ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ : ಎ.ಮಂಜು – ಭವಾನಿ ಜುಗಲ್ ಬಂದಿ

Public TV
2 Min Read

ಹಾಸನ: ರಾಜ್ಯದಲ್ಲಿ ಜೆಡಿಎಸ್ (JDS) ಬಿಟ್ಟು ಬೇರೆ ಯಾವ ಪಕ್ಷವೂ ಸರ್ಕಾರ ನಡೆಸಲು ತಾಕತ್ತಿಲ್ಲ ಎಂದು ಮಾಜಿ ಸಚಿವ ಎ.ಮಂಜು (A Manju) ಹೇಳಿದ್ದಾರೆ.

ಹಾಸನ ಜಿಲ್ಲೆಯ (Hassan) ಹೊಳೆನರಸೀಪುರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ದೊಡ್ಡವರಿಗೆ ಹುಷಾರಿಲ್ಲ ಎಂದು ನೋಡಲು ಹೋಗಿದ್ದೆ. ಆಗ ದೇವೇಗೌಡರು, ಎಷ್ಟು ದಿನ ಹೀಗೆ ರಾಜಕೀಯ ಮಾಡ್ತೀರಿ ಒಟ್ಟಾಗಿ ಹೋಗಿ ಅಂದ್ರು, ಆಮೇಲೆ ಕುಮಾರಣ್ಣ ಕೂಡ ಮಾತನಾಡಿದ್ರು, ಆಗ ನಾನು ನೀವೇನೋ ಹೇಳ್ತೀರಿ, ಅಲ್ಲಿ ರೇವಣ್ಣ ಇದ್ದಾರೆ ಅವರು ಒಪ್ಕೋಬೇಕಲ್ಲ ಅಂದೆ. ಆಮೇಲೆ ರೇವಣ್ಣ, ಪ್ರಜ್ವಲ್, ಸೂರಜ್ ಮಾತನಾಡಿ ಪಕ್ಷಕ್ಕೆ ಬನ್ನಿ ಅಂದ್ರು, ಆಗ ಜೆಡಿಎಸ್ ಸೇರಿದೆ ಎಂದು ನೆನಪು ಮಾಡಿಕೊಂಡರು.

ದೇಶಕ್ಕೆ ದೇವೇಗೌಡರು, ರಾಜ್ಯಕ್ಕೆ ಕುಮಾರಣ್ಣ, ಹಾಸನಕ್ಕೆ ರೇವಣ್ಣ ಎಂದ ಮಂಜು, ಕುಮಾರಣ್ಣ ಇಲ್ಲದೇ, ಜೆಡಿಎಸ್ ಇಲ್ಲದೆ ಸರ್ಕಾರ ಮಾಡಲು ಆಗಲ್ಲ ಎಂದರು.

ಕಾಂಗ್ರೆಸ್‌ನಲ್ಲಿ ಟಿಕೆಟ್ (Congress Ticket) ಕೊಡ್ತೀನಿ ಅಂದ್ರು, ಇಲ್ಲಾ ಗೌಡ್ರಿಗೆ ಮಾತು ಕೊಟ್ಟಿದ್ದೀನಿ ಬರಲ್ಲ ಅಂದೆ. ಯಾರೇ ಚಾಡಿ ಹೇಳಿದ್ರೂ ನಾನು ಕೇಳಲ್ಲ. ರೇವಣ್ಣ ಅವರೇ ನನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾವಿಬ್ಬರೂ ಒಂದೇ, ಮುಂದೆ ನಮ್ಮ ಮಕ್ಕಳು, ನಿಮ್ಮ ಮಕ್ಕಳು ಜೆಡಿಎಸ್ ಬೆಳೆಸಬೇಕು. ಈಗಾಗಲೇ ಗೆದ್ದ ಮೇಲೆ ಜೆಡಿಎಸ್ ಬಿಡ್ತಾರೆ ಅಂತಾರೆ ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಮಂಜು ಸ್ಪಷ್ಟಪಡಿಸಿದರು. ಇದನ್ನೂ ಓದಿ: 55 ವರ್ಷ ಆಡಳಿತ ಮಾಡಿದ್ರೂ ನೀರಿನ ದಾಹ ತೀರಿಸಲಾಗಿಲ್ಲ – ಕಾಂಗ್ರೆಸ್ ವಿರುದ್ಧ ಅನಿಲ್ ಮೆಣಸಿನಕಾಯಿ ಕಿಡಿ

ಮಂಜು ಮಾತು ಮುಗಿಸುತ್ತಿದ್ದಂತೆಯೇ ಮೈಕ್ ತೆಗೆದುಕೊಂಡ ಭವಾನಿ ರೇವಣ್ಣ (Bhavani Revanna), ನಾನು ಮಂಜಣ್ಣ ಅವರಲ್ಲಿ ಕೇಳುತ್ತಿದ್ದೇನೆ, ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನ ನೀವು ಚೆನ್ನಾಗಿ ನೋಡಿಕೊಳ್ಳಿ. ಅವರನ್ನು ನೀವು ವಿಶ್ವಾಸಕ್ಕೆ ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳಿ ಎಂದು ಸಲಹೆ ನೀಡಿದರು. ಇದನ್ನೂ ಓದಿ: ಗೋಮೂತ್ರ ಮಾನವ ಸೇವನೆಗೆ ಯೋಗ್ಯವಲ್ಲ; ಎಮ್ಮೆಯ ಮೂತ್ರವೇ ಉತ್ತಮ ಎಂದ IVRI ಅಧ್ಯಯನ

ಇದಕ್ಕೆ ಪ್ರತಿಕ್ರಿಯಿಸಿದ ಮಂಜು, ನಾನು ಯಾವಾಗಲಾದರೂ ಜೆಡಿಎಸ್ ಕಾರ್ಯಕರ್ತರಿಗೆ ತೊಂದರೆ ಕೊಟ್ಟಿದ್ದೀನಾ ಕೇಳಿ, ನಾನು ಎಲ್ಲರನ್ನೂ ಒಂದೇ ರೀತಿ ನೋಡಿದ್ದೀನಿ, ನಾನು ತೊಂದರೆ ಕೊಟ್ಟಿದ್ದು ತೋರಿಸಿದ್ರೆ ನಾಮಪತ್ರನೇ ಸಲ್ಲಿಸಲ್ಲ ಎಂದು ಸವಾಲ್‌ ಹಾಕಿದರು.

Share This Article