ಬೆಂಗಳೂರು/ಮಂಗಳೂರು: ತಲೆಬುರುಡೆ ರಹಸ್ಯಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ ಎಂದು ಯೂಟ್ಯೂಬರ್ ಸಮೀರ್ (Youtuber Sameer) ಪ್ರತಿಕ್ರಿಯಿಸಿದ್ದಾರೆ.
`ಪಬ್ಲಿಕ್ ಟಿವಿ’ (PUBLiC TV) ಜೊತೆ ಎಸ್‌ಐಟಿ ನೋಟಿಸ್ (SIT Notice) ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಈವರೆಗೂ ಎಸ್‌ಐಟಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನನಗೆ ಬೆಳ್ತಂಗಡಿ ಠಾಣಾ ಪೊಲೀಸರಿಂದ (Belthangady) ನೋಟಿಸ್ ಬಂದಿತ್ತು. ಅದಕ್ಕಾಗಿ ಮೂರು ದಿನ ಬೆಳ್ತಂಗಡಿ ಠಾಣೆಗೆ ವಿಚಾರಣೆಗಾಗಿ ಹೋಗಿದ್ದೆ. ಅದು ಮುಗಿದಿದೆ. ಎಲ್ಲ ವಿಷಯವಾಗಿ ಶೀಘ್ರದಲ್ಲೇ ಕ್ಲ್ಯಾರಿಟಿ ಕೊಡ್ತೀನಿ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಚಿಕ್ಕಮಗಳೂರು | ಗಣೇಶ ಉತ್ಸವದಲ್ಲಿ ಡ್ಯಾನ್ಸ್ ಮಾಡ್ತಿದ್ದ ಯುವತಿಯರ ಮೇಲೆ ನೋಟು ತೂರಿ ದರ್ಪ
ಇನ್ನೂ ವಿದೇಶದಿಂದ ಫಂಡಿಂಗ್ ಮಾಡಿದ್ದಾರೆ ಎಂಬ ವಿಚಾರವಾಗಿ ಮಾತನಾಡಿ, ನಾನು ಆ ವಿಚಾರವಾಗಿ ಮಾತಾನಾಡಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ, ಬಳಿಕ ಸತ್ಯ ಹೊರಗಡೆ ಬರುತ್ತೆ. ಆರೋಪಗಳಿಗೆಲ್ಲಾ ಉತ್ತರ ಕೊಟ್ಟುಕೊಂಡು ಕೂರಕ್ಕೆ ಆಗಲ್ಲ. ಪೊಲೀಸರು ವಿಚಾರಣೆ ಮಾಡ್ತಿದ್ದಾರಲ್ಲ, ಅವರೇ ಎಲ್ಲವನ್ನೂ ಬಹಿರಂಗ ಮಾಡ್ತಾರೆ ಎಂದು ಹೇಳಿದ್ದಾರೆ
ಇದೇ ವೇಳೆ ಅನನ್ಯಾ ಭಟ್ ವಿಚಾರವಾಗಿ ಮಾತನಾಡಿ, ನಾನು ನನ್ನ ಯೂಟ್ಯೂಬ್ ಚಾನೆಲ್ ಮೂಲಕ ಶೀಘ್ರದಲ್ಲೇ ಎಲ್ಲ ವಿಷಯಗಳಿಗೂ ಕ್ಲ್ಯಾರಿಟಿ ಕೊಡುತ್ತೇನೆ ಎಂದಿದ್ದಾರೆ.ಇದನ್ನೂ ಓದಿ: Exclusive: ನಟಿ ರನ್ಯಾ ರಾವ್‌ಗೆ ಬರೋಬ್ಬರಿ 102 ಕೋಟಿ ರೂ. ದಂಡ