ಧನ್ವೀರ್ ಮೂರನೇ ಸಿನಿಮಾ ಟೈಟಲ್ ‘ವಾಮನ’ – ಫಸ್ಟ್ ಲುಕ್ ರಿಲೀಸ್

Public TV
1 Min Read

ಜಾರ್ ಸಿನಿಮಾ ಖ್ಯಾತಿಯ ಶೋಕ್ದಾರ್ ಧನ್ವೀರ್ ಮೂರನೇ ಸಿನಿಮಾ ಬಗ್ಗೆ ಇತ್ತೀಚೆಗೆ ಸುದ್ದಿಯಾಗಿತ್ತು. ಮಾಸ್ ಆಕ್ಷನ್ ಸಿನಿಮಾದಲ್ಲಿ ಧನ್ವೀರ್ ಮಿಂಚಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಚಿತ್ರತಂಡ ಈ ಬಗ್ಗೆ ಸಂಕ್ರಾತಿಯಂದು ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿತ್ತು. ಅಂತೆಯೇ ಇಂದು ಧನ್ವೀರ್ ಮುಂದಿನ ಸಿನಿಮಾ ಯಾವುದು ಎನ್ನೋದಕ್ಕೆ ಫಸ್ಟ್ ಲುಕ್ ಸಮೇತ ಆನ್ಸರ್ ಸಿಕ್ಕಿದೆ. ಹೌದು, ಬಜಾರ್ ಹುಡ್ಗ ಧನ್ವೀರ್ ಮಾಸ್ ಅವತಾರ ತಾಳಿರುವ ಈ ಚಿತ್ರದ ಟೈಟಲ್ ‘ವಾಮನ’. ಇಂದು ‘ವಾಮನ’ ಟೀಂ ಚಿತ್ರದ ಟೈಟಲ್ ಜೊತೆಗೆ ಧನ್ವೀರ್ ಲುಕ್ ಕೂಡ ರಿವೀಲ್ ಮಾಡಿದೆ.

ಸಂಕ್ರಾತಿ ಹಬ್ಬದಂದು ಹೊಸ ಸಿನಿಮಾ ಅನೌನ್ಸ್ ಮಾಡಿರುವ ಧನ್ವೀರ್ ಮಾಸ್ ಲುಕ್ ನಲ್ಲಿ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಈ ಚಿತ್ರದ ಸೂತ್ರಧಾರ ಶಂಕರ್ ರಾಮನ್. ಕನ್ನಡ ಹಾಗೂ ತೆಲುಗು ಸಿನಿಮಾಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿ ಗುರುತಿಸಿಕೊಂಡ ಇವರಿಗೆ ಚಿತ್ರರಂಗದಲ್ಲಿ ಸುಮಾರು 13 ವರ್ಷಗಳ ಅನುಭವವಿದೆ. ಆ ಅನುಭವಗಳನ್ನೆಲ್ಲ ಇಟ್ಟುಕೊಂಡು ಸ್ವತಂತ್ರ ಸಿನಿಮಾ ನಿರ್ದೇಶಕರಾಗಿ ವಾಮನ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ಮಾಫಿಯಾ ಲೋಕದ ಕಥೆ ಒಳಗೊಂಡ ಈ ಚಿತ್ರ ಮಾಸ್ ಆಕ್ಷನ್ ಎಂಟರ್ ಟೈನರ್ ಸಬ್ಜೆಕ್ಟ್ ಒಳಗೊಂಡಿದೆ.

Vaamana  Dhanveerrah

 

ಬಜಾರ್ ಸಿನಿಮಾ ಮೂಲಕ ಗೆಲುವು ಕಂಡು ಭರವಸೆ ಮೂಡಿಸಿರುವ ನಟ ಧನ್ವೀರ್ ವಾಮನ ಅವತಾರ ತಾಳಲು ಸಜ್ಜಾಗಿದ್ದಾರೆ. ಬಿಡುಗಡೆಯಾಗಿರುವ ಫಸ್ಟ್ ಲುಕ್ ಕೂಡ ಪ್ರಾಮಿಸಿಂಗ್ ಆಗಿ ಮೂಡಿ ಬಂದಿದೆ. ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ ಟೈನ್ಮೆಂಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚೇತನ್ ಕುಮಾರ್ ಗೌಡ ಬಂಡವಾಳ ಹೂಡುತ್ತಿದ್ದಾರೆ.

ಸದ್ಯ ಧನ್ವೀರ್ ಅಭಿನಯದ ಎರಡನೇ ಸಿನಿಮಾ ಬೈಟು ಲವ್ ಬಿಡುಗಡೆಗೆ ರೆಡಿಯಾಗಿದೆ. ಆದ್ರೆ ಕೊರೊನಾ ಕಾರಣದಿಂದ ಸಿನಿಮಾ ಬಿಡುಗಡೆ ಮುಂದೂಡಲಾಗಿದೆ. ಆದ್ರಿಂದ ‘ವಾಮನ’ ಅಡ್ಡಾ ಸೇರೋಕೆ ಶೋಕ್ದಾರ್ ಸಕಲ ಸಜ್ಜಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *