ಬೆಂಗಳೂರು: ಪ್ರಪಂಚದಲ್ಲಿ 7 ಜನ ಒಂದೇ ರೀತಿಯಲ್ಲಿ ಇರುತ್ತಾರೆ. ಅದರಲ್ಲಿ ಅನನ್ಯ ಭಟ್ (Ananya Bhat) ವಾಸಂತಿ (Vasanthi) ಫೋಟೋಗಳಿಗೆ ಸಾಮ್ಯತೆ ಇರಬಹುದು ಅಷ್ಟೇ ಎಂದು ಸುಜಾತ ಭಟ್ (Sujatha Bhat) ಹೇಳಿದ್ದಾರೆ.
ವಾಸಂತಿ ಅವರ ಸಹೋದರ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಸುಜಾತ ಭಟ್ ಪ್ರತಿಕ್ರಿಯಿಸಿದ್ದಾರೆ. ಎರಡು ಫೋಟೋದಲ್ಲಿರುವ ಡ್ರೆಸ್ (Dress) ಒಂದೇ ರೀತಿ ಇದೆಯಲ್ವಾ ಎಂಬ ಆರೋಪಕ್ಕೆ 7 ಜನರ ಜೊತೆಗೂ ಒಂದೇ ರೀತಿಯ ಡ್ರೆಸ್ ಇರಬಹುದಲ್ವಾ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್
ಸುಜಾತ ಭಟ್ ಹೇಳಿದ್ದೇನು?
ನನಗೂ ವಿಜಯಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಫೋಟೋ ಕಳವು ಮಾಡಿಲ್ಲ. ನಾನು ತೋರಿಸಿದ್ದು ನನ್ನ ಮಗಳ ಫೋಟೋ. ಬೇರೆಯವರ ಫೋಟೋ ತೋರಿಸಿ ನನಗೆ ಏನಾಗಬೇಕು. ನನಗೆ ಪ್ರಜ್ಞೆ ಇದೆ.
ಪ್ರಪಂಚದಲ್ಲಿ 7 ಜನ ಒಂದೇ ರೀತಿಯಲ್ಲಿ ಇರುತ್ತಾರೆ. ಅದರಲ್ಲಿ ಅನನ್ಯ – ವಾಸಂತಿ ಫೋಟೋ ಸಾಮ್ಯತೆ ಇರಬಹುದು ಅಷ್ಟೇ. ಒಂದೇ ರೀತಿಯ ಡ್ರೆಸ್ ಹಾಕಿರಬಹುದು. ನನಗೂ ರಂಗಪ್ರಸಾದ್ ಜೊತೆ ಲೀವಿಂಗ್ ರಿಲೇಷನ್‌ಶಿಪ್ ಇತ್ತು. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್ಮ್ಯಾನ್ ಜೊತೆ ಕೆಲಸ ಮಾಡಿದ್ದ ಕೆಲಸಗಾರ
ರಂಗಪ್ರಸಾದ್ ಸಾಯೋವರೆಗೂ ನಾನೇ ಅವರನ್ನು ನೋಡಿಕೊಂಡಿದ್ದೇನೆ. ರಂಗಪ್ರಸಾದ್ ಮತ್ತು ಶ್ರೀವತ್ಸರನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದರು. ಆ ಸಂದರ್ಭದಲ್ಲಿ ನಾನೇ ಅವರಿಗೆ ಆಶ್ರಯ ನೀಡಿದ್ದೇನೆ. ನನಗೆ ವಾಸಂತಿ ಯಾರು ಎನ್ನುವುದೇ ಗೊತ್ತಿಲ್ಲ.ನಾನು ಆಕೆಯನ್ನು ನೋಡಿಯೇ ಇಲ್ಲ.