ಧರ್ಮಸ್ಥಳ ಬುರುಡೆ ರಹಸ್ಯ: ದಿನಕ್ಕೆ ಅಂದಾಜು 2 ಲಕ್ಷ ರೂ. ಖರ್ಚು- ಯಾವುದಕ್ಕೆ ಎಷ್ಟು?

Public TV
1 Min Read

ಮಂಗಳೂರು: ಧರ್ಮಸ್ಥಳದ ಬುರುಡೆ ರಹಸ್ಯ (Dharmasthala Mass Burial Case) ಕೆದಕುವ ಕೆಲಸ ಕಳೆದ 7 ದಿನಗಳಿಂದ ನಡೆಯುತ್ತಿದ್ದು ಅಂದಾಜು ಪ್ರತಿ ದಿನ ಸರ್ಕಾರಕ್ಕೆ 2 ಲಕ್ಷ ರೂ. ಖರ್ಚಾಗುತ್ತಿದೆ.

ಹೌದು. ವಿಶೇಷ ತನಿಖಾ ತಂಡ (SIT) ನಡೆಸುತ್ತಿರುವ ತನಿಖೆಗೆ 260 ಅಧಿಕಾರಿ, ಸಿಬ್ಬಂದಿ ಬಳಕೆ ಆಗುತ್ತಿದೆ. ಎಸ್‌ಐಟಿ ತಂಡದಲ್ಲಿ 26 ಇದ್ದರೆ, 5 ಮಂದಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, 15 ಪೌರ ಕಾರ್ಮಿಕರು, 200 ಪೊಲೀಸ್‌ ಸಿಬ್ಬಂದಿ ಇದ್ದಾರೆ.

ಒಬ್ಬರು ಸಹಾಯಕ ಆಯುಕ್ತ (ಎಸಿ), ಒಬ್ಬರು ತಹಶೀಲ್ದಾರ್‌, 5 ಮಂದಿ ಸ್ಥಳೀಯಾಡಳಿತ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇವರೆಲ್ಲರ ಸಂಬಳ ಸೇರಿ ನಿತ್ಯ ಅಂದಾಜು 2 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ: 11ನೇ ಪಾಯಿಂಟ್‌ನಲ್ಲಿ ಸಿಗಲಿಲ್ಲ ಕಳೇಬರ

 

ನಿತ್ಯ 2 ಲಕ್ಷ ಖರ್ಚು?
ಅಧಿಕಾರಿಗಳು,ಪೋಲಿಸರು,ಕಾರ್ಮಿಕರ ಊಟ, ತಿಂಡಿಗೆ ದಿನಕ್ಕೆ 35 ಸಾವಿರ ರೂ., ಅಧಿಕಾರಿಗಳ ವಿಶ್ರಾಂತಿಗಾಗಿ ಲಡ್ಜ್‌ಗೆ ದಿನಕ್ಕೆ 25 ಸಾವಿರ ರೂ., ಗುಂಡಿ ಅಗೆಯುವ ಕಾರ್ಮಿಕರಿಗೆ ದಿನಕ್ಕೆ 2 ಸಾವಿರ ರೂ.ಯಂತೆ 15 ಜನ ಕಾರ್ಮಿಕರಿಗೆ ದಿನಕ್ಕೆ 30 ಸಾವಿರ ರೂ. ಆಗಲಿದೆ. ಇದನ್ನೂ ಓದಿ: Dharmasthala | 13 ವರ್ಷದ ಹಿಂದಿನ ಕೇಸ್ ಬಗ್ಗೆ ಮತ್ತೊಂದು ದೂರು – ದೂರುದಾರ ಹೇಳಿದ್ದೇನು?

ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆಗೆ ದಿನಕ್ಕೆ 20 ಸಾವಿರ ರೂ., ವಿಧಿ ವಿಜ್ಞಾನ ತಂಡದ ವಿಶೇಷ ಉಪಕರಣಗಳ ಬಳಕೆ ದಿನಕ್ಕೆ 3 ರಿಂದ 4 ಸಾವಿರ ರೂ. ಗುಂಡಿ ಸಿಕ್ಕ ಕಡೆ ತಾತ್ಕಾಲಿಕ ಟೆಂಟ್ ನಿರ್ಮಾಣಕ್ಕೆ ದಿನಕ್ಕೆ 3-4 ಸಾವಿರ ರೂ. ಖರ್ಚಾಗಲಿದೆ.

Share This Article