ತುಮಕೂರು: ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲೂ ಕುಟುಂಬ ರಾಜಕಾರಣ ಇದೆ. ಹೀಗಾಗಿ ದೇವೇಗೌಡರು ಕುಟುಂಬ ರಾಜಕಾರಣ ಮಾಡುವುದರಲ್ಲಿ ತಪ್ಪೇನಿದೆ ಎಂದು ಜೆಡಿಎಸ್ ಶಾಸಕ ಸತ್ಯನಾರಾಯಣ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇವೇಗೌಡರು ಕುಟುಂಬ ರಾಜಕಾರಣ ಮಾಡ್ತಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದರು. ಯಾಕೆ ಕಾಂಗ್ರೆಸ್ಸಿನಲ್ಲಿ ನೆಹರು ಕುಟಂಬ ರಾಜಕಾರಣ ಮಾಡಿಲ್ವಾ? ರಾಜೀವ್, ಇಂದಿರಾ, ಸೋನಿಯಾ, ಈಗ ಅಣ್ಣ ತಂಗಿ ಬಂದಿಲ್ವಾ? ಹಾಗೆಯೇ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಅವರ ಮಕ್ಕಳು ರಾಜಕಾರಣ ಮಾಡುತ್ತಿಲ್ವಾ? ದೇವೇಗೌಡರ ಫ್ಯಾಮಿಲಿ ಕುಟುಂಬ ರಾಜಕಾರಣ ಮಾಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿ ಕಿಡಿಕಾರಿದರು.
ಕೇವಲ ಸಂಸದ ಮುದ್ದಹನುಮೇಗೌಡ, ಶಾಸಕ ರಾಜಣ್ಣ ಮಾತ್ರ ಅಲ್ಲ. ಅವರ ಜೊತೆ ಇನ್ನಿಬ್ಬರು ಹೋದರೂ ಏನೂ ಆಗಲ್ಲ. ದೇವೇಗೌಡರ ಗೆಲುವನ್ನು ತಡೆಯಲು ಅವರಿಂದ ಸಾಧ್ಯವಿಲ್ಲ. ಮತದಾರ ಪ್ರಭುವಿನದ್ದೇ ಅಂತಿಮ ತೀರ್ಮಾನ. ಲೀಡರ್‍ಗಳ ಜೊತೆ ಜೈಕಾರ ಹಾಕೋರು, ಬಹುಫರಾಕ್ ಹೇಳೋರು, ಹೊಡೆದಾಡೋರು, ತಲೆ ಒಡೆಯೋರು ನಿಜವಾದ ಮತದಾರರಲ್ಲ. ಮನೆಯಲ್ಲಿ ಕುಂತವರೇ ನಿಜವಾದ ಮತದಾರರು ಎಂದು ಹೇಳಿದರು.