ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala) ಚಿನ್ನಯ್ಯ (Chinnayya) ಈಗ ಡಬಲ್ ಗೇಮ್ ಮಾಡುತ್ತಿದ್ದಾನೆ, ತನಿಖೆಯ ದಾರಿ ತಪ್ಪಿಸುತ್ತಿದ್ದಾನೆ ಎಂದು ಜಯಂತ್ ಟಿ (Jayanth T) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನಮ್ಮ ಸೌಜನ್ಯ ಹೋರಾಟದ ದಾರಿ ತಪ್ಪಿಲ್ಲ. ಚಿನ್ನಯ್ಯ ಈಗ ಸುಳ್ಳು ಹೇಳಿ ಬಚಾವಾಗಲು ಪ್ರಯತ್ನ ಮಾಡುತ್ತಿದ್ದಾನೆ ಎಂದು ಆರೋಪಿಸಿದರು. ಇದನ್ನೂ ಓದಿ: ಜಯಂತ್ ಗಾಂಜಾ ಮಾರಾಟ ಮಾಡ್ತಿದ್ರು: ಮಹಿಳೆ ಆರೋಪ
ಈ ಪ್ರಕರಣದಲ್ಲಿ ಆತ ಪಾರಾಗುವುದಿಲ್ಲ. ಎಲ್ಲೋ ಯಾರೋ ಕರೆ ಮಾಡಿ ದಾರಿ ತಪ್ಪಿಸಿದ್ದಾರೆ. ಬುರುಡೆ ಹೊರಗೆ ಬಂದರೆ ನಿನಗೆ ಜೈಲೇ ಗತಿ ಎಂದು ಯಾರೋ ಭಯಪಡಿಸಿದ್ದಾರೆ. ನಿಜವಾದ ಜಾಗವನ್ನು ತೋರಿಸದೇ ಸುಳ್ಳು ಜಾಗವನ್ನು ತೋರಿಸುತ್ತಿದ್ದಾನೆ. ಎಷ್ಟು ದಿನಗಳ ಕಾಲ ನಡೆದ ಘಟನೆ ಎಲ್ಲವೂ ಹಾಗಾದರೆ ಸುಳ್ಳಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಬುರುಡೆ ಗ್ಯಾಂಗ್‌ನ ಷಡ್ಯಂತ್ರ ರೂಪುಗೊಂಡಿದ್ದೇ ಬೆಂಗಳೂರಿನ ಲಾಡ್ಜ್‌ನಲ್ಲಿ!
ಇಬ್ಬರು ಸ್ವಾಮೀಜಿಯ ಬಳಿ ತೆರಳಿ ಮಾತುಕತೆ ಮಾಡಲಾಗಿತ್ತು. ಸ್ವಾಮೀಜಿ ಯಾರು ಎಂದು ಕೆಲವರಿಗೆ ಗೊತ್ತಾಗಿರಬಹುದು ನಾನು ಹೇಳುವುದಿಲ್ಲ. ಸ್ವಾಮೀಜಿ ಮುಂದೆ ಚಿನ್ನಯ್ಯ ಒಂದೂವರೆ ಗಂಟೆ ಮಾತಾಡಿದ್ದಾನೆ. ಮಟ್ಟಣ್ಣನವರು, ಮಹೇಶ್ ಶೆಟ್ಟಿ ಸ್ವಾಮೀಜಿ ಬಳಿ ತೆರಳಿದ್ದಾರೆ. ನನಗೆ ಮೊದಲೇ ಕಮ್ಯುನಿಸ್ಟ್ ಎಂಬ ಹಣೆಪಟ್ಟೆ ಇದೆ. ಹಾಗಾಗಿ ನಾನು ದೂರ ಉಳಿದೆ ಎಂದರು.