ಬೆಂಗಳೂರು: ಧರ್ಮಸ್ಥಳ ಕೇಸ್ (Dharmasthala Case) ಎಲ್ಲಾ ಮುಗಿಯುವ ಹಂತಕ್ಕೆ ಬಂದಿದೆ. ನಮ್ಮ ಅಭಿಪ್ರಾಯದಲ್ಲಿ 90% ಕೇಸ್ ತನಿಖೆ ಮುಗಿದಿದೆ. ಎನ್‌ಐಎ (NIA), ಸಿಬಿಐ (CBI) ತನಿಖೆ ಬೇಕಾಗಿಲ್ಲ ಎಂದು ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣದ ಕುರಿತು ಸತೀಶ್ ಜಾರಕಿಹೊಳಿ ಹೇಳಿಕೆಗೆ ನೆಲಮಂಗಲದಲ್ಲಿ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ, ಪರಮೇಶ್ವರ್ ಕ್ಲಾರಿಟಿ ಕೊಡಬೇಕು ಎಂಬ ತೀರ್ಮಾನ ತೆಗೆದುಕೊಂಡಿದ್ದರಿಂದ ಒಂದು ಹಂತಕ್ಕೆ ಬಂದಿದೆ. ಎನ್‌ಐಎ, ಸಿಬಿಐ ಬೇಕಾಗಿಲ್ಲ, ನಮ್ಮ ಪೊಲೀಸರೇ ಸಮರ್ಥವಾಗಿದ್ದಾರೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ಬಗ್ಗೆ ವ್ಯಾಪಕವಾಗಿ ಯೂಟ್ಯೂಬರ್ಸ್ ಪರ ಹಾಗೂ ವಿರೋಧ ಇದ್ದರೂ ಎಲ್ಲವೂ ಅಂತ್ಯವಾಗತ್ತದೆ ಎಂದರು. ಇದನ್ನೂ ಓದಿ: ಕೇಜ್ರಿವಾಲ್ ಪ್ರಕರಣ ಉಲ್ಲೇಖಿಸಿ ವಿಪಕ್ಷಗಳಿಗೆ ತಿರುಗೇಟು – ಪಿಎಂ, ಸಿಎಂ ವಜಾ ಮಸೂದೆ ಸಮರ್ಥಿಸಿಕೊಂಡ ಅಮಿತ್ ಶಾ
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನ ವಿಚಾರದ ಕುರಿತು ಮಾತನಾಡಿ, ಅಬ್ದುಲ್ ಕಲಾಂ ರಾಷ್ಟ್ರಪತಿಯವರಾಗಿರಲಿಲ್ವಾ? ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿದ್ದಾರೆ ಅಂದ್ರೆ ಬಾನು ಮುಷ್ತಾಕ್ ಉದ್ಘಾಟನೆ ಮಾಡೋದ್ರಲ್ಲಿ ತಪ್ಪೇನಿದೆ? ಅವರು ಇದೇ ಮಣ್ಣಿನಲ್ಲಿ ಹುಟ್ಟಿ ಅಭಿಮಾನ ಇರುವಂಥವರು. ಎಲ್ಲ ಧರ್ಮವನ್ನು ಸಮಾನವಾಗಿ ಕಾಣುವಂಥವರು. ಬೂಕರ್ ಪ್ರಶಸ್ತಿ ವಿಜೇತರು ಅವರು, ಉದ್ಘಾಟನೆ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಕನ್ನಡ ತಾಯಿ ಭುವನೇಶ್ವರಿಯನ್ನು ಒಪ್ಪದ ಬಾನು ಮುಷ್ತಾಕ್ ನಾಡದೇವತೆಯನ್ನು ಒಪ್ಪುತ್ತಾರಾ: ಪ್ರತಾಪ್ ಸಿಂಹ ಪ್ರಶ್ನೆ
ಆರ್‌ಎಸ್‌ಎಸ್ ಗೀತೆ ವಿಚಾರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ನಮ್ಮ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿಲ್ಲ. ಅವರ ಪಾತ್ರ ಏನೂ ಇಲ್ಲ, 52 ವರ್ಷಗಳ ಕಾಲ ನಮ್ಮ ತ್ರಿವರ್ಣ ಧ್ವಜ ಹಾರಿಸಲಿಲ್ಲ. ದೇಶದ ಸ್ವಾತಂತ್ರ‍್ಯಕ್ಕೆ ಅವರ ಕೊಡುಗೆ ಏನೂ ಇಲ್ಲ ಎಂದರು. ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ, ಮನೆ ಮನೆ ಕಸ ಸಂಗ್ರಹದ ಆಟೋಗಳ ಸಮಯ ಬದಲಾವಣೆ