Dharmasthala Case | ಎಸ್‌ಐಟಿಯಿಂದ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಅರೆಸ್ಟ್‌

Public TV
0 Min Read

ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸುಳ್ಳುಗಳ ಸರಮಾಲೆ ಹೆಣೆದು ಕಥೆ ಕಟ್ಟಿದ್ದ ಮುಸುಕುಧಾರಿ ಚಿನ್ನಯ್ಯನನ್ನು  ವಿಶೇಷ ತನಿಖಾ ತಂಡ (SIT) ಬಂಧಿಸಿದೆ. ಸತತ ವಿಚಾರಣೆಯ ಬಳಿಕ  ಚಿನ್ನಯ್ಯನನ್ನು  ತನಿಖಾ ತಂಡ ಬಂಧಿಸಿದೆ.

ಅನಾಮಿಕ ತೋರಿಸಿದ 17 ಪಾಯಿಂಟ್‌ಗಳಲ್ಲಿ ಏನೂ ಸಿಗದಿದ್ದ ಹಿನ್ನೆಲೆ ಎಸ್‌ಐಟಿ ತಂಡ ಸಮಾಧಿ ಶೋಧವನ್ನು ಸ್ಥಗಿತಗೊಳಿಸಿ ಮಾಸ್ಕ್‌ ಮ್ಯಾನ್‌ (Mask Man) ವಿರುದ್ಧವೇ ರಿವರ್ಸ್‌ ತನಿಖೆ ಶುರು ಮಾಡಿತ್ತು. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್‌ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ನಡೆಸಿದ್ದರು. ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನ ಇಟ್ಟಿದ್ದರು.

ಅನಾಮಿಕ ದೂರುದಾರನ ಮುಂದೆ ವೀಡಿಯೋ ಪ್ರದರ್ಶನ ಮಾಡಿ ತನಿಖೆ ಪ್ರಕ್ರಿಯೆಯನ್ನೂ ಮುಂದುವರಿಸಿದ್ದರು. ಇಷ್ಟೆಲ್ಲಾ ತನಿಖೆ ಬಳಿಕ ಮಾಸ್ಕ್‌ ಮ್ಯಾನ್‌ ಹೆಣೆದಿದ್ದು ಸುಳ್ಳಿನ ಬಲೆ ಎಂಬುದು ಸಾಬೀತಾಗಿದೆ. ಮುಸುಕುಧಾರಿ ಹೇಳಿದ್ದೆಲ್ಲ ಸುಳ್ಳು ಎಂದು ತಿಳಿಯುತ್ತಿದ್ದಂತೆ ಆತನನ್ನ ಬಂಧಿಸಿದ್ದಾರೆ. ಇಂದು ಕೋರ್ಟ್‌ಗೆ ಹಾಜರುಪಡಿಸಿ ಬಳಿಕ ಆತನನ್ನ ಕಸ್ಟಡಿ ವಿಚಾರಣೆಗೆ ಪಡೆಯುವ ಸಾಧ್ಯತೆಯಿದೆ. ಇದನ್ನೂ ಓದಿ: ಅನಾರೋಗ್ಯ ಕಾರಣಕ್ಕೆ ಶನಿವಾರ ವಿಚಾರಣೆಗೆ ಬರಲ್ಲ, ಆ.29ಕ್ಕೆ ಹಾಜರಾಗ್ತೀನಿ: ಎಸ್‌ಐಟಿಗೆ ಸುಜಾತಾ ಭಟ್‌ ಪತ್ರ

ಅನಾಮಿಕನಿಗೆ ಎಸ್‌ಐಟಿ ಪ್ರಶ್ನೆಗಳೇನು?
ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ ತಲೆಬುರುಡೆ ತಂದದ್ದೆಲ್ಲಿದ? ಬುರುಡೆ ತಂದಾಗ ಸ್ಥಳದಲ್ಲಿ ಇದ್ದವರು ಯಾರು? ಕತ್ತಿಯಲ್ಲಿ ಬುರುಡೆ ಎತ್ತಿದವರು ಯಾರು? ಸಮಾಧಿಯೊಳಗಿಂದ ನೀನು ಬುರುಡೆ ಅಗೆದು ತಂದಿರುವೆಯಾ? ಕಾಡಿನೊಳಗಿಂದ ಬುರುಡೆ ಎತ್ತಿದ ವೀಡಿಯೋದಲ್ಲಿ ಇರುವವರು ಯಾರು? ಕಾಡಿನ ಒಳಗೆ ಬುರುಡೆ ಸಿಕ್ಕಿದ್ದರೆ ಅದು ಅಸಹಜ ಸಾವಿನ ಪ್ರಕರಣವೋ? ಸಮಾಧಿಯಿಂದ ಬುರುಡೆ ಆಗಿದ್ದು ತಂದದ್ದು ಹೌದಾ? ಅನಾಮಿಕನ ಜೊತೆ ಕೈ ಜೋಡಿಸಿದವರು ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ತನಿಖಾಧಿಕಾರಿ ಜಿತೇಂದ್ರ ದಯಾಮಾ ಅನಾಮಿಕನಿಗೆ ಕೇಳಿದ್ದರು. ಇದನ್ನೂ ಓದಿ: ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಈ ಪ್ರಶ್ನೆಗಳಿಗೆ ಎಸ್‌ಐಟಿ ಪೊಲೀಸರ ನಿರೀಕ್ಷೆಯಂತೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿರಲ್ಲ. ಬದಲಾಗಿ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ ಬುರುಡೆ ಯಾವ ಭಾಗದಿಂದ ತೆಗೆದು ತಂದದ್ದು ಎಂಬ ಪ್ರಶ್ನೆಗೂ ಸರಿಯಾದ ಉತ್ತರ ಸಿಕ್ಕಿರಲಿಲ್ಲ. ಬಂಗ್ಲೆ ಗುಡ್ಡೆ, ಕಲ್ಲೇರಿ, ರತ್ನಗಿರಿ, ಬೋಳಿಯಾರು ಎಂಬ ಉತ್ತರವನ್ನಷ್ಟೇ ಹೇಳಿದ್ದ. ತೀವ್ರ ವಿಚಾರಣೆ ಬಳಿಕ ಮಾಸ್ಕ್‌ ಮ್ಯಾನ್‌ ಬಿಟ್ಟಿದ್ದೆಲ್ಲವೂ ಬುರುಡೆ ಅನ್ನೋದು ಗೊತ್ತಾಗಿ, ಬಂಧಿಸಿದ್ದಾರೆ. ಇದನ್ನೂ ಓದಿ: Video | ಅನನ್ಯಾ ಭಟ್‌ ಹೆಸ್ರನ್ನೇ ಬಂಡವಾಳ ಮಾಡ್ಕೊಂಡು ಕಥೆ ಕಟ್ಟಿದ್ನಾ ಸಮೀರ್‌?

Share This Article