ಫಾಸ್ಟ್, ಫಾಸ್ಟರ್, ಫಾಸ್ಟೆಸ್ಟ್ – ಧೋನಿ ಸ್ಟಪಿಂಗ್‍ಗೆ ಅಭಿಮಾನಿಗಳು ಫಿದಾ!

Public TV
2 Min Read

ಮೌಂಟ್ ಮೌಂಗಾನೆ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸಮಯಕ್ಕೆ ಸೆಡ್ಡು ಹೊಡೆದಂತೆ ಪ್ರದರ್ಶನ ನೀಡಿದ್ದು, ಕಿವೀಸ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಮತ್ತೊಂದು ವೇಗದ ಸ್ಟಂಪಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ.

ಈ ಬಾರಿ ಧೋನಿಗೆ ಬಲಿಯಾಗಿದ್ದು, ನ್ಯೂಜಿಲೆಂಡ್ ಮಾಜಿ ನಾಯಕ ರಾಸ್ ಟೇಲರ್. ಪಂದ್ಯದ 18ನೇ ಓವರ್ ನ ಮೊದಲ ಎಸೆತದಲ್ಲಿ ಟೇಲರ್ ಚೆಂಡನ್ನು ಪುಶ್ ಮಾಡಲು ಯತ್ನಿಸಿದರು. ಈ ವೇಳೆ ಅವರ ಕಾಲು ಕ್ರಿಸ್‍ನಿಂದ ಮೇಲಕ್ಕೆ ಬಂದಿತ್ತು. ಇತ್ತ ಚೆಂಡು ಕೈ ಸೇರುತ್ತಿದಂತೆ ಮಿಂಚಿನ ವೇಗದಲ್ಲಿ ಸ್ಟಂಪ್ ಮಾಡಿದ ಧೋನಿ ಟೇಲರ್ ರನ್ನು ಪೆವಿಲಿಯನ್ ಗೆ ಕಳಿಸಲು ಯಶಸ್ವಿಯಾದರು.

ಧೋನಿ ಸ್ಟಂಪ್ ಮಾಡುತ್ತಿದಂತೆ ಅಂಪೈರ್‍ಗೆ ಮನವಿ ಸಲ್ಲಿಸಿದರು. ಆದರೆ ಧೋನಿ ಸ್ಟಪಿಂಗ್ ವೇಗ ಕಂಡ ಅಂಪೈರ್ ಕೂಡ ಕ್ಷಣ ಅಚ್ಚರಿ ವ್ಯಕ್ತಪಡಿಸಿದರು. ಬಳಿಕ 3ನೇ ಅಂಪೈರ್ ಗೆ ತೀರ್ಪು ನೀಡುವಂತೆ ಮನವಿ ಮಾಡಿದರು. ವಿಡಿಯೋ ಪರಿಶೀಲಿಸಿದ ಅಂಪೈರ್ ಔಟ್ ಎಂದು ತೀರ್ಪು ನೀಡಿದರು.

ನೆಪಿಯರ್ ಏಕದಿನ ಪಂದ್ಯದಲ್ಲೂ ಸ್ಟಂಪಿಂಗ್‍ನಲ್ಲಿ ಕಮಾಲ್ ಮಾಡಿದ್ದ ಧೋನಿ, ಇಂದಿನ ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲೂ ಭರ್ಜರಿ ಪ್ರದರ್ಶನ ನೀಡಿದ್ದರು. ಕೊಹ್ಲಿ ಔಟಾಗುತ್ತಿದಂತೆ ಕಣಕ್ಕೆ ಇಳಿದ ಧೋನಿ, ಅಂಬಾಟಿ ರಾಯುಡು, ಜಾಧವ್ ರೊಂದಿಗೆ ಬಿರುಸಿನ ಪ್ರದರ್ಶನ ನೀಡಿದರು. ಕೇವಲ 33 ಎಸೆತಳನ್ನು ಎದುರಿಸಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಅಲ್ಲದೇ ಮುರಿಯದ 5ನೇ ವಿಕೆಟ್‍ಗೆ 53 ರನ್ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತಗಳಿಸಲು ಕಾರಣರಾದರು.

https://twitter.com/manyo_rajput/status/1089066117262241792?

ದಾಖಲೆಯ ಜಯ: 2ನೇ ಏಕದಿನ ಪಂದ್ಯದಲ್ಲಿ 90 ರನ್ ಗಳ ಜಯ ಪಡೆದ ಟೀಂ ಇಂಡಿಯಾ ಕಿವೀಸ್ ವಿರುದ್ಧ ಹೆಚ್ಚು ಅಂತರದಲ್ಲಿ ಗೆಲುವು ಪಡೆದ ದಾಖಲೆ ನಿರ್ಮಿಸಿತು. ಈ ಹಿಂದೆ ಟೀಂ ಇಂಡಿಯಾ 2009ರ ಮಾರ್ಚ್ ತಿಂಗಳಲ್ಲಿ ಹ್ಯಾಮಿಲ್ಟನ್ ಪಂದ್ಯದಲ್ಲಿ 84 ರನ್ ಗಳ ಗೆಲುವು ಪಡೆದಿತ್ತು. ಉಳಿದಂತೆ ಸರಣಿಯಲ್ಲಿ 2-0 ರನ್ ಗಳ ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ಸೋಮವಾರ ನಡೆಯುವ 3ನೇ ಏಕದಿನ ಪಂದ್ಯದಕ್ಕೆ ಹೆಚ್ಚಿನ ಆತ್ಮವಿಶ್ವಾಸ ಗಳಿಸಿದೆ.

https://twitter.com/Jeevan_Tweets_/status/1089065840861839360?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *