– ಶವ ಹೂತಿದ್ದನ್ನು ನೋಡಿರೋದಾಗಿ ಎಸ್‌ಐಟಿಗೆ ಮತ್ತಿಬ್ಬರು ದೂರು
ಮಂಗಳೂರು: ಧರ್ಮಸ್ಥಳದಲ್ಲಿ ಶವ ಹೂತ ಪ್ರಕರಣದಲ್ಲಿ (Dharmasthala Mass Burials Case) ಎಸ್‌ಐಟಿಯಿಂದ ಶೋಧ ಕಾರ್ಯ ಮುಂದುವರಿಸಿದೆ. ಅನಾಮಿಕ ದೂರುದಾರ ನೀಡಿದ್ದ ಮಾಹಿತಿ ಆಧರಿಸಿ ಹೊಸ ಸ್ಥಳದಲ್ಲಿ ಈಗ ಉತ್ಖನನ ನಡೆಸಲಾಗುತ್ತಿದೆ. ಬಾಹುಬಲಿ ಬೆಟ್ಟದ (Bahubali Hill) ಒಣಮರದ ಕೆಳಗೆ ಶವ ಹೂತಿರೋದಾಗಿ ಅನಾಮಿಕ ಹೇಳಿದ್ದರಿಂದ, ಸುಮಾರು 10 ಅಡಿ ಆಳದವರೆಗೆ ಭೂಮಿ ಅಗೆದು ಎಸ್‌ಐಟಿ ಶೋಧ ನಡೆಸಿದೆ.
20 ಅಡಿ ಅಗಲ, 20 ಅಡಿ ಉದ್ದ ಅಗೆದರೂ ಏನೂ ಪತ್ತೆಯಾಗಿಲ್ಲ. ಇನ್ನು, 16ನೇ ಪಾಯಿಂಟ್‌ಗೆ 15 ಅಡಿ ದೂರದಲ್ಲಿರೋ ಮತ್ತೊಂದು ಸ್ಥಳದಲ್ಲೂ ಶೋಧ ನಡೆದ್ರೂ ಏನೂ ಸಿಕ್ಕಿಲ್ಲ. ಈ ಮಧ್ಯೆ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು ಅನಾಮಿಕ ಹೆಣ ಹೂತಿದ್ದನ್ನು ನೋಡಿದ್ದಾಗಿ ಮತ್ತೆ ಇಬ್ಬರು ಎಸ್‌ಐಟಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು
ದೂರು ಸ್ವೀಕರಿಸಿ ಸ್ಥಳೀಯ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡಲು ಎಸ್‌ಐಟಿ ಸೂಚನೆ ನೀಡಿದೆ. ಹೀಗಾಗಿ ಆ ಇಬ್ಬರೂ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದಾರೆ. ಇದುವರೆಗೆ 16 ಸ್ಥಳಗಳಲ್ಲಿ ಉತ್ಖನನ ನಡೆಸಲಾಗಿದ್ದು, 6ನೇ ಪಾಯಿಂಟ್‌ನಲ್ಲಷ್ಟೇ ಅಸ್ಥಿ ಕುರುಹು ಸಿಕ್ಕಿದೆ. ತಾಂತ್ರಿಕ ಸಮಸ್ಯೆಯಿಂದ 13ನೇ ಪಾಯಿಂಟ್ ಶೋಧ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: Dharmasthala Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ
ಎಸ್‌ಐಟಿ ಮುಂದಿನ ಆಯ್ಕೆಗಳೇನು?
* ಅನಾಮಿಕ ಹೇಳಿದಂತೆ ಇನ್ನಷ್ಟು ದಿನ ಶವ ಹುಡುಕೋದು
* ಈವರೆಗಿನ ತನಿಖೆಯ ಬಗ್ಗೆ ವರದಿಯನ್ನು ಡಿಜಿಪಿಗೆ ಮಾಹಿತಿ ನೀಡೋದು
* ಇನ್ನು ಮುಂದೆ ಶವ ಹುಡುಕಾಟ ಕಷ್ಟ ಅಂತ ಡಿಜಿಪಿಗೆ ಮಾಹಿತಿ ತಿಳಿಸೋದು
* ಅಸ್ಥಿ ಪಂಜರ ಹುಡುಕಾಟ ಸಂಪೂರ್ಣ ಸ್ಥಗಿತಗೊಳಿಸೋದು
* ದಾಖಲೆಗಳ ಆಧಾರದ ಮೇಲೆ ಸಾಕ್ಷಿಗಳ ಹೇಳಿಕೆ ದಾಖಲಿಸೋದು
* ಅನಾಮಿಕನ ಹೇಳಿಕೆ ದಾಖಲು ಮಾಡಿ ವರದಿ ತಯಾರಿ ಮಾಡೋದು