ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ (Dharmasthala Mass Burial) ಇಂದು ಕನ್ಯಾಡಿಯಲ್ಲಿ (Kanyadi) ನಡೆದ ಶೋಧ ಕಾರ್ಯ ಅಂತ್ಯಗೊಂಡಿದ್ದು ಅನಾಮಿಕ ಬರಿಗೈಯಲ್ಲಿ ವಾಪಸ್ ಆಗಿದ್ದಾನೆ.
ಇಲ್ಲಿಯವರೆಗೆ ನೇತ್ರಾವತಿ ನದಿ (Netravathi River) ತಟ, ನದಿ ಪಕ್ಕ ಇರುವ ಅರಣ್ಯ, ಬಾಹುಬಲಿ ಬೆಟ್ಟದಲ್ಲಿ ಶೋಧ ಕಾರ್ಯ ನಡೆದಿತ್ತು. ಆದರೆ ಇಂದು ಧರ್ಮಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಕನ್ಯಾಡಿಯಲ್ಲಿ ಶೋಧ ನಡೆಸಲಾಯಿತು.
ಕನ್ಯಾಡಿಯ ಖಾಸಗಿ ತೋಟದ ಪಕ್ಕದ ಅರಣ್ಯ (Forest) ಭಾಗದಲ್ಲಿ ಅನಾಮಿಕ ಶವ ಹೂತಿದ್ದೇನೆ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಎ.ಸಿ ಸ್ಟೆಲ್ಲಾ ವರ್ಗೀಸ್ ಸಮ್ಮುಖದಲ್ಲಿ ಹಿಟಾಚಿ ಮೂಲಕ 6 ಅಡಿಯಷ್ಟು ಆಳಕ್ಕೆ ಅಗೆಯಲಾಯಿತು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ| ಇದೊಂದು ಖಾಲಿ ಡಬ್ಬ, ದೊಡ್ಡ ಷಡ್ಯಂತ್ರ ನಡೆದಿದೆ: ಡಿಕೆಶಿ
ಮಳೆಯ ನಡುವೆಯೂ ಎಸ್‌ಐಟಿ ತಂಡ ಅನಾಮಿಕ ಹೇಳಿದಂತೆ ಗುಂಡಿ ತೋಡಿತು. ಯಾವುದೇ ಕುರುಹು ಪತ್ತೆಯಾಗದ ಕಾರಣ ಸಂಜೆ ಉತ್ಕನನ ಕೆಲಸವನ್ನು ಸ್ಥಗಿತಗೊಳಿಸಿ ಎಸ್‌ಐಟಿ ಅಧಿಕಾರಿಗಳು ವಾಪಸ್ ಆಗಿದ್ದಾರೆ.