಾದ. ಎಷ್ಟೋ ತಾಯಂದಿರ ಆಶೀರ್ವಾದ ಸಿಕ್ತಿದೆ ಅನ್ನೋದು ಖುಷಿ. ಈ ಖುಷಿಯ ಜೊತೆಗೆ ಮನೆಗೆ ಮತ್ತೊಂದು ಮಗು ಬರುತ್ತಿದೆ. ಮುಂದಿನ ತಿಂಗಳು ಡೆಲಿವರಿ ಡೇಟ್ ಕೊಟ್ಟಿದ್ದಾರೆ. ಈಗಾಗಲೇ ಒಬ್ಬ ಮಗ ಇದ್ದಾನೆ ಮಗಳು ಇದ್ದಾಳೆ. ಯಾವುದೇ ಮಗು ಆದರೂ ನಮಗೆ ಖುಷಿನೇ ಎಂದು ಧ್ರುವ ಸರ್ಜಾ ಎರಡನೇ ಮಗುವಿನ ಆಗಮನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಅತ್ತಿಗೆ ಮೇಘನಾ (Meghana Raj) ಮತ್ತೆ ಸಿನಿಮಾ ಮಾಡ್ತಿರೋದು ಖುಷಿ ಕೊಟ್ಟಿದೆ. ಮದುವೆ ಆದ್ಮೇಲೆ ಬಹಳಷ್ಟು ಹೆಣ್ಣು ಮಕ್ಕಳು ಕೆಲಸ ಮಾಡುತ್ತಾರೆ. ನನ್ನ ಅತ್ತಿಗೆ ಕೂಡ ಕೆಲಸ ಮಾಡ್ತಿದ್ದಾರೆ ಅನ್ನೋದು ಹೆಮ್ಮೆಯ ವಿಚಾರ ಎಂದಿದ್ದಾರೆ. ಈ ಮೂಲಕ ಅತ್ತಿಗೆ ಮೇಘನಾ ನಟನೆಗೆ ಕಮ್‌ಬ್ಯಾಕ್‌ ಆಗಿರೋದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್