ನನಗೆ ಗನ್‌ಮ್ಯಾನ್‌ ಭದ್ರತೆ ನೀಡಿ: ಎಸ್‌ಐಟಿ ಮುಂದೆ ದೂರುದಾರನಿಂದ ಬೇಡಿಕೆ

Public TV
1 Min Read

ಮಂಗಳೂರು: ಧರ್ಮಸ್ಥಳ (Dharmasthala) ಸಂಘರ್ಷದ ಬೆನ್ನಲ್ಲೇ ಸಾಕ್ಷಿದಾರನಾಗಿ ಬಂದಿರುವ ದೂರುದಾರ ಈಗ ಗನ್‌ಮ್ಯಾನ್‌ ಭದ್ರತೆಯನ್ನು (Gunman Security) ಕೇಳಿರುವ ವಿಚಾರ ಬೆಳಕಿಗೆ ಬಂದಿದೆ.

ಹೌದು, ಬುಧವಾರ ಸಂಜೆ ಧರ್ಮಸ್ಥಳದಲ್ಲಿ ನಡೆದ ಘರ್ಷಣೆಯ ಬಳಿಕ ದೂರುದಾರನಿಂದ ಈ ವಿಶೇಷ ಮನವಿ ಬಂದಿದೆ. ನನ್ನ ಮೇಲೂ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗನ್‌ಮ್ಯಾನ್‌ ನೀಡಬೇಕೆಂದು ಮನವಿ ಮಾಡಿದ್ದಾನೆ.

ಗುರುವಾರದ ವಿಚಾರಣೆಯ ಸಂದರ್ಭದಲ್ಲಿ ದೂರುದಾರನ ಪರ ವಕೀಲರು ವಿಶೇಷ ತನಿಖಾ ತಂಡಕ್ಕೆ (SIT) ಗನ್‌ಮ್ಯಾನ್‌ ನೀಡಬೇಕೆಂದು ಲಿಖಿತ ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಅನಾಮಿಕ ಉಜಿರೆಯ ವ್ಯಕ್ತಿಯ ಮನೆಯಲ್ಲಿ ಉಳಿಯುತ್ತಿದ್ದಾನೆ, ನಿಮ್ಮ ವಶಕ್ಕೆ ಪಡೆಯಿರಿ: SITಗೆ ಮನವಿ

ಶೋಧ ಮುಕ್ತಾಯದ ನಂತರವೂ ನನಗೆ ಗನ್‌ ಮ್ಯಾನ್‌ ಭದ್ರತೆ ನೀಡಬೇಕೆಂದು ಎಸ್‌ಐಟಿ ಎಸ್‌ಪಿ ಜಿತೇಂದ್ರ ದಯಾಮ್ ಮುಂದೆ ಒತ್ತಾಯ ಮಾಡಿದ್ದಾನೆ. ಇದನ್ನೂ ಓದಿ: ಮಹೇಶ್‌ ಶೆಟ್ಟಿ ತಿಮರೋಡಿ, ಮಟ್ಟಣ್ಣನವರ್, ಪುನೀತ್‌ ಕೆರೆಹಳ್ಳಿ ವಿರುದ್ಧ ಎಫ್‌ಐಆರ್‌ ದಾಖಲು

ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ದೂರುದಾರ ಆಗಮಿಸಿದ್ದಾನೆ. ದೂರುದಾರ ಆಗಮಿಸಿದ ಖಾಸಗಿ ಕಾರಿನ ಮುಂದೆ ಪೊಲೀಸರು ಕಾವಲು ಕಾಯುತ್ತಿದ್ದಾರೆ. ಪೊಲೀಸ್ ವಾಹನದಲ್ಲಿದ್ದ ಚಾಲಕ ಸಹಿತ ಇಬ್ಬರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

Share This Article