ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ (Dharmasthala Mass Burial) ಸಂಬಂಧಿಸಿದಂತೆ ಇಂದು ಧರ್ಮಸ್ಥಳ ದೇಗುಲದ ವಠಾರದಲ್ಲಿ ಮಹಜರು ಮಾಡಲಾಯಿತು.
ಗುರುವಾರ ಧರ್ಮಸ್ಥಳದಿಂದ 5 ಕಿ.ಮೀ ದೂರದಲ್ಲಿರುವ ಕನ್ಯಾಡಿಯ ಖಾಸಗಿ ತೋಟವನ್ನು ದಾಟಿ ನದಿ ತೀರದ ಅರಣ್ಯ ಪ್ರದೇಶದಲ್ಲಿ ಶೋಧನೆ ನಡೆಸಿದರೂ, ಬುರುಡೆ ಕಳೇಬರ ಪತ್ತೆಯಾಗಿಲ್ಲ.
ಈ ಜಾಗದ ಪರಿಶೀಲನೆಯ ಬಳಿಕ ಎಸ್‌ಐಟಿ ದೂರುದಾರರನ್ನು ದೇವಸ್ಥಾನದ ವಠಾರದಲ್ಲಿರುವ ಮಾಹಿತಿ ಕೇಂದ್ರದ ಬಳಿ ಕರೆ ತಂದಿತು. ಆತ ಧರ್ಮಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮಹಜರು ನಡೆಸಲಾಯಿತು. ಇದನ್ನೂ ಓದಿ: 13 ವರ್ಷದ ಹಿಂದೆ ಧರ್ಮಸ್ಥಳಕ್ಕೆ ಬಂದಿದ್ದ ನನ್ನ ತಂಗಿ ವಾಪಸ್ ಬರಲೇ ಇಲ್ಲ – ಎಸ್‌ಐಟಿಗೆ ದೂರು ನೀಡಿದ ಸಹೋದರ
ದೇವಸ್ಥಾನದಲ್ಲಿ 20 ವರ್ಷ ಸ್ವಚ್ಛತಾ ಕೆಲಸ ಮಾಡುತ್ತಿದ್ದ ನೇತ್ರಾವತಿ ವಸತಿ ಗೃಹ ಮತ್ತು ದೇಗುಲದ ಶೌಚಾಲಯದ ಆಸುಪಾಸು ತನಿಖಾಧಿಕಾರಿ ಜಿತೇಂದ್ರ ದಯಾಮ ನೇತೃತ್ವದಲ್ಲಿ ಸ್ಥಳ ಮಹಜರು ನಡೆಸಲಾಯಿತು. ಇದನ್ನೂ ಓದಿ: ಧರ್ಮಸ್ಥಳ ಅಲ್ಲ ಈಗ ಕನ್ಯಾಡಿಯ ಕಾಡಿನಲ್ಲೂ ಸಿಗಲಿಲ್ಲ ಯಾವುದೇ ಮೂಳೆ!
ಮಹಜರು ಮಾಡುವಾಗ ನೂರಾರು ಜನ ಸ್ಥಳದಲ್ಲಿ ಜಮಾಯಿಸಿದ್ದರು. ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಆತನ ಓಡಾಟ ಕೆಲಸ ಮಾಡುತ್ತಿದ್ದ ಸ್ಥಳದ ಮಹಜರು ಎಲ್ಲವನ್ನೂ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ.