ಯೋಗೇಶ್‍ಗೌಡ ಕೊಲೆ ಪ್ರಕರಣ – ಸುಪಾರಿ ಕಿಲ್ಲರ್ಸ್ 5 ದಿನ ಸಿಬಿಐ ವಶಕ್ಕೆ

Public TV
1 Min Read

ಧಾರವಾಡ: ಜಿಲ್ಲಯ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್‍ಗೌಡ ಕೊಲೆ ಪ್ರಕರಣದ ಸುಪಾರಿ ತೆಗೆದುಕೊಂಡಿದ್ದಾರೆ ಎನ್ನಲಾದ ಆರೋಪಿಗಳನ್ನು ನ್ಯಾಯಾಲಯ 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ.

ಭಾನುವಾರ ಸಿಬಿಐ ಅಧಿಕಾರಿಗಳು ಬೆಂಗಳೂರಿನಿಂದ ಈ ಸುಪಾರಿ ಕಿಲ್ಲರ್ಸ್‍ಗಳನ್ನು ಧಾರವಾಡಕ್ಕೆ ಕರೆ ತಂದು, ನ್ಯಾಯಾಧೀಶರ ಬಳಿ ಹಾಜರು ಪಡಿಸಿದ್ದರು. ನ್ಯಾಯಾಧೀಶರು ಆರೋಪಿಗಳನ್ನು ಒಂದು ದಿನದ ಮಟ್ಟಿಗೆ ನ್ಯಾಯಾಂಗ ಬಂಧನಕ್ಕೆ ನೀಡಿದ್ದರು. ಇವತ್ತು ಸಿಬಿಐ ಅಧಿಕಾರಿಗಳು ಮತ್ತೇ ಧಾರವಾಡ ಪ್ರಧಾನ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರ ಎದುರು 6 ಆರೋಪಿಗಳನ್ನ ಹಾಜರು ಪಡಿಸಿ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.

ಈ ಹಿನ್ನೆಲೆ ನ್ಯಾಯಾಲಯ 6 ಆರೋಪಿಗಳನ್ನು ಮಾರ್ಚ್ 7ರ ವರೆಗೆ 5 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿದೆ. ಸದ್ಯ ದಿನೇಶ್, ಸುನೀಲ್ ಕುಮಾರ್, ನೂತನ್, ಅಶ್ವತ್, ಶಾನವಾಜ್, ನಜೀರ ಅಹ್ಮದನನ್ನು ವಶಕ್ಕೆ ಪಡೆದಿರುವ ಸಿಬಿಐ ಅಧಿಕಾರಿಗಳಿಗೆ ಹೆಚ್ಚಿನ ವಿಚಾರಣೆಗೆ ಅವಕಾಶ ಸಿಕ್ಕಿದೆ.

2016ರ ಜೂನ್ 15ರಂದು ನಡೆದಿದ್ದ ಯೋಗೇಶ್‍ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು 6 ಆರೋಪಿಗಳನ್ನು ಬಂಧಿಸಲಾಗಿತ್ತು. ಯೋಗೇಶ್‍ಗೌಡ ಸಹೋದರ ಕೂಡಾ ಈ ಪ್ರಕರಣದಲ್ಲಿ ಕಾಣದ ಕೈಗಳಿದ್ದು, ಅವರನ್ನು ಹಿಡಿದು ಸಿಬಿಐ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *