ಬಿಗ್ ಬಾಸ್ ಮನೆಯಲ್ಲಿ ದೆವ್ವ: ಲಿಂಬೆಹಣ್ಣು ಇಟ್ಕೊಂಡಿದ್ದಾರಂತೆ ಪ್ರಶಾಂತ್ ಸಂಬರ್ಗಿ

Public TV
2 Min Read

ಬಿಗ್ ಬಾಸ್ (Bigg Boss Season 9 ) ಮನೆಯಲ್ಲಿ ಇದೀಗ ದೆವ್ವದ್ದೇ ಸದ್ದು. ಪ್ರಶಾಂತ್ ಸಂಬರ್ಗಿ, ರೂಪೇಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಗೌಡ ಮಧ್ಯೆ ದೆವ್ವಗಳ ಬಗ್ಗೆ ರಸವತ್ತಾದ ಚರ್ಚೆ ನಡೆಯುತ್ತಿದೆ. ರೂಪೇಶ್ ಕೊಂಚ ಭಯಗೊಂಡಂತೆ ಕಂಡರೆ, ಇವರನ್ನು ಭಯಕ್ಕೆ ಬೀಳಿಸಿದ್ದಾರೆ ಕಾವ್ಯಶ್ರೀ ಗೌಡ. ಈ ಕಥೆಗೆ ಸ್ಕ್ರಿಪ್ಟ್ ಬರೆದು, ನಿರ್ದೇಶನ ಮಾಡಿದ್ದಾರೆ ಪ್ರಶಾಂತ್ ಸಂಬರ್ಗಿ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ದೆವ್ವಗಳ ಕಾರುಬಾರು ಶುರುವಾಗಿದೆ. ಪ್ರಶಾಂತ್ ಸಂಬರ್ಗಿ ತನ್ನ ಜೇಬಿನಲ್ಲಿ ಲಿಂಬೆಹಣ್ಣು ಇಟ್ಟುಕೊಂಡು ದೆವ್ವಗಳಿಂದ ರಕ್ಷಣೆ ಪಡೆದುಕೊಂಡಿದ್ದಾರಂತೆ.

ರೂಪೇಶ್ ಶೆಟ್ಟಿ ಬಳಿ ಬರುವ ಕಾವ್ಯಶ್ರೀ ಗೌಡ (Kavyashree Gowda), ದೆವ್ವಗಳ ವಿಚಾರವನ್ನು ಪ್ರಸ್ತಾಪಿಸುತ್ತಾರೆ. ‘ಪ್ರಶಾಂತ್ ಸಂಬರ್ಗಿ ಸಖತ್ ಪುಕ್ಕಲು. ಯಾವುದೋ ಒಂದು ಶಬ್ದಕ್ಕೆ ಹೆದರಿಕೊಂಡಿದ್ದಾರೆ. ದೆವ್ವಗಳು ಇರುವುದು ಅನುಭವಕ್ಕೆ ಬಂದರೆ, ಮಂಚದ ಕೆಳಗೆ ಈರುಳ್ಳಿ ಇಟ್ಟುಕೊಳ್ಳಲು ಅವರ ತಾಯಿ ಹೇಳಿದ್ದಾರಂತೆ. ಹಾಗಾಗಿ ಅವರು ಈರುಳ್ಳಿ ಇಟ್ಟುಕೊಂಡಿದ್ದಾರೆ. ರಾತ್ರಿ ಒಬ್ಬರೇ ಬಾತ್ ರೂಮ್ ಗೆ ಹೋಗುವುದಕ್ಕೂ ಹೆದರಿಕೊಳ್ಳುತ್ತಾರೆ. ಸಡನ್ನಾಗಿ ಮಧ್ಯರಾತ್ರಿ ಎದ್ದು ಕೂರುತ್ತಾರೆ’ ಎಂದೆಲ್ಲ ರೂಪೇಶ್ ಬಳಿ ಕಥೆ ಕಟ್ಟಿದ್ದಾರೆ.

ಅಷ್ಟಕ್ಕೂ ರೂಪೇಶ್ ಬಳಿಯೇ ಕಾವ್ಯಶ್ರೀ ಗೌಡ ಈ ಕಥೆ ಹೇಳುವುದಕ್ಕೆ ಕಾರಣವಿದೆ. ರೂಪೇಶ್ ಗೆ ಭಯ ಪಡಿಸುವುದಕ್ಕಾಗಿ ಪ್ರಶಾಂತ್ ಸಂಬರ್ಗಿ (Prashant Sambargi), ಕಾವ್ಯಶ್ರೀ ಗೌಡ ಅವರನ್ನು ಬಳಸಿಕೊಂಡಿದ್ದಾರೆ. ದೆವ್ವ (Devil), ಲಿಂಬೆಹಣ್ಣಿನ ಕಥೆಯನ್ನು ಕಾವ್ಯಶ್ರೀ ಗೌಡರಿಂದ ರೂಪೇಶ್ ಶೆಟ್ಟಿಗೆ ಹೇಳಿಸಿದ್ದಾರೆ. ಕೊಂಚ ಭಯದಲ್ಲಿಯೇ ಇರುವ ರೂಪೇಶ್, ತನ್ನ ಅನುಭವಕ್ಕೆ ಬಂದರೆ ಮಾತ್ರ ದೆವ್ವವನ್ನು ನಂಬುತ್ತೇನೆ ಎಂದು ಮಾತನಾಡಿದ್ದಾರೆ. ಅಲ್ಲದೇ, ತಮಗೆ ಇವರಿಬ್ಬರೂ ಫ್ರಾಂಕ್ ಮಾಡುತ್ತಿರಬಹುದಾ? ಎಂದು ಅನುಮಾನವನ್ನೂ ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ

ಪ್ರಶಾಂತ್ ಸಂಬರ್ಗಿ ಮತ್ತು ರೂಪೇಶ್ ಶೆಟ್ಟಿ (Rupesh Shetty) ಮತ್ತೆ ಮತ್ತೆ ದೆವ್ವಗಳ ವಿಚಾರವನ್ನು ಚರ್ಚೆ ಮಾಡುತ್ತಾ, ಮನೆಯ ಇತರ ಸದಸ್ಯರಿಗೂ ಭಯ ಹುಟ್ಟಿಸುತ್ತಿದ್ದಾರೆ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಹೂಡಿರುವ ಈ ನಾಟಕಕ್ಕೆ ರೂಪೇಶ್ ಶೆಟ್ಟಿ ಬಕ್ರಾ ಆಗ್ತಾರಾ? ಅಥವಾ ಇವರು ತಮಾಷೆ ಮಾಡುತ್ತಿರುವ ವಿಚಾರವನ್ನು ಅರಿತುಕೊಳ್ಳುತ್ತಾರಾ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ದೆವ್ವದ ಕಥೆ ಸದ್ಯಕ್ಕೆ ರೋಚಕತೆ ಹುಟ್ಟು ಹಾಕಿದೆ. ದೆವ್ವ ಯಾರನ್ನು ಎಷ್ಟು ಕಾಡುತ್ತದೆ ಎಂದು ಕಾದು ನೋಡೋಣ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *