ಜ್ಯೂ.ಎನ್‌ಟಿಆರ್‌ ಸಿನಿಮಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಪೂಜಾ ಹೆಗ್ಡೆ

Public TV
1 Min Read

ಕುಡ್ಲದ ಸುಂದರಿ ಪೂಜಾ ಹೆಗ್ಡೆ ಇತ್ತೀಚೆಗೆ ಬಾಲಿವುಡ್ ನಟ ರೋಹನ್ ಮೆಹ್ರಾ ಜೊತೆಗಿನ ಡೇಟಿಂಗ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಈ ಬೆನ್ನಲ್ಲೇ, ಮತ್ತೆ ಸಿನಿಮಾದ ವಿಚಾರವಾಗಿ ಪೂಜಾ ಹೆಗ್ಡೆ (Pooja Hegde) ಚಾಲ್ತಿಗೆ ಬಂದಿದ್ದಾರೆ. ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ಹೊಸ ಸಿನಿಮಾದಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಲು ರೆಡಿಯಾಗಿದ್ದಾರೆ.

ಜ್ಯೂ.ಎನ್‌ಟಿಆರ್- ಜಾನ್ವಿ ಕಪೂರ್ (Janhvi Kapoor) ನಟನೆಯ ‘ದೇವರ’ (Devara Film) ಸಿನಿಮಾಗೆ ಪೂಜಾ ಹೆಗ್ಡೆ ಎಂಟ್ರಿ ಕೊಡಲಿದ್ದಾರೆ. ನಟಿಸಲು ಅಲ್ಲ, ಬದಲಿಗೆ ತಾರಕ್ ಜೊತೆ ಸ್ಪೆಷಲ್ ಸಾಂಗ್‌ವೊಂದಕ್ಕೆ ಹೆಜ್ಜೆ ಹಾಕಲು ಬರುತ್ತಿದ್ದಾರೆ. ಸೂಪರ್ ಆಗಿರೋ ಐಟಂ ಹಾಡಿಗೆ ನಟಿ ಸೊಂಟ ಬಳುಕಿಸಲಿದ್ದಾರೆ. ಇದನ್ನೂ ಓದಿ:ರಾಜ್ಯದ ಮಗಳು ಮೃತಪಟ್ಟಿದ್ದಾರೆ.. ಯಾಕೆ ನೀವು ಧ್ವನಿ ಎತ್ತುತ್ತಿಲ್ಲ: ಪ್ರಕಾಶ್ ರಾಜ್, ಚೇತನ್ ವಿರುದ್ಧ ಪ್ರಥಮ್ ಕಿಡಿ

ಈಗಾಗಲೇ ‘ದೇವರ’ ಚಿತ್ರತಂಡ ಪೂಜಾಗೆ ಸಂಪರ್ಕಿಸಿದೆ. ಐಟಂ ಸಾಂಗ್ ಬಗ್ಗೆ ಮಾತನಾಡಿ ಆಗಿದೆ. ನಟಿ ಕೂಡ ಓಕೆ ಎಂದಿದ್ದಾರೆ. ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಮಾಹಿತಿ ಬರುವವರೆಗೂ ಕಾಯಬೇಕಿದೆ.

ಅಂದಹಾಗೆ, 2018ರಲ್ಲಿ ‘ಅರವಿಂದ ಸಮೇತ ವೀರ ರಾಘವ’ ಸಿನಿಮಾದಲ್ಲಿ ಜ್ಯೂ.ಎನ್‌ಟಿಆರ್‌ಗೆ ನಾಯಕಿಯಾಗಿ ಪೂಜಾ ನಟಿಸಿದ್ದರು. ಇದೀಗ 2ನೇ ಬಾರಿ ಈ ಹಿಟ್ ಕಾಂಬಿನೇಷನ್ ದೇವರ ಚಿತ್ರದ ಮೂಲಕ ಒಂದಾಗುತ್ತಿದೆ.

Share This Article