– ಧರ್ಮಸ್ಥಳ ದೇವಸ್ಥಾನದ ಮೇಲಿನ ಜನರ ನಂಬಿಕೆ ಕೆಡಿಸುವ ಕೆಲಸ ಆಗಬಾರದು ಎಂದ ಸಂಸದ
ಬೆಂಗಳೂರು: ಧರ್ಮಸ್ಥಳ ಪ್ರಕರಣದ (Dharmasthala Mass Burials) ಕುರಿತು ಎಸ್‌ಐಟಿ (SIT) ತನಿಖೆಗೆ ನೀಡಿರುವುದನ್ನು ಸ್ವಾಗತ ಮಾಡುತ್ತೇವೆ. ಕಾಲಮಿತಿಯಲ್ಲಿ ಕಾನೂಬದ್ಧವಾಗಿ ಎಸ್‌ಐಟಿ ತನಿಖೆಯಾಗಬೇಕು. ಯಾರನ್ನೋ ಗುರಿಯಾಗಿಸಿಕೊಂಡು ತನಿಖೆ ನಡೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದ ಬಗ್ಗೆ ಸ್ಥಳೀಯರು ಹಾಗೂ ಅಲ್ಲಿ ಬಹಳ ದಿನಗಳವರೆಗೆ ಕೆಲಸ ಮಾಡಿರುವ ಪೊಲಿಸರಿಗೆ ಗೊತ್ತಿರುತ್ತದೆ. ದೂರು ಕೊಟ್ಟವರು ತಮ್ಮ ಮೇಲೆ ಒತ್ತಡ ಇದೆ ಎಂದು ಹೇಳಿದ್ದಾರೆ. ದೂರು ಕೊಟ್ಟವರಿಗೆ ಯಾರು ಒತ್ತಡ ಹಾಕಿದ್ದಾರೆ ಎಂದು ಹೇಳಬೇಕು. ಈ ಬಗ್ಗೆ ತನಿಖೆಯಾಗಬೇಕು. ಅಲ್ಲಿ ನಡೆದಿರುವ ಪ್ರಕರಣದ ಬಗ್ಗೆ ಪೊಲಿಸರು ಕ್ರಮ ಕೈಗೊಳ್ಳಬೇಕು. ಧರ್ಮಸ್ಥಳ ಪುರಾತನ ಹಾಗೂ ನಂಬಿಕೆಗೆ ಹೆಸರಾಗಿರುವ ದೇವಸ್ಥಾನ. ಆ ದೇವಸ್ಥಾನದ ಮೇಲಿನ ಜನರ ನಂಬಿಕೆ ಕೆಡಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ಪತನ – ಓರ್ವ ಸಾವು, ನಾಲ್ವರು ಗಂಭೀರ
ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಸ್ಥರಿಗೆ ವಾಣಿಜ್ಯ ತೆರಿಗೆ ಇಲಾಖೆಯವರು ನೋಟಿಸ್ ಕೊಟ್ಟಿದ್ದು ಸಣ್ಣ ವ್ಯಾಪಾರಸ್ಥರಿಗೆ ದೊಡ್ಡ ಆಘಾತವಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಮೇಲೆ ಹಾಕಿ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ನೆಲಮಂಗಲ | ರ‍್ಯಾಗಿಂಗ್‌ಗೆ ಹೆದರಿ ಸೆಲ್ಫಿ ವೀಡಿಯೋ ಮಾಡಿಟ್ಟು ಕಾಲೇಜು ಟಾಪರ್ ಆತ್ಮಹತ್ಯೆ
ಜಿಎಸ್‌ಟಿ ಕೌನ್ಸಿಲ್ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಜವಾಬ್ದಾರಿ ಇದೆ. ರಾಜ್ಯದ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಹೊಣೆ ಮತ್ತು ನಿರ್ವಹಣೆಯನ್ನು ರಾಜ್ಯ ವಾಣಿಜ್ಯ ತೆರಿಗೆ ಇಲಾಖೆಯವರು ನೋಡುತ್ತಾರೆ. ಈಗ ಸಣ್ಣ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿರುವುದರಿಂದ ಅವರ ವ್ಯಾಪಾರ್ ಬಂದ್ ಆಗಿರುವುದು ದೊಡ್ಡ ಹೊಡೆತ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಣ್ಣ ವ್ಯಾಪಾರಸ್ಥ ಮುಖಂಡರನ್ನು ಕರೆದು ಮಾತನಾಡಬೇಕು. ಸಿಎಂ ಹಣಕಾಸು ಸಚಿವರಾಗಿದ್ದು, ಇದನ್ನು ಬಗೆ ಹರಿಸಬೇಕು. ಹಾಗೂ ಮುಂದಿನ ದಿನಗಳಲ್ಲಿ ವ್ಯಾಪಾರಸ್ಥರು ಕಾನೂನು ಬದ್ಧವಾಗಿ ತೆರಿಗೆ ಕಟ್ಟಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: Mandya | ಕಾಲೇಜು ಹಾಸ್ಟೆಲ್‌ನಲ್ಲಿ ವೈದ್ಯಕೀಯ ವಿದ್ಯಾರ್ಥಿ ನೇಣಿಗೆ ಶರಣು
ಡಿಸಿಎಂ ಡಿಕೆಶಿವಕುಮಾರ್ ಅವರು ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ಡಿಸಿಎಂ ಡಿಕೆ ಶಿವಕುಮಾರ್‌ಗೆ ಎಲ್ಲ ಗೊತ್ತಿದ್ದು, ದಾರಿ ತಪ್ಪಿಸುತ್ತಿದ್ದಾರೆ. ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳೇ ನೋಟಿಸ್ ಕೊಟ್ಟಿದ್ದಾರೆ. ಇಲ್ಲಿ ಯಾರೂ ಯಾರ ಬಾಯಿಗೆ ವರೆಸುವ ಪ್ರಶ್ನೆ ಇಲ್ಲ. ಅವರು ಜಾರಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಕೇಸ್‌ಗೆ ಟ್ವಿಸ್ಟ್ – ಪ್ರಮುಖ ಆರೋಪಿಯಿಂದ ನಟಿ ರಚಿತಾ ರಾಮ್‌ಗೆ ಭರ್ಜರಿ ಗಿಫ್ಟ್
ಬೆಂಗಳೂರು ಮಹತ್ವ ಕಳೆದುಕೊಳ್ಳಬಾರದು:
ಬೆಂಗಳೂರು ಐದು ಮಹಾನಗರ ಪಾಲಿಕೆಯಾಗಿ ವಿಭಜನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರು ವಿಭಜನೆ ಮಾಡುವುದರಿಂದ ಅದರ ಮಹತ್ವ ಕಡಿಮೆ ಆಗಬಾರದು. ದೇಶದ ನಾಲ್ಕು ಮಹಾನಗರಕ್ಕಿಂತ ಪ್ರಖ್ಯಾತಿ ಇರುವ ನಗರ ಅಂದರೆ ಬೆಂಗಳೂರು. ವಿದೇಶದಲ್ಲಿಯೂ ಇದರ ಮಹತ್ವ ಇದೆ. ವಿಭಜನೆಯಿಂದ ಅಭಿವೃದ್ಧಿಯಲ್ಲಿ ತಾರತಮ್ಯ ಆಗದಂತೆ ನೋಡಿಕೊಳ್ಳಬೇಕು. ಕೇವಲ ರಾಜಕೀಯ ಉದ್ದೇಶದಿಂದ ಪ್ರತ್ಯೇಕ ಪಾಲಿಕೆ ಮಾಡುವುದು ಸರಿಯಲ್ಲ. ಈಗಾಗಲೇ ಬಿಬಿಎಂಪಿಗೆ ನೂರಾಹತ್ತು ಹಳ್ಳಿಗಳನ್ನು ಸೇರಿಸಲಾಗಿತ್ತು. ಅವು ಇನ್ನೂ ಅಭಿವೃದ್ಧಿ ಆಗಿಲ್ಲ. ಈಗ ಅವೆಲ್ಲ ಒಂದೇ ಪಾಲಿಕೆಗೆ ಸೇರಿದರೆ ಅವು ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಮುಡಾ ಕೇಸ್ | ಇಡಿ-ಬಿಜೆಪಿ ಪಾಲುದಾರಿಕೆಯ ಪ್ರಚಾರವನ್ನು ಸುಪ್ರೀಂ ರದ್ದುಗೊಳಿಸಿದೆ: ಸುರ್ಜೇವಾಲಾ
ದೊಡ್ಡ ರಾಜಕೀಯ ಬದಲಾವಣೆ:
ರಾಜ್ಯ ಕಾಂಗ್ರೆಸ್ ನಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಆಂತರಿಕ ಕಚ್ಚಾಟದ ಕುರಿತು ಮಾತನಾಡಿ, ಬರುವ ದಿನಗಳಲ್ಲಿ ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆ ಆಗುತ್ತದೆ. ಯಾರು ಏನೇ ಹೇಳಿದರೂ, ಆಗುವ ಬೆಳವಣಿಗೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಮಾರ್ಮಿಕವಾಗಿ ನುಡಿದರು. ಇದನ್ನೂ ಓದಿ: ಸುಳ್ಳು ಸುದ್ದಿ ಹರಿಬಿಟ್ಟ ಆರೋಪ – ತೇಜಸ್ವಿ ಸೂರ್ಯ ವಿರುದ್ಧ ಪ್ರಕರಣ ರದ್ದುಗೊಳಿಸಿದ ಸುಪ್ರೀಂ
ಇದೇ ವೇಳೆ ಮಾಜಿ ಸಚಿವರಾದ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಅವರು ಒಂದಾಗಿರುವ ಕುರಿತು ಪ್ರತಿಕ್ರಿಯಿಸಿ, ಅವರನ್ನು ಒಟ್ಟು ಗೂಡಿಸುವ ಅಗತ್ಯವಿಲ್ಲ. ಅವರು ಮೊದಲಿನಿಂದಲೂ ಒಟ್ಟಾಗಿದ್ದಾರೆ. ರಾಜಕೀಯಕ್ಕೆ ಬರುವ ಮೊದಲಿನಿಂದಲೂ ಅವರ ಸ್ನೇಹ ಗಾಢವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಜಯಮೃತ್ಯುಂಜಯ ಶ್ರೀಗಳಿಗೆ ವಿಷಪ್ರಾಶನ ಪ್ರಯತ್ನ ನಡೆದಿದೆ: ಬೆಲ್ಲದ್ ಗಂಭೀರ ಆರೋಪ