ಶ್ರೀದೇವಿ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಜೊತೆ ಜಾನ್ವಿ ಕಪೂರ್ ಟೆಂಪಲ್ ರನ್

By
1 Min Read

ದಿವಂಗತ ಬಾಲಿವುಡ್ ನಟಿ ಶ್ರೀದೇವಿ ಅವರ ಇಂದು (ಆ.13) 61ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಪುತ್ರಿ ಜಾನ್ವಿ ಕಪೂರ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಬಾಯ್‌ಫ್ರೆಂಡ್ ಶಿಖರ್ ಜೊತೆ ತಿರುಪತಿಗೆ ನಟಿ ಭೇಟಿ ನೀಡಿದ್ದಾರೆ. ಇಬ್ಬರ ದೇವಸ್ಥಾನದ ಭೇಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣ ಅದ್ಭುತ ವ್ಯಕ್ತಿ ಎಂದು ಹೊಗಳಿದ ವಿಕ್ಕಿ ಕೌಶಲ್

ಅಮ್ಮನ ಹುಟ್ಟುಹಬ್ಬದಂದು ಬಾಯ್‌ಫ್ರೆಂಡ್ ಶಿಖರ್ ಜೊತೆ ತಿರುಪತಿಗೆ ಭೇಟಿ ನೀಡಿ ಜಾನ್ವಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಕೆಲ ಸಮಯ ದೇವಸ್ಥಾನದಲ್ಲಿ ಕಳೆದಿದ್ದಾರೆ. ತಿಮ್ಮಪ್ಪನ ದರ್ಶನ ಪಡೆಯುವ ಮೂಲಕ ಅಮ್ಮನ ಹುಟ್ಟುಹಬ್ಬವನ್ನು ನಟಿ ಸೆಲೆಬ್ರೇಟ್ ಮಾಡಿದ್ದಾರೆ. ಸದ್ಯ ಜಾನ್ವಿ ಕಪೂರ್ ಮತ್ತು ಶಿಖರ್ ಜೊತೆಯಾಗಿ ಕಾಣಿಸಿಕೊಂಡಿರೋದು ಮತ್ತೆ ಚರ್ಚೆಗೆ ಗ್ರಾಸವಾಗಿದೆ.

 

View this post on Instagram

 

A post shared by Janhvi Kapoor (@janhvikapoor)

ಇತ್ತ ಅಗಲಿದ ಪತ್ನಿ ಶ್ರೀದೇವಿರನ್ನು ನೆನೆದು, ‘ಹ್ಯಾಪಿ ಬರ್ತ್‌ಡೇ ಮೈ ಜಾನ್’ ಎಂದು ಬೋನಿ ಕಪೂರ್ ಭಾವುಕವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಡೇಟಿಂಗ್ ರಿಯಾಲಿಟಿ ಶೋನಲ್ಲಿ ವಿನ್ನರ್ ಆದ ‘ಬಿಗ್ ಬಾಸ್’ ಖ್ಯಾತಿಯ ಜಶ್ವಂತ್

ಅಂದಹಾಗೆ, ಇತ್ತೀಚೆಗೆ ಜ್ಯೂ.ಎನ್‌ಟಿಆರ್ ಜೊತೆಗಿನ ‘ದೇವರ’ ಸಿನಿಮಾದ ಸಾಂಗ್ ರಿಲೀಸ್ ಆಗಿ ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದುಕೊಂಡಿತ್ತು. ಜಾನ್ವಿ ಮತ್ತು ತಾರಕ್ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

Share This Article