ಮಂಗಳೂರು: ಧರ್ಮಸ್ಥಳದ ಶವ ಹೂತಿಟ್ಟ (Dharmasthala Mass Burials) ಪ್ರಕರಣದ ತನಿಖೆ ಮುಂದುವರಿದಿದೆ. ಒಂದೆಡೆ ವಿಠಲ್ ಗೌಡ ಹತ್ತಾರು ಶವ ನೋಡಿದ್ದೇನೆ ಎಂದಿದ್ದು, ಇನ್ನೊಂದೆಡೆ ಇಬ್ಬರು ಹೈಕೋರ್ಟ್‌ಗೆ ರಿಟ್ ಅರ್ಜಿ (Writ Petition) ಹಾಕಿ ಬಂಗ್ಲೆಗುಡ್ಡೆಯಲ್ಲಿ (Banglegudde) ಉತ್ಖನನ ಮಾಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಬಂಗ್ಲೆಗುಡ್ಡೆಯ ವಿಚಾರದಲ್ಲಿ ಗೊಂದಲದಲ್ಲಿರುವ ಎಸ್‌ಐಟಿ (SIT) ರಹಸ್ಯ ಭೇದಿಸಲು ಮುಂದಾಗಿದೆ. ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತನಿಖೆಗೆ ಪ್ಲಾನ್ ಮಾಡಿದೆ.
ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣದ ತನಿಖೆ ಮುಂದುವರಿದಿದೆ. ಸದ್ಯ ತನಿಖೆ ನಡೆಸುತ್ತಿರುವ ಎಸ್‌ಐಟಿ ಹಲವಾರು ಗೊಂದಲದಲ್ಲಿದೆ. ಒಂದೆಡೆ ತಲೆ ಬುರುಡೆಯ ಮಹಜರು ನಡೆಸಲು ಬಂಗ್ಲೆಗುಡ್ಡೆಗೆ ತೆರಳಿದ ವೇಳೆ ರಾಶಿ ರಾಶಿ ಅಸ್ಥಿಪಂಜರ ನೋಡಿದ್ದೇನೆ ಎಂದು ಸೌಜನ್ಯಳ ಓರ್ವ ಮಾವ ವಿಠಲಗೌಡ ಹೇಳಿದ್ದ. ಇನ್ನೊಂದೆಡೆ ಸೌಜನ್ಯಳ ಇನ್ನೋರ್ವ ಮಾವ ವಿಠಲ ಗೌಡರ ತಮ್ಮ ಪುರಂದರ ಗೌಡ ಹಾಗೂ ಸಂಬಂಧಿ ತುಕರಾಮ ಗೌಡ ಹೈಕೋರ್ಟ್‌ಗೆ ರಿಟ್ ಅರ್ಜಿ ಹಾಕಿ ಬಂಗ್ಲೆಗುಡ್ಡೆಯಲ್ಲಿ ಶವ ಹೂತಿಟ್ಟಿರೋದನ್ನ ನಾವು ತೋರಿಸುತ್ತೇವೆ, ಅದನ್ನ ಉತ್ಖನನ ಮಾಡಲು ಎಸ್‌ಐಟಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ಕುರಿತು ಉತ್ತರಿಸಲು ಎಸ್‌ಐಟಿಗೆ ಹೈಕೋರ್ಟ್ ನೋಟಿಸ್ ನೀಡಿದೆ. ಇದನ್ನೂ ಓದಿ: ಈ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ: ಸುನಿಲ್ ಕುಮಾರ್ ಕಿಡಿ
ತಲೆ ಬುರುಡೆಯ ಮಹಜರು ನಡೆಸುತ್ತಿದ್ದ ಎಸ್‌ಐಟಿಗೆ ಇದೀಗ ಈ ವಿಚಾರ ಗೊಂದಲವನ್ನ ಸೃಷ್ಟಿಸಿದೆ. ಅರಣ್ಯ ಪ್ರದೇಶದೊಳಗೆ ಮತ್ತೆ ಉತ್ಖನನ ಮಾಡಬೇಕಾದರೆ ಸಾಕಷ್ಟು ಸವಾಲುಗಳು ಎದುರಾಗೋ ಹಿನ್ನಲೆಯಲ್ಲಿ ಸದ್ಯ ಅರಣ್ಯ ಇಲಾಖೆಯಿಂದ ಬಂಗ್ಲೆಗುಡ್ಡೆಯ ಸರ್ವೆ ದಾಖಲೆಗಳನ್ನ ಪಡೆದುಕೊಂಡಿದೆ. ಈ ಹಿಂದೆ ಅರಣ್ಯದ ಅಂಚಿನಲ್ಲಿ ಉತ್ಖನನ ನಡೆದಿರುವುದರಿಂದ ಯಾವುದೇ ಸವಾಲು ಇರಲಿಲ್ಲ. ಇದೀಗ ಅರಣ್ಯದೊಳಗಿನ ಉತ್ಖನನ ಆಗಬೇಕಾಗಿರುವುದರಿಂದ, ಕಾನೂನು ಅಡ್ಡಿಯಾಗುವುದರಿಂದ ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ಎಸ್‌ಐಟಿ ತೀರ್ಮಾನಿಸಿದೆ. ಅರಣ್ಯದ ಸಮಗ್ರ ವರದಿ ಪಡೆದು ಅನುಮತಿ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ವಿಪಕ್ಷಗಳಿಗೆ ಕ್ಷೇತ್ರ ಅಭಿವೃದ್ಧಿಗೆ 25 ಕೋಟಿ ರಿಲೀಸ್ ಮಾಡಿದ ಸಿಎಂ
ಬಂಗ್ಲೆಗುಡ್ಡೆಯ ಮಹಜರು ಅಥವಾ ಉತ್ಖನನ ಮಾಡೋ ಬಗ್ಗೆ ಎಸ್‌ಐಟಿ ಇನ್ನೂ ಸರಿಯಾದ ನಿರ್ಧಾರ ಮಾಡಿಲ್ಲ. ಬಂಗ್ಲೆಗುಡ್ಡೆಯಲ್ಲಿ ಈ ಹಿಂದೆ ಆತ್ಮಹತ್ಯೆ ಮಾಡಿಕೊಂಡವರ ಅಸ್ಥಿಪಂಜರಗಳು ಇರುವ ಸಾಧ್ಯತೆ ಇದ್ದು, ಅದನ್ನ ಸ್ಥಳೀಯ ಪೊಲೀಸರು ಮಹಜರು ಮಾಡಬೇಕ, ಎಸ್‌ಐಟಿ ಮಾಡಬೇಕಾ ಅನ್ನೋ ಗೊಂದಲದಲ್ಲಿದ್ದಾರೆ. ಹೀಗಾಗಿ ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಮಾಡಲು ಎಸ್‌ಐಟಿ ನಿರ್ಧರಿಸಿದೆ. ಇದನ್ನೂ ಓದಿ: ಸಚಿವ ಜಮೀರ್ ಅಕ್ರಮ ಆಸ್ತಿ ಗಳಿಕೆ ಕೇಸ್ – ದಿನೇಶ್ ಗುಂಡೂರಾವ್‌ಗೆ ಲೋಕಾಯುಕ್ತ ನೋಟಿಸ್