ಬುರುಡೆ ರಹಸ್ಯ| 13ನೇ ಜಾಗದ ಶೋಧಕ್ಕೆ GPR ಬಳಕೆ ಸಾಧ್ಯತೆ

Public TV
1 Min Read

ಮಂಗಳೂರು: ಧರ್ಮಸ್ಥಳ ಬುರುಡೆ ರಹಸ್ಯ (Dharmasthala Mass Burial) ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ತೋರಿಸಿದ 13ನೇ ಜಾಗವನ್ನು ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ಮೂಲಕ ಪರಿಶೋಧನೆ ನಡೆಸುವ ಸಾಧ್ಯತೆಯಿದೆ.

ದೂರುದಾರ ಒಟ್ಟು 13 ಜಾಗದಲ್ಲಿ ಶವಗಳನ್ನು ಹೂತಿದಿದ್ದೇನೆ. ಅದರಲ್ಲೂ ಪಾಯಿಂಟ್‌ ನಂಬರ್‌ 9 ರಿಂದ ಪಾಯಿಂಟ್‌ 13ರವೆಗಿನ ಜಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಹೆಣವನ್ನು ಹೂಳಿದ್ದೇನೆ ಎಂದು ವಿಶೇಷ ತನಿಖಾ ತಂಡಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಗಿರೀಶ್‌ ಮಟ್ಟಣನವರ್‌, ಮಹೇಶ್‌ ಶೆಟ್ಟಿ ತಿಮರೋಡಿ, ಸಮೀರ್‌ ವಿರುದ್ಧ ಎಫ್‌ಐಆರ್‌ ದಾಖಲು

ಈತನ ಮಾಹಿತಿಯಂತೆ ಇಲ್ಲಿಯವರೆಗೆ 12 ಸ್ಥಳಗಳಲ್ಲಿ ಶೋಧ ನಡೆಸಿದ್ದು 6ನೇ ಜಾಗದಲ್ಲಿ ಅಸ್ಥಿ ಸಿಕ್ಕಿದ್ದು ಬಿಟ್ಟರೆ ಬೇರೆ ಯಾವುದೇ ಜಾಗದಲ್ಲಿ ಅಸ್ಥಿ ಪತ್ತೆಯಾಗಿಲ್ಲ. ಹೀಗಾಗಿ ಈಗ ಬಾಕಿ ಇರುವ ಒಂದು ಜಾಗದಲ್ಲಿ ಜಿಪಿಆರ್‌ ಯಂತ್ರದ ಮೂಲಕ ಶೋಧ ನಡೆಸಲು ವಿಶೇಷ ತನಿಖಾ ತಂಡ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

ಈ ಸಂಬಂಧ GPR ಬಗ್ಗೆ ಎಸ್‌ಐಟಿ ಅಧಿಕಾರಿಗಳು ತಜ್ಞರ ಸಲಹೆ ಪಡೆಯುತ್ತಿದ್ದಾರೆ. ಸದ್ಯ ಈಗ ಕಾರ್ಮಿಕರ ಸಹಾಯದಿಂದ ಭೂಮಿಯನ್ನು ಅಗೆಯಲಾಗಯತ್ತಿದೆ. ಆದರೆ ಜಿಪಿಆರ್‌ ಬಳಸಿದರೆ ಮಣ್ಣು ಅಗೆಯದೇ ಭೂಮಿ ಒಳಗಡೆ ಇರುವ ವಸ್ತುಗಳನ್ನು ಪತ್ತೆ ಹಚ್ಚಬಹುದು. ಈ ಕಾರಣಕ್ಕೆ ಜಿಪಿಆರ್‌ ಬಳಸುವಂತೆ ದೂರುದಾರ ಪರ ವಕೀಲರು ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿಧರ್ಮಸ್ಥಳ ಬುರುಡೆ ರಹಸ್ಯಕಗ್ಗಂಟಾಗಿದೆ 13ನೇ ಪಾಯಿಂಟ್  ಸವಾಲುಗಳ ಮಧ್ಯೆ ಉತ್ಖನನಕ್ಕೆ ರೆಡಿಯಾದ ಎಸ್‌ಐಟಿ

ಪಾಯಿಂಟ್ ನಂಬರ್ 13 ರಲ್ಲಿ ವಿದ್ಯುತ್ ಕಂಬಗಳು , ಹಲವಾರು ವಿದ್ಯುತ್ ಸಂಪರ್ಕಗಳಿವೆ. ಅಷ್ಟೇ ಅಲ್ಲದೇ ನೇತ್ರಾವದಿ ನದಿಗೆ ಸಣ್ಣ ಅಣೆಕಟ್ಟು ಸಹ ಕಟ್ಟಲಾಗಿದೆ. ಈ ಅಡೆ ತಡೆಗಳ ನಡುವೆ ಉತ್ಕನನ ಮಾಡುವುದು ಎಸ್‌ಐಟಿ ಸವಾಲಿನ ಕೆಲಸ. ಜಿಪಿಆರ್‌ ಬಳಕೆ ಬಗ್ಗೆ ಎಸ್‌ಐಟಿ ಅಧಿಕಾರಿಗಳ ಮಧ್ಯೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ತೀರ್ಮಾನವಾದರೆ ಜಿಪಿಆರ್‌ ಬಳಕೆಯಾಗಲಿದೆ. ಒಂದು ವೇಳೆ ಜಿಪಿಆರ್‌ ಸಿಗದೇ ಇದ್ದರೆ ಕಾರ್ಮಿಕರಿಂದ ಶೋಧ ನಡೆಯುವ ಸಾಧ್ಯತೆಯಿದೆ.

Share This Article