– ಕಾಡಿನಿಂದ ಬುರುಡೆ ತಂದಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಹೇಳಿದ್ದ ವಿಠಲ್ ಗೌಡ
ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದ ಬಂಗ್ಲೆಗುಡ್ಡೆ (Banglegudde) ರಹಸ್ಯ ಭೇದಿಸಲು ಎಸ್‌ಐಟಿ ಮುಂದಾಗಿದೆ. ಬಂಗ್ಲೆಗುಡ್ಡೆದ ದಟ್ಟಾರಣ್ಯದಲ್ಲಿ ಇಂದು ಮಹಜರಿಗೆ ಎಸ್‌ಐಟಿ ಹೋಗಿದೆ.
ಅರಣ್ಯ ಇಲಾಖೆ ಲೋಕೋಪಯೋಗಿ ಇಲಾಖೆ, ಸೋಕೋ ಟೀಮ್, ಕಂದಾಯ ಇಲಾಖೆ, ಪಂಚಾಯತ್ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಮಹಜರಿಗೆ ಹಾಜರಿರಲು ಸೂಚನೆ ನೀಡಲಾಗಿದೆ. ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ ನೇತೃತ್ವದಲ್ಲಿ ಮಹಜರು ಪ್ರಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಬಂಗ್ಲೆಗುಡ್ಡೆಯಲ್ಲಿ ಉತ್ಖನನ ಮಾಡುವಂತೆ ರಿಟ್ ಅರ್ಜಿ – ಅರಣ್ಯ ಇಲಾಖೆಯಿಂದಲೂ ಮಾಹಿತಿ ಪಡೆದ ಎಸ್‌ಐಟಿ
ಭೂಮಿಯ ಮೇಲ್ಭಾಗದಲ್ಲಿರುವ ಅಸ್ಥಿಪಂಜರಗಳನ್ನ ಮಹಜರು ನಡೆಸಿ ತೆಗೆಯುವ ಸಾಧ್ಯತೆ ಇದೆ. ಬಂಗ್ಲೆಗುಡ್ಡೆಯಲ್ಲಿ ಭೂಮಿ ಅಗೆದು ಸ್ಥಳ ಪರಿಶೋಧನೆ ನಡೆಸೋದಿಲ್ಲ. ವಿಠಲ್ ಗೌಡ ಬುರುಡೆ ತಂದ ಹಾಗೂ ಅಡಗಿಸಿಟ್ಟಿದ್ದ ಸ್ಥಳದ ಸುತ್ತ ಎಸ್‌ಐಡಿ ಮಹಜರು ಮಾಡಲಿದೆ.
ಬಂಗ್ಲೆಗುಡ್ಡೆ ಕಾಡಿನಿಂದ ಬುರುಡೆ ತಂದಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ವಿಠಲ್ ಗೌಡ ಹೇಳಿಕೆ ನೀಡಿದ್ದ. ಬುರುಡೆ ತಂದ ಹಾಗೂ ಅಡಗಿಸಿಟ್ಟ ಜಾಗದಲ್ಲಿ ಎರಡು ಬಾರಿ ಮಹಜರು ನಡೆಸಲಿದೆ. ಬಂಗ್ಲೆಗುಡ್ಡೆ ಕಾಡಿನಲ್ಲಿ ರಾಶಿ ರಾಶಿ ಮಾನವನ ಕಳೇಬರ ಇದೆ ಎಂದು ಹೇಳಿದ್ದ. ಮಹಜರು ವೇಳೆ ಸಾಕಷ್ಟು ಅಸ್ಥಿಪಂಜರ ಕಾಣಸಿಕ್ಕಿದೆ ಎಂದಿದ್ದ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ – ಬಂಗ್ಲೆ ಗುಡ್ಡ ಕಾಡಿನಲ್ಲಿ 3 ಅಸ್ಥಿಪಂಜರ ಪತ್ತೆ
ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಬಂಗ್ಲೆಗುಡ್ಡೆಗೆ ತಂಡ ತೆರಳಿದೆ. ಸೋಕೊ ತಂಡ, ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿ, ಮೆಟಲ್ ಡಿಟೆಕ್ಟರ್ ತಂಡ ಸಾಥ್ ನೀಡಿದೆ. ನೇತ್ರಾವತಿ ಸ್ನಾನಘಟ್ಟದ ಬಳಿಯ ಅರಣ್ಯ ಪ್ರವೇಶದಿಂದಲೇ ಶೋಧ ಆರಂಭವಾಗಲಿದೆ. 13 ಎಕರೆ ವಿಸ್ತೀರ್ಣದಲ್ಲಿರೋ ಬಂಗ್ಲೆಗುಡ್ಡೆ ಪೂರ್ತಿ ಎಸ್‌ಐಟಿ ಶೋಧ ನಡೆಸಲಿದೆ.