– ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ
ಮಂಗಳೂರು: ಕಾನೂನು ಅರಿವಿಲ್ಲದೇ ತಪ್ಪು ಮಾಡಿದ್ರೆ ಅದಕ್ಕೆ ತಕ್ಕದಾದ ಶಿಕ್ಷೆ ತೆಗೆದುಕೊಳ್ಳಲೇಬೇಕು. ಸತ್ಯದ ಹೋರಾಟದಲ್ಲಿ ಸುಳ್ಳು ಸೃಷ್ಟಿ ಮಾಡಿದರೂ ಶಿಕ್ಷೆ ಅನುಭವಿಸಬೇಕು ಎಂದು ಧರ್ಮಸ್ಥಳ ಬುರುಡೆ ಪ್ರಕರಣದ (Dharmasthala Case) ಎರಡನೇ ದೂರುದಾರ ಜಯಂತ್ (Jayanth T) ಹೇಳಿದ್ದಾರೆ.
ಎಸ್‌ಐಟಿ (SIT) ವಿಚಾರಣೆಗೆ ತೆರಳುವ ಮುನ್ನ ಪ್ರತಿಕ್ರಿಯೆ ನೀಡಿದ ಅವರು, ನಾನು ತನಿಖೆ ಮುಗಿಸಿ ಹೊರಗೆ ಬರುವಾಗ ಜನ ಹೊಡೆದಿದ್ದಾರಾ ಎಂದು ಕೇಳುತ್ತಿದ್ದಾರೆ. ಆದರೆ ಎಸ್‌ಐಟಿ ಅಧಿಕಾರಿಗಳು ನಿಯಮ ಪ್ರಕಾರ ತನಿಖೆ ಮಾಡುತ್ತಿದ್ದಾರೆ. ನನಗೆ ಎಸ್‌ಐಟಿಯವರು ಹೊಡೆದಿಲ್ಲ, ದಾಖಲೆ ಇಟ್ಟುಕೊಂಡು ಅವರು ಕೆಲಸ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನೇಪಾಳದಲ್ಲಿ ಸಿಲುಕಿದ್ದಾರೆ ರಾಮನಗರದ 4 ಮಂದಿ ಪ್ರವಾಸಿಗರು
ಎಸ್‌ಐಟಿಯವರ ಮುಂದೆ ಯಾವುದೇ ಸುಳ್ಳು ಹೇಳಲು ಆಗಲ್ಲ. ಯಾರು ತನಿಖೆಗೆ ಬಂದರೂ ಸಹ ಸತ್ಯವನ್ನೇ ಹೇಳಿ. ನನ್ನ ಮೂರು ಮೊಬೈಲ್ ಎಸ್‌ಐಟಿಯವರಿಗೆ ಒಪ್ಪಿಸಿದ್ದೇನೆ. ಎಫ್‌ಎಸ್‌ಎಲ್‌ಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಏನಾದರೂ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಒಪ್ಪಿಸುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ರಕ್ತ ಬೆರಕೆಯಲ್ಲ, ಪ್ಯೂರ್ ಹಿಂದುತ್ವ – ಸಿಟಿ ರವಿ