– ನನ್ನ ಮನಸಾಕ್ಷಿಗೆ ಗೊತ್ತು, ನಾನೇನು ತಪ್ಪು ಮಾಡಿಲ್ಲ ಎಂದ ಯೂಟ್ಯೂಬರ್
ಬೆಂಗಳೂರು: ನನಗೆ ಯಾವುದೇ ರೀತಿಯ ಫಂಡ್ ಬಂದಿಲ್ಲ. ನನ್ನ ಎಲ್ಲಾ ವಿವರ, ದಾಖಲೆಗಳನ್ನು ಅಧಿಕಾರಿಗಳಿಗೆ ಕೊಟ್ಟಿದ್ದೇನೆ ಎಂದು ಸಮೀರ್ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದಿದ್ದಾರೆ.
ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ವಿಚಾರಣೆ ಎದುರಿಸುತ್ತಿರುವ ಸಮೀರ್ ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾನು ಶೀಘ್ರದಲ್ಲೇ ಆರೋಪಗಳಿಗೆ ಸ್ಪಷ್ಟನೆ ಕೊಡುತ್ತೇನೆ ಎಂದು ಈ ಹಿಂದೆ ಹೇಳಿದ್ದರು. ಅದರಂತೆ ಈಗ ವೀಡಿಯೋ ಮಾಡಿ ಹಂಚಿಕೊಂಡಿದ್ದಾರೆ.
ಫಂಡಿಂಗ್ ಆರೋಪದ ಬಗ್ಗೆ ಸಮೀರ್ ವಿಡಿಯೋದಲ್ಲಿ ಮಾತನಾಡಿದ್ದು, ನನಗೆ ಯಾವ ಫಂಡಿಂಗ್ ಕೂಡ ಬಂದಿಲ್ಲ. ನನ್ನ ಆಧಾರ್, ಪ್ಯಾನ್ ಕಾರ್ಡ್, ಮನೆ ಲೀಸ್ ಅಗ್ರಿಮೆಂಟ್ ಎಲ್ಲವೂ ಪೊಲೀಸರ ಬಳಿ ಇದೆ. ಎರಡು ಬ್ಯಾಂಕ್ ವಿವರ ಕೂಡ ಪೊಲೀಸರ ಬಳಿ ಇದೆ ಎಂದು ತಿಳಿಸಿದ್ದಾರೆ.
ನನಗೆ ಯಾವುದೇ ರೀತಿ ಫಂಡ್ ಬಂದಿಲ್ಲ. ನಾನು ದುಡ್ಡು ಪಡೆದು ವಿಡಿಯೋ ಮಾಡಿದ್ರೆ ತನಿಖೆ ವೇಳೆ ಹೊರಬರುತ್ತಿತ್ತು. ಪೊಲೀಸರ ಬಳಿ ನನ್ನ ಆಧಾರ್ ಕಾರ್ಡ್ನಿಂದ ಹಿಡಿದು ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ನಾನು ಓದಿರುವಂತಹ ಶಾಲೆ ಮಾಹಿತಿ, ನನ್ನ ಕಾರು ನಂಬರ್, ಆರ್‌ಸಿ ಮಾಹಿತಿ, ಮನೆ ಲೀಸ್ ಅಗ್ರಿಮೆಂಟ್, ಪಾಸ್‌ಬುಕ್ ಪ್ರತಿಯೊಂದು ಕಾಪಿ ಕೊಟ್ಟಿದ್ದೇನೆ. ನನ್ನ ಬಳಿ 2 ಬ್ಯಾಂಕ್ ಅಕೌಂಟ್‌ಗಳಿವೆ. 1 ವರ್ಷದ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನ ಸಂಧಪಟ್ಟ ಅಧಿಕಾರಿಗಳಿಗೆ ಕೊಟ್ಟಿದ್ದೇನೆ. ನನ್ನ ಮನಸಾಕ್ಷಿಗೆ ಗೊತ್ತು. ನಾನೇನು ತಪ್ಪು ಮಾಡಿಲ್ಲ ಅಂತಾ ಎಂದು ವೀಡಿಯೋದಲ್ಲಿ ಸಮರ್ಥಿಸಿಕೊಂಡಿದ್ದಾರೆ.