ಅನನ್ಯಾ ಭಟ್ ಕೇಸ್ – ಖ್ಯಾತ ಬಹುಭಾಷಾ ನಟನ ಸಹೋದರನಿಗೆ SIT ನೋಟಿಸ್ ಸಾಧ್ಯತೆ

Public TV
1 Min Read

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅನನ್ಯಾ ಭಟ್ ಕಟ್ಟುಕತೆ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮುಂದುವರಿಸಿದೆ. ಇದೀಗ ಬಹುಭಾಷಾ ನಟ, ನಿರ್ದೇಶಕನ ಸಹೋದರನಿಗೆ ಎಸ್‌ಐಟಿ (SIT) ನೋಟಿಸ್ ನೀಡಲು ಮುಂದಾಗಿದೆ.

ಧರ್ಮಸ್ಥಳ (Dharmasthala) ಬುರುಡೆ ಫೈಲ್ಸ್ ವಿಚಾರದಲ್ಲಿ ದಿನೇ ದಿನೇ ಹೊಸ ಬೆಳವಣಿಗೆಗಳಾಗುತ್ತಲೇ ಇದೆ. ಈ ಮೊದಲು ಅನನ್ಯಾ ಭಟ್ ಬಗ್ಗೆ ಕಟ್ಟುಕತೆ ಕಟ್ಟಿ ಸುಜಾತಾ ಭಟ್ ಎಲ್ಲರನ್ನು ನಂಬಿಸುವ ಕೆಲಸ ಮಾಡಿದ್ದರು. ಬಳಿಕ ಇದೆಲ್ಲವನ್ನು ಜಮೀನು ವಿಚಾರವಾಗಿ ಮಾಡಿರುವುದಾಗಿ ಒಪ್ಪಿಕೊಂಡಿದ್ದರು. ಇದೀಗ ಅನನ್ಯಾ ಭಟ್ ಕೇಸ್ ಮತ್ತೆ ಮುನ್ನೆಲೆಗೆ ಬಂದಿದ್ದು, ಪ್ರಕರಣದ ತನಿಖೆಯನ್ನು ಎಸ್‌ಐಟಿ ಮುಂದುವರಿಸಿದೆ.ಇದನ್ನೂ ಓದಿ: Koalr | ಸೇತುವೆ ಮೇಲಿಂದ ಕಾರು ಬಿದ್ದು ಓರ್ವ ಸಾವು, ನಾಲ್ವರಿಗೆ ಗಾಯ

ವಾಸಂತಿ ಕೇಸ್ ಬಗ್ಗೆ ತನಿಖೆಗಿಳಿದಾಗ ಎಸ್‌ಐಟಿಗೆ ಬಹುಭಾಷಾ ನಟನ ಸಹೋದರನ ಹೆಸರು ಕೇಳಿಬಂದಿದೆ. ನಟನ ಸಹೋದರ ಕೂಡ ಕಾಲಿವುಡ್ ನಟನಾಗಿದ್ದು, ವಾಸಂತಿ ಗಂಡನ ಗೆಳೆಯ ಎಂದು ತಿಳಿದುಬಂದಿದೆ. ಸದ್ಯ ಕಾಲಿವುಡ್ ನಟ ಚೆನ್ನೈನಲ್ಲಿರುವುದಾಗಿ ಮಾಹಿತಿಯಿದ್ದು, ಆತನ ವಿಳಾಸ ಪತ್ತೆ ಮಾಡುವಲ್ಲಿ ಎಸ್‌ಐಟಿ ಕಾರ್ಯನಿರತವಾಗಿದೆ. ವಿಳಾಸ ಸಿಗದ ಹಿನ್ನೆಲೆ ನೋಟಿಸ್ ನೀಡಲು ವಿಳಂಬವಾಗಿದೆ.

ಇನ್ನೂ ಬುರುಡೆ ಫೈಲ್ಸ್ ಪ್ರಕರಣದಲ್ಲಿ ಏಳು ಅಸ್ಥಿಪಂಜರ ಸಿಕ್ಕ ಬಂಗ್ಲೆಗುಡ್ಡ ಜಾಗದ ಸರ್ವೇಗಾಗಿ ಅರಣ್ಯಾಧಿಕಾರಿಗಳ ತಂಡವೊಂದು ಆಗಮಿಸಿದೆ. ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿ ಏಳು ಅಸ್ಥಿಪಂಜರ ಸಿಕ್ಕಿದೆ ಎಂದು ದೃಢಪಡಿಸಲು ಸರ್ವೇ ಕಾರ್ಯನಡೆಸಿದೆ.ಇದನ್ನೂ ಓದಿ: ಬುರುಡೆ ಕೇಸ್‌ಗೆ ಟ್ವಿಸ್ಟ್; ಎಸ್‌ಐಟಿ ತಂಡದಿಂದ ಇಬ್ಬರು ಅಂಬುಲೆನ್ಸ್ ಡ್ರೈವರ್‌ಗಳ ವಿಚಾರಣೆ

 

 

Share This Article