ಡಿಸೆಂಬರ್‌ನಲ್ಲಿ ಮೋದಿಯವರಿಂದ್ಲೇ ಧಾರವಾಡ IIT ಕ್ಯಾಂಪಸ್‌ ಉದ್ಘಾಟನೆ – ಜೋಶಿ

Public TV
2 Min Read

ಧಾರವಾಡ: ಡಿಸೆಂಬರ್ ತಿಂಗಳ ಅಂತ್ಯದೊಳಗೆ ಧಾರವಾಡ (Dharwad) ಐಐಟಿ (IIT) ಸಂಸ್ಥೆಯನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟಿಸಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದ್ದಾರೆ.

ಪ್ರತಿಷ್ಠಿತ ಧಾರವಾಡದ ʻಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ʼಉದ್ಘಾಟನಾ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಂದು ತ್ರಿಬಲ್ ಐಟಿ (IIIT) ಸಂಸ್ಥೆ ಕ್ಯಾಂಪಸ್ ಉದ್ಘಾಟಿಸಿದ್ದಾರೆ. ಇದೇ ವೇಳೆ ತ್ರಿಬಲ್ ಐಟಿ (IIIT) ಅಷ್ಟೇ ಅಲ್ಲ, ಐಐಟಿ (IIT) ಸಂಸ್ಥೆಯ ಕ್ಯಾಂಪಸ್ ಕೂಡ ಉದ್ಘಾಟನೆಗೆ ತಯಾರಾಗಿದೆ. ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ಧಾರವಾಡ ಐಐಟಿ (IIT) ಸಂಸ್ಥೆ ಉದ್ಘಾಟಿಸಲಿದ್ದಾರೆ ಎಂದು ಘೋಷಿಸಿದ್ದಾರೆ. ಇದನ್ನೂ ಓದಿ: ಬೆಳಗ್ಗಿನ ಜಾವ ಮಲ ವಿಸರ್ಜನೆಗೆ ಹೋಗಿದ್ದ ಮಹಿಳೆ ಶವವಾಗಿ ಪತ್ತೆ

ಧಾರವಾಡದ ಎರಡು ಪ್ರತಿಷ್ಠಿತ ಸಂಸ್ಥೆಗಳ ಕ್ಯಾಂಪಸ್ ನಿರ್ಮಾಣಕ್ಕೆ ಪ್ರಧಾನಿ ಮೋದಿ ಅವರು ಶಿಲಾನ್ಯಾಸ ನೆರವೇರಿಸಲು ಬಂದಿದ್ದರು. ಆದಗ ʻಈ ಎರಡು ಸಂಸ್ಥೆಗಳ ಕ್ಯಾಂಪಸ್ 5 ವರ್ಷದ ಸರ್ಕಾರದ ಅವಧಿಯಲ್ಲೇ ಪೂರ್ಣಗೊಳ್ಳಲಿದೆಯಾ?ʼ ಎಂದು ಪ್ರಶ್ನಿಸಿದ್ದರು. ಇಂದು ಎರಡು ಸಂಸ್ಥೆಗಳ ಕ್ಯಾಂಪಸ್ ತಯಾರಿಗಿ ನಿಂತಿವೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರ ಹಿಂದೆಂದಿಗಿಂತ ಹೆಚ್ಚಿನ ವೇಗದಲ್ಲಿ ಪ್ರಗತಿ ಕಾಣುತ್ತಿದ್ದು, ಈ ಸಮಯದಲ್ಲಿ ಧಾರವಾಡದಲ್ಲಿ ಐಐಐ-ಟಿ (IIIT) ಕಾರ್ಯಾರಂಭ ಮಾಡುತ್ತಿರುವುದು ಅತ್ಯಂತ ಸಂತಸ ಮೂಡಿಸಿದೆ ಹರ್ಷ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ (Thawar Chand Gehlot), ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ (Basavaraj Bommai), ಸಂಸ್ಥೆಯ ನಿರ್ದೇಶಕರಾದ ಪ್ರೊ.ಕವಿ ಮಹೇಶ್‌, ಕುಲಸಚಿವರ ಪ್ರೊ.ಚೆನ್ನಪ್ಪ ಅಕ್ಕಿ, ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಧಾ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು. ಇದನ್ನೂ ಓದಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್‍ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್

ರಾಷ್ಟ್ರಪತಿ ಮುರ್ಮುಗೆ ಪೌರ ಸನ್ಮಾನ: ಗೌರವಾನ್ವಿತ ರಾಷ್ಟ್ರಪತಿಗಳಿಗೆ ಹುಬ್ಬಳ್ಳಿ-ಧಾರವಾಡದ ಜನತೆಯ ಪರವಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವತಿಯಿಂದ ಪೌರ ಸನ್ಮಾನಿಸಲಾಯಿತು.

ಬಳಿಕ ಮಾತನಾಡಿದ ಪ್ರಲ್ಹಾದ್‌ ಜೋಶಿ, ಹುಬ್ಬಳ್ಳಿ ಧಾರವಾಡದಲ್ಲಿ ಇದೊಂದು ಐತಿಹಾಸಿಕ ಕ್ಷಣ. ರಾಷ್ಟ್ರಪತಿ ಮುರ್ಮು ಅವರಿಗೆ ನಮ್ಮ ಮಹಾನಗರ ಪಾಲಿಕೆಯಿಂದ ಸನ್ಮಾನಿಸಿದ್ದು ಅತ್ಯಂತ ಹೆಮ್ಮೆ. 35 ವರ್ಷದ ಬಳಿಕ ರಾಷ್ಟ್ರಪತಿಗಳಿಗೆ ಸನ್ಮಾನ ಮಾಡುವ ಅವಕಾಶ ಅವಳಿ ನಗರ ಪಾಲಿಕೆಗೆ ದೊರೆತಿರುವುದು ಗೌರವದ ಸಂಗತಿ ಎಂದು ಅಭಿಪ್ರಾಯಪಟ್ಟರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *