ಧಾರವಾಡ | ಯೂಟ್ಯೂಬರ್‌ ಮುಕಳೆಪ್ಪನ ಪತ್ನಿ ಪೊಲೀಸರ ವಶಕ್ಕೆ – ಶಕ್ತಿ ಸದನ ಕೇಂದ್ರಕ್ಕೆ ರವಾನೆ

Public TV
1 Min Read

ಧಾರವಾಡ: ಯೂಟ್ಯೂಬರ್‌ ಮುಕಳೆಪ್ಪನ (Youtuber Mukaleppa) ಹೆಂಡತಿ ಗಾಯತ್ರಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದು ಧಾರವಾಡದ ಶಕ್ತಿ ಸದನ ಕೇಂದ್ರದಲ್ಲಿರಿಸಿದ್ದಾರೆ.

ಮುಕಳೆಪ್ಪ ಲವ್ ಜಿಹಾದ್ ಮಾಡಿ, ಖೊಟ್ಟಿ ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ. ಅಲ್ಲದೇ ಗಾಯತ್ರಿಯ ತಲೆ ಕೆಡಿಸಿ, ಆಕೆಯ ಮನೆಯವರನ್ನೂ ನಂಬಿಸಿ ಮೋಸ ಮಾಡಿದ್ದಾನೆ ಎಂದು ಆರೋಪಿಸಿ ಸ್ವತಃ ಗಾಯತ್ರಿ ಪಾಲಕರೇ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಸದ್ಯ ಗಾಯತ್ರಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆಕೆಗೆ ನಾಳೆಯವರೆಗೂ ಇರಲು ಧಾರವಾಡದ ಶಕ್ತಿ ಸದನ ಕೇಂದ್ರದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನೂ ಓದಿ: ಮುಕಳೆಪ್ಪನ ಹೆಂಡತಿಯ ಮತ್ತೊಂದು ವೀಡಿಯೋ ವೈರಲ್ – ತಾಯಿ ಜೊತೆ ಗಾಯತ್ರಿ ಮಾತಾಡಿದ್ದೇನು?

ಸೋಮವಾರ ರಾತ್ರಿಯೇ ಗಾಯತ್ರಿಯನ್ನು ಪೊಲೀಸರು ಧಾರವಾಡದ ಶಕ್ತಿ ಸದನ ಕೇಂದ್ರಕ್ಕೆ ಕರೆತಂದಿದ್ದಾರೆ. ಇವತ್ತು ಅಲ್ಲೇ ಆಕೆಗೆ ಇರಲು ಅವಕಾಶ ಮಾಡಿಕೊಟ್ಟು ನಾಳೆ ನ್ಯಾಯಾಲಯದ ಮುಂದೆ ಪೊಲೀಸರು ಆಕೆಯನ್ನು ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: ಧಾರವಾಡ | ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿ ಜೊತೆ ಮದ್ವೆ – ಯುಟ್ಯೂಬರ್‌ ಮುಕಳೆಪ್ಪ ವಿರುದ್ಧ ದೂರು

ಇವತ್ತು ರಾತ್ರಿ ಗಾಯತ್ರಿ ಜೊತೆ ಮಹಿಳಾ ಪೊಲೀಸ್ ಸಿಬ್ಬಂದಿಯೇ ವಸತಿ ಮಾಡಲಿದ್ದು, ನಾಳೆ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಒಟ್ಟಾರೆ ಕಾಮಿಡಿ ವೀಡಿಯೋಗಳ ಮೂಲಕವೇ ಹೆಸರು ಮಾಡಿದ್ದ ಮುಕಳೆಪ್ಪನ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿ ಬರುವುದರ ಜೊತೆಗೆ ಆತನ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಸದ್ಯ ಈ ಪ್ರಕರಣ ಮುಂದೆ ಯಾವ ಹಂತಕ್ಕೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ. ಇದನ್ನೂ ಓದಿ: ಯೂಟ್ಯೂಬರ್ ಮುಕಳೆಪ್ಪ ಮದುವೆ ಕೇಸ್; ಪೋಷಕರ ವಿರುದ್ಧವೇ ತಿರುಗಿ ಬಿದ್ದ ಮಗಳು! 

Share This Article