– ಅನಾಮಧೇಯ ವ್ಯಕ್ತಿ ಜೊತೆ ದಿನೇಶ್ ಗಾಣಿಗ ಮಾತುಕತೆ
– ತಿಮರೋಡಿ ಜೈಲು ಸೇರುತ್ತಿದ್ದಂತೆ ಅಸಮಾಧಾನ ಸ್ಫೋಟ
ಮಂಗಳೂರು: ಗಿರೀಶ್ ಮಟ್ಟಣ್ಣನವರ್ (Girish Mattannavar) ವಿರುದ್ಧ ಸೌಜನ್ಯಪರ ಹೋರಾಟಗಾರರಲ್ಲೇ ಒಡಕು ಮೂಡಿದೆ. ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarody) ಜೈಲು ಸೇರುತ್ತಿದ್ದಂತೆ ಅಸಮಾಧಾನ ವ್ಯಕ್ತವಾಗಿದೆ.
ಹೋರಾಟಗಾರರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಜನ, ಮಟ್ಟಣ್ಣನವರ್ ಪ್ಲ್ಯಾನ್‌ನಿಂದ ಎಲ್ಲಾ ಕೆಟ್ಟು ಹೋಯ್ತು. ನಮ್ಮ ಹೋರಾಟ ಹಳ್ಳಹಿಡಿಯಿತು ಅಂತ ಉಡುಪಿ ಮೂಲದ ಸೌಜನ್ಯ ಹೋರಾಟಗಾರ ದಿನೇಶ್ ಗಾಣಿಗ ಗ್ರಾಮಸ್ಥರ ಜೊತೆ ಮಾತನಾಡಿದ್ದು ಎನ್ನಲಾದ ಆಡಿಯೋ (Audio) ಈಗ ವೈರಲ್ ಆಗಿದೆ.
ಆಡಿಯೋ ವೈರಲ್ ಬಳಿಕ ಮಾತನಾಡಿದ ಸೌಜನ್ಯ ಪರ ಹೋರಾಟಗಾರ ದಿನೇಶ್ ಗಾಣಿಗ, ಇದು ನನ್ನದೇ ಆಡಿಯೋವಾಗಿದ್ದು ನಾನೇ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಹೋರಾಟಕ್ಕೂ ಅನನ್ಯ ಭಟ್ ಪ್ರಕರಣಕ್ಕೂ ಸಂಬಂಧ ಇಲ್ಲ. ತಪ್ಪು ಸರಿ ಎಲ್ಲವನ್ನೂ ಎಸ್‌ಐಟಿ ನಿರ್ಧರಿಸಲಿ ಅಂತ ಹೇಳಿದ್ದಾರೆ. ಇದನ್ನೂ ಓದಿ: AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್
ಆಡಿಯೋದಲ್ಲಿ ಏನಿದೆ?
ಗ್ರಾಮಸ್ಥ– ಎಂಥಾ ಮಾರ್ರೇ ಅವಸ್ಥೆ? ಎಲ್ಲಾ ಹಾಳು ಬಿದ್ದೊಯ್ತಲ್ಲ ಮಾರ್ರೆ ಇದು.
ದಿನೇಶ್ ಗಾಣಿಗ– ಇಲ್ಲ ಇಲ್ಲ ನೋಡುವ… ಗಡಿಬಿಡಿ ಮಾಡಬೇಡಿ
ಗ್ರಾಮಸ್ಥ– ಆ ಅಜ್ಜಿಯನ್ನೆಲ್ಲಾ ತಂದು ನಿಮಗೆ ಹೋರಾಟ ಬೇಕಿತ್ತಾ?
ದಿನೇಶ್ ಗಾಣಿಗ – ಯಾರು ಮಾರ್ರೆ ಅವರಿಗೆ ಹೇಳೋದು? ಅಜ್ಜಿಗೂ ನಮಗೂ ಸಂಬಂಧ ಇಲ್ಲ.
ಗ್ರಾಮಸ್ಥ – ಫಸ್ಟ್ ಆ ಬೋ…ಮಟ್ಟಣ್ಣನವರ್ ನನ್ನ ಅಲ್ಲಿಂದ ಕಳುಹಿಸಿ. ಇಲ್ಲಾಂದ್ರೆ ಎಲ್ಲಾ ಹೋರಾಟಗಾರರು ಒದ್ದು ಒಳಗೆ ಹೋಗ್ತಾರೆ
ದಿನೇಶ್ ಗಾಣಿಗ – ಫಸ್ಟ್ ಅವರನ್ನ ಹೊರಗೆ ಕಳುಹಿಸಿದರೆ ಸರಿಯಾಗ್ತಿತ್ತು. ಮಾಡೋದು ಅವರೇ ಎಲ್ಲಾ.ಹಲ್ಕಟ್ ಕೆಲ್ಸ
ಗ್ರಾಮಸ್ಥ – ಘಟ್ಟದಿಂದ ಬಂದು ನಿಮ್ಮನ್ನೆಲ್ಲ ಹಾಳು ಮಾಡಿದ್ದಾನೆ. ಅವ ನಿಮ್ಮ ಜೊತೆ ಇಲ್ಲಿ ಏನು ಮಾಡುತ್ತಿದ್ದಾನೆ? ಕಳಿಸ್ರೀ ಅವನನ್ನ ತಿಮರೋಡಿ ಬೂಟೆಲ್ಲಾ ಹುಡಿ ಆಗುತ್ತೆ. ಜನ ಬರ್ತಿದ್ದಾರೆ ಉಜಿರೆ ಧರ್ಮಸ್ಥಳ ಕಡೆ. ನಿಮ್ಮ ತಲೆಯಲ್ಲಿರುವ ನಾಲ್ಕು ಕೂದಲೆಲ್ಲ ಕಿತ್ತು ಹಾಕ್ತಾನೆ ಅವನು.
ದಿನೇಶ್ ಗಾಣಿಗ – ಆಯ್ತು ಆಯ್ತು ಗೊತ್ತಾಯ್ತು ಮಾತನಾಡುತ್ತಿದ್ದೇವೆ.
ಗ್ರಾಮಸ್ಥ– ಹಾಳೆ ತಟ್ಟೆ ಹಿಡ್ಕೊಂಡು ಓಡ್ರಿ ಎಲ್ಲಾ. ಹೋರಾಟಗಾರರು ಎಲ್ಲಾ ಬರಿ ಸುಳ್ಳು! ನಮಗೆ ಬಹಳ ಬೇಜಾರಾಗಿ ಬಿಟ್ಟಿದೆ ಈಗ.
ದಿನೇಶ್ ಗಾಣಿಗ – ನಮಗೂ ಬಹಳ ಬೇಜಾರಾಗಿದೆ ನಾವು ಸೌಜನ್ಯ ಪರ ಹೋರಾಟಗಾರರು.
ಗ್ರಾಮಸ್ಥ- ಫಿಕ್ಸ್ ರಿ ಜೈಲ್ ಮುದ್ದೆ ಊಟ ನಿಮಗೆ ಫಿಕ್ಸ್ ರೀ, ಏನ್ರೀ ಎಲ್ಲಾ ಮರ್ಯಾದೆ ತೆಗೆದು ಬಿಟ್ರಲ್ರೀ.