ತಿಮರೋಡಿಯ ಮನೆಯ ಒಳಗಡೆಗೆ ಚಿನ್ನಯ್ಯನಿಗೆ ಇರಲಿಲ್ಲ ಪ್ರವೇಶ!

Public TV
1 Min Read

ಮಂಗಳೂರು: ಧರ್ಮಸ್ಥಳ (Dharmasthala) ಬುರುಡೆ ಪ್ರಕರಣದ ಸಾಕ್ಷಿದಾರನಾಗಿ ಆಗಮಿಸಿದ್ದ ಚಿನ್ನಯ್ಯನಿಗೆ (Chinnayya) ಮಹೇಶ್‌ ಶೆಟ್ಟಿ ತಿಮರೋಡಿಯ (Mahesh Shetty Thimarodi) ಮನೆಯ ಒಳಗಡೆ ಪ್ರವೇಶ ನೀಡದ ವಿಚಾರ ಬೆಳಕಿಗೆ ಬಂದಿದೆ.

ಹೌದು. ವಿಶೇಷ ತನಿಖಾ ತಂಡದ (SIT) ತನಿಖೆಯ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ತಿಮರೋಡಿಯ ನಿವಾಸಕ್ಕೆ ಹೊಂದಿಕೊಂಡಿರುವ ಪ್ರತ್ಯೇಕ ಕೊಠಡಿಯಲ್ಲಿ ಮಾತ್ರ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು.

ತೋಟದ ಒಳಗಿನಿಂದಲೇ ನಡೆದುಕೊಂಡು ತಿಮರೋಡಿಯ ಸಹೋದರ ಮೋಹನ್ ಶೆಟ್ಟಿ ನಿವಾಸಕ್ಕೆ ಚಿನ್ನಯ್ಯ ಹೋಗುತ್ತಿದ್ದ. ಇದನ್ನೂ ಓದಿ: ಬುರುಡೆ ಗ್ಯಾಂಗ್‌ ಷಡ್ಯಂತ್ರ ಬಯಲು | ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಸತ್ಯ ಹೇಳ್ತೀನಿ ಚಿನ್ನಯ್ಯ ಕಣ್ಣೀರು

ಚಿನ್ನಯ್ಯನ ಮೇಲೆ ತಿಮರೋಡಿ ಮತ್ತು ಗ್ಯಾಂಗ್‌ ಯಾವುದೇ ಗೌರವ ಇರಲಿಲ್ಲ. ಚಿನ್ನಯ್ಯನಿಗೂ ತಿಮರೋಡಿ ಮತ್ತು ಗ್ಯಾಂಗ್‌ ಜೊತೆ ಯಾವುದೇ ಬಾಂಧವ್ಯ ಇರಲಿಲ್ಲ. ಇವರ ಮಧ್ಯೆ ಕೇವಲ ಕೊಂಡುಕೊಳ್ಳುವ ಹಂತದಲ್ಲಿ ಮಾತ್ರ ಸಂಬಂಧ ಇತ್ತು. ನಾವು ಹೇಳಿದ್ದು ನೀನು ಕೇಳಬೇಕು. ನಿನಗೆ ಏನೂ ಬೇಕೋ ಅದು ಸಿಗುತ್ತೆ ಎಂಬಂತೆ ಸಂಬಂಧ ಇತ್ತು.

ಶವ ಶೋಧನೆ ಸಂದರ್ಭದಲ್ಲಿ ತಿಮ್ಮನ ಜೋಷ್ ನೋಡಿ ಗ್ಯಾಂಗ್‌ ಪ್ರತಿಕ್ರಿಯಿಸುತ್ತಿತ್ತು. ಟೀಂ ಹೇಳಿದಂತೆ ಚಿನ್ನಯ್ಯ ಕೇಳಿದಾಗ ಭರ್ಜರಿ ಮಾಂಸದ ಊಟ ಹಾಕಲಾಗುತ್ತಿತ್ತು. 6ನೇ ಗುಂಡಿಯಲ್ಲಿ ತಲೆಬುರುಡೆ ಸಿಕ್ಕಿದ ನಂತರ ಚಿನ್ನಯ್ಯ ಡಲ್‌ ಆಗಿದ್ದ. ಚಿನ್ನಯ್ಯ ಡಲ್‌ ಆದ ಬೆನ್ನಲ್ಲೇ ಮಾಂಸಾಹಾರದ ಊಟ ಸ್ಥಗಿತವಾಗಿತ್ತು. ಒಂದೇ ಮನೆಯಲ್ಲಿದ್ದರೂ ಚಿನ್ನಯ್ಯನಿಂದ ಗ್ಯಾಂಗ್‌ ಸದಸ್ಯರು ಆದಷ್ಟು ಅಂತರ ಕಾಯ್ದುಕೊಂಡಿದ್ದರು. ಇದನ್ನೂ ಓದಿ: ಎಸ್‌ಐಟಿ ಕಚೇರಿ ಕದ ತಟ್ಟಿದ ಸುಜಾತ ಭಟ್ ಅನನ್ಯಾ ಸೃಷ್ಟಿಕರ್ತೆಗೆ 6 ಗಂಟೆ ಗ್ರಿಲ್

ಯಾವುದೇ ಯೋಜನೆ ಕಾರ್ಯಗತ ಮಾಡುವಾಗ ಚಿನ್ನಯ್ಯನ ಎದುರು ಹೇಳುತ್ತಿರಲಿಲ್ಲ. ಕೆಲವು ವಿಚಾರ ಮಾತ್ರ ಚರ್ಚೆ ಮಾಡಿ ನಂತರ ಗ್ಯಾಂಗ್‌ ಸದಸ್ಯರು ಪ್ರತ್ಯೇಕವಾಗಿ ಮಾತುಕತೆ ನಡೆಸುತ್ತಿದ್ದರು. ನಾನು ಜೊತೆಯಲ್ಲೇ ಇದ್ದರೂ ನನ್ನನ್ನು ದೂರ ಇಟ್ಟಿದ್ದರು. ಹೀಗಾಗಿ ಅವರ ಮೇಲೆ ನನಗೆ ಯಾವುದೇ ಭಾವನೆ ಇಲ್ಲ ಎಂದು ಚಿನ್ನಯ್ಯ ಹೇಳಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ.

Share This Article