ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣ- ಎಸ್‍ಐಟಿ ರಚಿಸಿದ ಸರ್ಕಾರ

Public TV
0 Min Read

ಬೆಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ (Dharmasthala Burials Case) ಟ್ವಿಸ್ಟ್ ಸಿಕ್ಕಿದ್ದು ಸರ್ಕಾರ ವಿಶೇಷ ತನಿಖಾ ತಂಡವನ್ನು (SIT) ರಚನೆ ಮಾಡಿ ಆದೇಶಿಸಿದೆ.

ಹಿರಿಯ ಐಪಿಎಸ್‌ ಅಧಿಕಾರಿ ಅಧಿಕಾರಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಎಸ್‍ಐಟಿ ರಚನೆ ಮಾಡಲಾಗಿದೆ. ಐಪಿಎಸ್ ಅಧಿಕಾರಿಗಳಾದ ಅನುಚೇತ್, ಸೌಮ್ಯಲತಾ ಮತ್ತು ಜಿತೇಂದ್ರ ಕುಮಾರ್ ದಯಾಮಾ ತನಿಖಾ ತಂಡದಲ್ಲಿದ್ದಾರೆ.

ಡಿಜಿಐಜಿಪಿಗೆ ತನಿಖಾ ಹಂತದ ಮಾಹಿತಿ ಆಗಿಂದಾಗ ಕೊಡಬೇಕು. ತನಿಖೆಯ ಅಂತಿಮ ವರದಿಯನ್ನು ಶೀಘ್ರವಾಗಿ ಸರ್ಕಾರಕ್ಕೆ ಸಲ್ಲಿಸಬೇಕೆಂದು ಎಸ್‍ಐಟಿ ತಂಡಕ್ಕೆ ಸರ್ಕಾರಕ್ಕೆ ಸೂಚಿಸಿದೆ.

Share This Article