ದೇವೇಗೌಡರು ಪ್ಲಾನ್ ಮಾಡಿ ಪ್ರಜ್ವಲ್‌ನನ್ನು ವಿದೇಶಕ್ಕೆ ಕಳುಹಿಸಿದ್ದಾರೆ: ಸಿದ್ದರಾಮಯ್ಯ ಸ್ಫೋಟಕ ಹೇಳಿಕೆ

Public TV
1 Min Read

-ಎಸ್‌ಐಟಿಯಿಂದ ಪಾರದರ್ಶಕ ತನಿಖೆ ಆಗುತ್ತೆ ಎಂದ ಸಿಎಂ

ಯಾದಗಿರಿ: ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ವೀಡಿಯೋ ವೈರಲ್ ಬಳಿಕ ವಿದೇಶಕ್ಕೆ ಹಾರಿರುವ ವಿಚಾರಕ್ಕೆ ಸಂಬಂಧಿಸಿದಂತೆ ಯಾದಗಿರಿಯ (Yadgiri) ಸುರಪುರ (Surapura) ತಾಲೂಕಿನ ದೇವತ್ಕಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ದೇವೇಗೌಡ (HD Deve Gowda) ಅವರೇ ಪ್ಲಾನ್ ಮಾಡಿ ಪ್ರಜ್ವಲ್ ಅನ್ನು ವಿದೇಶಕ್ಕೆ ಕಳುಹಿಸಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿರುವ ಕುರಿತು ಮಾತನಾಡಿದ ಅವರು, ಪ್ರಜ್ವಲ್ ಸಿ.ಡಿ ಕೇಸ್‌ಗೂ ಡಿಸಿಎಂ ಡಿಕೆ ಶಿವಕುಮಾರ್‌ಗೂ (DK Shivakumar) ಸಂಬಂಧವಿಲ್ಲ. ಸೂರಜ್ ರೇವಣ್ಣ ಜೊತೆ ಪೋಟೋ ಇರೋದಕ್ಕೆ ಏನಾಗುತ್ತೆ? ಕುಮಾರಸ್ವಾಮಿ ಜೊತೆಗೂ ಡಿಕೆ ಶಿವಕುಮಾರ್ ಪೋಟೋ ಇದೆ. ಹಾಗಾದ್ರೆ ನಂದು ರೇವಣ್ಣನ ಜೊತೆ ಪೋಟೋ ಇದ್ದರೆ ಅವರನ್ನು ರಕ್ಷಣೆ ಮಾಡುತ್ತೇನೆ ಎಂದು ಅರ್ಥನಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಸ್ಲಿಮರು ಮಾತ್ರ ಹೆಚ್ಚು ಮಕ್ಕಳನ್ನು ಹೊಂದುತ್ತಾರೆಯೇ? ನನಗೂ ಐದು ಜನ ಮಕ್ಕಳು: ಮೋದಿ ವಿರುದ್ಧ ಖರ್ಗೆ ವಾಗ್ದಾಳಿ

ಪೆನ್‌ಡ್ರೈವ್ ಹಿಂದೆ (Pendrive Case) ಡಿಕೆಶಿ ಕೈವಾಡ ಇದೆ ಎನ್ನುವ ಹೆಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾರ್ತಿಕ್ ಯಾರ ಡ್ರೈವರ್? ಪ್ರಜ್ವಲ್ ಡ್ರೈವರ್. ಪೆನ್‌ಡ್ರೈವ್ ಬಿಜೆಪಿ ಮುಖಂಡನ ಕೈಯಲ್ಲಿ ಕೊಟ್ಟಿದ್ದು. ಕುಮಾರಸ್ವಾಮಿ ರಾಜಕೀಯವಾಗಿ ಡಿಕೆಶಿ ಮೇಲೆ ಆರೋಪ ಮಾಡುತ್ತಾರೆ. ಅಮಿತ್ ಶಾ ಅವರಿಗೆ ಗೊತ್ತಿದ್ದರೂ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್‌ಗೆ ಟಿಕೆಟ್ ಯಾಕೆ ಕೊಟ್ಟರು? ಸೆಕ್ಸ್ ಸ್ಕ್ಯಾಂಡಲ್‌ನಲ್ಲಿ ಸಿಲುಕಿಕೊಂಡವನಿಗೆ ಯಾಕೆ ಟಿಕೆಟ್ ಕೊಟ್ಟರು? ಎಸ್‌ಐಟಿಯಿಂದ ಪಾರದರ್ಶಕವಾಗಿ ತನಿಖೆ ಆಗುತ್ತೆ ಎಂದರು. ಇದನ್ನೂ ಓದಿ: 10 ಲಕ್ಷದಲ್ಲಿ ಎಂಟು ಮಂದಿಯಲ್ಲಿ ಮಾತ್ರ ಅಡ್ಡ ಪರಿಣಾಮ: ಕೋವಿಶೀಲ್ಡ್ ಬಗ್ಗೆ ಸ್ಪಷ್ಟನೆ ನೀಡಿದ ICMR ನಿವೃತ್ತ ವಿಜ್ಞಾನಿ

Share This Article